ಬೆಂಗಳೂರಲ್ಲಿ ನಿಗೂಢ ಸ್ಪೋಟ : ಹಲವು ಮನೆಗಳು ಧ್ವಂಸ, ಬಾಲಕ ಸಾವು

Bangaluru LPG cylinder Blast : ಬೆಂಗಳೂರು : ಆಗಸ್ಟ್ 15 ರಂದು ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿ ಇರುವ ಚಿನ್ನಯ್ಯಪಾಳ್ಯದಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಪ್ರಾಥಮಿಕ ತನಿಖೆಯಲ್ಲಿ ಇದು ಸಿಲಿಂಡರ್ ಸ್ಫೋಟ ಎಂದು ಶಂಕಿಸಲಾಗಿದೆ.

ಸಿಲಿಕಾನ್‌ ಸಿಟಿಯಲ್ಲಿ ನಿಗೂಢ ಸ್ಪೋಟ ಸಂಭವಿಸಿದ್ದು, ಕನಿಷ್ಠ ಹತ್ತು ಮನೆಗಳು ಧ್ವಂಸವಾಗಿದೆ. ದುರಂತರದಲ್ಲಿ ಬಾಲಕನೋರ್ವ ಸಾವನ್ನಪ್ಪಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ.

ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಬಳಿಯಲ್ಲಿ ಇಂದು ಬೆಳಗ್ಗೆಯೇ ಸಿಲಿಂಡರ್‌ ಸ್ಪೋಟ ಸಂಭವಿಸಿದೆ. ತಿಮ್ಮರಾಜು ಎಂಬವರ ಮನೆಯಲ್ಲಿ ಈ ಸ್ಪೋಟ ಸಂಭವಿಸಿದೆ ಎನ್ನಲಾಗುತ್ತಿದೆ. ಸಿಲಿಂಡರ್‌ ಸ್ಪೋಟದಿಂದ 10ಕ್ಕೂ ಅಧಿಕ ಮನೆಗಳು ಧ್ವಂಸವಾಗಿದೆ.

ಘಟನೆಯಲ್ಲಿ ಮುಬಾರಕ್‌ (10 ವರ್ಷ) ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಅಲ್ಲದೇ ಗೋಡೆ ಮೈಮೇಲೆ ಬಿದ್ದು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಇದನ್ನೂ ಓದಿ : ಗಣೇಶ ಚತುರ್ಥಿಗೆ ಡಿಜೆ ಬ್ಯಾನ್‌, ಸರಕಾರದಿಂದ ಹೊಸ ರೂಲ್ಸ್‌

ಸ್ಪೋಟಕ್ಕೆ ಬೆಚ್ಚಿ ಬಿದ್ದ ವಿಲ್ಸನ್‌ ಗಾರ್ಡನ್‌

ಇಂದು ಬೆಳ್ಳಂಬೆಳಗ್ಗೆಯೇ ನಡೆದಿರುವ ಸ್ಪೋಟದಿಂದಾಗಿ ವಿಲ್ಸನ್‌ ಗಾರ್ಡನ್‌ ಜನರು ಬೆಚ್ಚಿ ಬಿದ್ದಿದ್ದಾರೆ. ಸಿಲಿಂಡರ್‌ ಸ್ಪೋಟ ಸಂಭವಿಸಿದೆ ಎನ್ನಲಾಗುತ್ತಿದ್ದರೂ ಕೂಡ ಮೇಲ್ನೋಟಕ್ಕೆ ಇದು ಸಿಲಿಂಡರ್‌ ಸ್ಪೋಟ ಅಲ್ಲಾ ಅನ್ನೋದು ಕಂಡು ಬರ್ತಾ ಇದೆ. ಹತ್ತಕ್ಕೂ ಅಧಿಕ ಮನೆಗಳು ಸ್ಪೋಟಗೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಎನ್‌ಡಿಆರ್‌ಎಫ್‌ ತಂಡದಿಂದ ಕಾರ್ಯಾಚರಣೆ

ವಿಲ್ಸನ್‌ ಗಾರ್ಡನ್‌ನ ಘಟನಾ ಸ್ಥಳಕ್ಕೆ ಈಗಾಗಲೇ ಎನ್‌ಡಿಆರ್‌ಎಫ್‌ ತಂಡ ಭೇಟಿ ನೀಡಿದ್ದು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಹತ್ತಕ್ಕೂ ಅಧಿಕ ಮನೆಗಳು ಧ್ವಂಸವಾಗಿರುವ ಹಿನ್ನೆಲೆಯಲ್ಲಿ ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ. ಬೆಳಗಿನಿಂದಲೇ ಅವಶೇಷಗಳ ತೆರವು ಕಾರ್ಯಾಚರಣೆಯನ್ನು ಎನ್‌ಡಿಆರ್‌ಎಫ್‌ ತಂಡ ನಡೆಸುತ್ತಿದೆ.

ಏನಿದು ನಿಗೂಢ ಸ್ಪೋಟ ?

ಸಿಲಿಂಡರ್‌ ಸ್ಪೋಟ ಘಟನೆಗೆ ಕಾರಣ ಎನ್ನಲಾಗುತ್ತಿದ್ದರೂ ಕೂಡ ಸ್ಪೋಟದ ತೀವ್ರತೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಮನೆಯಲ್ಲಿ ಸ್ಪೋಟಕಗಳನ್ನು ಸಂಗ್ರಹಿಸಿದ್ದರಾ ? ಸ್ಪೋಟಕಗಳಿಂದಲೇ ಈ ಕೃತ್ಯ ನಡೆದಿದ್ಯಾ ಅನ್ನೋ ಬಗ್ಗೆಯೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಸುನಿಲ್‌ ಕುಮಾರ್‌ ವಿರುದ್ದದ ಮುತಾಲಿಕ್‌ ಮಾನನಷ್ಟ ಮೊಕದ್ದಮೆ ವಜಾ

ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳಿಗಾಗಿ ತನಿಖೆ ಮುಂದುವರೆದಿದೆ.

Bangaluru Wilson Garden LPG cylinder Blast one death 12 injured Kannada news

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories