ಜಾತಿಗಣತಿ : ಹಳ್ಳಿಕಾರ ಜೊತೆ ಕುಲ ಜಾತಿ ಸೇರಿಸಬೇಡಿ : ಕೆಎಂ ನಾಗರಾಜಣ್ಣ

Karnataka Caste Survey : ಚಿಕ್ಕಮಗಳೂರು : ಸೆಪ್ಟಂಬರ್ 22ರಂದು ಆರಂಭವಾಗುವ ಜನಗಣತಿಯಲ್ಲಿ ಹಳ್ಳಿಕಾರ ಎಂದು ಬರೆಸಿ ಯಾವುದೇ ಕಾರಣದಿಂದ ಹಿಂದೆ ಮುಂದೆ ಕುಲ ಜಾತಿಗಳನ್ನು ಸೇರಿಸಬೇಡಿ ಎಂದು ಕರ್ನಾಟಕ ರಾಜ್ಯ ಹಳ್ಳಿಕಾರರ ಸಂಘದ ಉಪಾಧ್ಯಕ್ಷರಾದ ಕೆ.ಎಂ.ನಾಗರಾಜಣ್ಣ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರು ನಗರದ ಕೋಟೆಯಲ್ಲಿರುವ ನ್ಯೂ ಬ್ರೈಟ್ ಫ್ಯೂಚರ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಶುಕ್ರವಾರ ನಡೆದ ರಾಜ್ಯ ಹಳ್ಳಿ ಕಾರರ ಸಂಘ, ಆರ್.ಎಂ‌.ಆರ್. ಹಳ್ಳಿಕಾರ ಫೌಂಡೇಶನ್ ಟ್ರಸ್ಟ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಹಳ್ಳಿಕಾರ ಯುವಕರ ಸಂಘದ ವತಿಯಿಂದ ಜನಗಣತಿಯಲ್ಲಿ ಜನಾಂಗದವರು ವಹಿಸಬೇಕಾದ ಎಚ್ಚರಿಕೆ ಬಗ್ಗೆ ಮಾತನಾಡಿದರು.

Karnataka Caste Survey Hallikar Demand

ಜನಗಣತಿ ಮಾಡುವವರು ಬಂದಾಗ ಕೇಳುವ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಸತ್ಯವಾದ ಮಾಹಿತಿ ನೀಡಿ, ದಾಖಲಾದ ಮಾಹಿತಿಯನ್ನು ತಕ್ಷಣ ಪರಿಶೀಲಿಸಿ, ಜನಾಂಗ ಹಿಂದುಳಿದರಿಂದ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವುದು ಅನಿವಾರ್ಯ ನಮಗಿದೆ. ನಮ್ಮ ಬದುಕಿನ ಪರಿಸ್ಥಿತಿ ಸರ್ಕಾರದ ಗಮನಕ್ಕೆ ತಂದು ಪ್ರವರ್ಗ -1 ಸೇರಿಸುವಂತೆ ಒತ್ತಡ ಹಾಕಬೇಕಿದೆ ಎಂದರು.

Karnataka Caste Survey : ಹಳ್ಳಿಕಾರ ಸಮುದಾಯಕ್ಕೆ ಸುವರ್ಣಾವಕಾಶ

ಜಿಲ್ಲಾ ಹಳ್ಳಿಕಾರ ಯುವಕರ ಸಂಘದ ಅಧ್ಯಕ್ಷ ಕೋಟೆ ಸೋಮಣ್ಣ ಮಾತನಾಡಿ ಸಮಾಜದ ಹಂಚಿನಲ್ಲಿರುವ ಎಲ್ಲಾ ವರ್ಗದವರಿಗೂ ಸಮಾನ ಅವಕಾಶಗಳನ್ನು ಒದಗಿಸುವುದು ಮತ್ತು ಅವರಿಗೆ ನ್ಯಾಯ ಒದಗಿಸುವುದು ಮೀಸಲಾತಿಯ ಉದ್ದೇಶ ಎಂದಿದ್ದಾರೆ.

ನಮ್ಮ ಹಳ್ಳಿಕಾರ ಸಮುದಾಯ ಪಶು ಸಂಗೋಪನೆಯ ಮೂಲ ಕಸುಬಾಗಿರುವುದರಿಂದ ಮೀಸಲಾತಿ ಸಿಕ್ಕಿದ್ದೇ ಆದರೆ ನಮ್ಮ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಗುರುತಿಸಿಕೊಳ್ಳಲು ಒಂದೊಳ್ಳೆಯ ಸುವರ್ಣವಕಾಶ ಆಗಿದೆ.

Karnataka Caste Survey Hallikar Demand

ಇದನ್ನೂ ಓದಿ : ಜಾತಿ ಸಮೀಕ್ಷೆ : ಹೊಸ ಜಾತಿಯ ನಾಮಕರಣ ಬೇಡ : ಸುನಿಲ್‌ ಕುಮಾರ್‌ ಮನವಿ

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಿಸಲು ಪೋಷಕರು ಕಷ್ಟಪಡುವುದು ಮತ್ತು ನಂತರ ದಿನಗಳಲ್ಲಿ ಉದ್ಯೋಗಕ್ಕಾಗಿ ಹೋರಾಟ ಮಾಡುವುದು ತಪ್ಪಿಸುವಂತಾಗುತ್ತದೆ ಎಂದರು.

ರಾಜ್ಯ ಕಾರ್ಯದರ್ಶಿಗಳು ಶ್ರೀನಿವಾಸ್ ಮೂರ್ತಿ, ನಿರ್ದೇಶಕರಾದ ಮಹಾಲಿಂಗಯ್ಯ, ಮಾರುತಿ, ನಾಗರಾಜ್, ಸಿ.ಎಚ್.ಶ್ರೀನಿವಾಸ್ ಜಿಲ್ಲಾ ಘಟಕದ : ಶುಭಾಷ್, ಶಿವಪ್ರಕಾಶ್, ವೆಂಕಟೇಶ್, ರಘು ಬಾಲಯ್ಯ, ಬಿ.ಎಸ್.ಬಸವರಾಜ್, ದ್ವಾರಕೇಶ್, ಬೆಟ್ಟಿಗೌಡ್ರು, ಸುರೇಶ್, ನಂಜುಂಡಣ್ಣ, ಕುಮಾರಣ್ಣ, ಹಾಗೂ ನೂರಾರು ಹಳ್ಳಿಕಾರ ಕುಲ ಬಾಂಧವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಧರ್ಮಸ್ಥಳ ಸೌಜನ್ಯ ಮನೆಗೆ ಬಿವೈ ವಿಜಯೇಂದ್ರ ಭೇಟಿ : ಕೇಸರಿ ಪಾಳಯದಲ್ಲಿ ಮೊಳಗಿದ ಅಸಮಾಧಾನ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories