ಜಾತಿಗಣತಿ ಸಮೀಕ್ಷೆ, ಹೊಸ ಜಾತಿಯ ನಾಮಕರಣ ಬೇಡ : ಸುನಿಲ್ ಕುಮಾರ್

ಬೆಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ( caste survey karnataka ) ಯಲ್ಲಿ ಹೊಸ ಜಾತಿಗಳ ನಾಮಕರಣ ಬೇಡ. ಈಗಾಗಲೇ ಪ್ರಕಟ ಮಾಡಿರುವ 1400 ಜಾತಿಗಳಲ್ಲಿ 107 ಹಿಂದೂ ಉಪ ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಎಂದು ಸೇರಿಸಿದ್ದಾರೆ. ಈ ಜಾತಿಗಳು ಯಾವುದೇ ಜಾತಿ ಪಟ್ಟಿಯಲ್ಲಿಲ್ಲ, ನೀವು ಟ್ಯಾಗ್‌ಲೈನ್ ಕೊಡಬೇಡಿ ಎಂದು ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಸುನಿಲ್ ಕುಮಾರ್ ಅವರ ನೇತೃತ್ವದ ಬಿಜೆಪಿ ನಿಯೋಗ ಇಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ, ಜಾತಿಗಣತಿ ಸಮೀಕ್ಷೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ.
ಹಿಂದುಳಿದ ವರ್ಗಗಳ ಆಯೋಗ ಮತ್ತೊಂದು ಸಮೀಕ್ಷೆಗೆ ಮುಂದಾಗಿದೆ. ನಾವು ನಮ್ಮ ಹಾಗೂ ಜನರ ಮನದಲ್ಲಿ ಇರುವ ಅನುಮಾನ, ಗೊಂದಲಗಳನ್ನು ತಿಳಿಸಿದ್ದೇವೆ ಎಂದು ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ..
ಒತ್ತಡಕ್ಕೆ ಒಳಗಾಗಿ ಹದಿನೈದು ದಿನಗಳಲ್ಲಿ ಸಮೀಕ್ಷೆ ಬೇಡ ಎಂದು ತಿಳಿಸಿದ್ದೇವೆ. ದಸರಾ ಸಂದರ್ಭದ ಬದಲು ಮುಂದಿನ ಬೇಸಿಗೆಯಲ್ಲಿ ಸಮೀಕ್ಷೆ ಮಾಡಿ ಅಂತಾನೂ ಮನವಿ ಮಾಡಿದ್ದೇವೆ. ಆಯೋಗ ಜಾತಿಗಳ ಪಟ್ಟಿ ಪ್ರಕಟಿಸಿದೆ, ಹೊಸ ಜಾತಿಗಳನ್ನು ಪಟ್ಟಿಯಲ್ಲಿ ಸೇರಿಸಿರೋದು ಸರಿಯಲ್ಲ ಎಂದಿದ್ದಾರೆ.

ಜಾತಿಗಳ ಹೊಸ ನಾಮಕರಣ ಬೇಡ
ಆಯೋಗ ಪ್ರಕಟ ಮಾಡಿರುವ 1400 ಜಾತಿಗಳಲ್ಲಿ 107 ಹಿಂದೂ ಉಪ ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಎಂದು ಸೇರಿಸಿದ್ದಾರೆ. ಬ್ರಾಹ್ಮಣ ಕ್ರಿಶ್ವಿಯನ್, ಕುರುಬ ಕ್ರಿಶ್ವಿಯನ್ , ಮಡಿವಾಳ ಕ್ರಿಶ್ವಿಯನ್ ಹೀಗೆ 107 ಉಪ ಜಾತಿಗಳನ್ನು ಗುರುತಿಸಲಾಗಿದೆ. ಹೀಗೆ ಮಾಡುವುದು ಸರಿಯಲ್ಲ. ನೀವು ಟ್ಯಾಗ್‌ಲೈನ್ ಕೊಡಬೇಡಿ ಎಂದಿದ್ದಾರೆ.
ಇದನ್ನೂ ಓದಿ : ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಅಧಿಕಾರಿಗಳ ನೇಮಕ, ಸರಕಾರದ ಆದೇಶ
ಹಿಂದೂ ಉಪಜಾತಿಗಳಿಗೆ ಮುಸ್ಲಿಂ, ಕ್ರಿಸ್ಚಿಯನ್ ಹೆಸರು ಸೇರಿಸಿ ಹೊಸ ನಾಮಕರಣ ಮಾಡಿರೋದು ಸರಿಯಲ್ಲ. ಇದನ್ನು ಕೈಬಿಡಲು ಮನವಿ ಮಾಡಿದ್ದೇವೆ. ಕುರುಬ ಕ್ರಿಶ್ಚಿಯನ್ ಒಕ್ಕಲಿಗ ಕ್ರಿಶ್ಚಿಯನ್ ಎಂದು ಸೇರಿಸಿದ್ದಾರೆ. ಇದು ಪರೋಕ್ಷವಾಗಿ ಮತಾಂತರಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದ್ದಾರೆ.

ಸಮೀಕ್ಷೆ ಮಾಡಿದ ಮನೆಗಳಿಗೆ ಸ್ವೀಕೃತ ಪತ್ರ ಕೊಡುವಂತೆ ತಿಳಿಸಿದ್ದೇವೆ. ಸುಮಾರು 1400 ಜಾತಿಗಳ ಪಟ್ಟಿಯನ್ನು ಪ್ರವರ್ಗವಾರು, ವರ್ಣಮಾಲೆ ಅನ್ವಯ ವಿಂಗಡಣೆ ಮಾಡಲು ಮನವಿ ಮಾಡಿದ್ದೇವೆ. ಆಯೋಗ ಹದಿನೈದು ದಿನಗಳಲ್ಲೇ ಸಮೀಕ್ಷೆ ಮಾಡಲು ಹಟ ತೊಟ್ಟಂತೆ ಕಾಣುತ್ತಿದೆ.
ಇದನ್ನೂ ಓದಿ : ಜಾತಿ ಸಮೀಕ್ಷೆ, ಕೈಬಿಟ್ಟ ಜಾತಿಗಳ ಸೇರ್ಪಡೆಗೆ ಕಾಲವಕಾಶ
ಸರಕಾರ ನಡೆಸುತ್ತಿರುವ ಸಮೀಕ್ಷೆಗೂ ಕಾಂತರಾಜು ವರದಿಯ ಗತಿ ಬರಬಾರದು ಅನ್ನೋದು ನಮ್ಮ ಮನವಿ. ಆದರೆ ಆಯೋಗ ಸಮೀಕ್ಷೆಯ ವರದಿಯನ್ನು ಹದಿನೈದು ದಿನಗಳಲ್ಲಿ ಬಿಡುಗಡೆ ಮಾಡುವ ತರಾತುರಿಯಲ್ಲಿದೆ. ಹೀಗೆ ಮಾಡಿ ನಾಳೆ ಮತ್ತೊಂದು ಜನಾಂದೋಲನಕ್ಕೆ ಕಾರಣ ಆಗಬಾರದು ಎಂದಿದ್ದಾರೆ.
caste survey karnataka Backward classes commission president meet Karkala MLA Sunil Kumar and BJP Team



