Christmas Fruit Cake Recipe:ಮೊಟ್ಟೆ ,ವೈನ್‌ ಬಳಸದೆ ಸುಲಭದಲ್ಲಿ ತಯಾರಿಸಿ ಪ್ರೂಟ್ ಕೇಕ್‌

(Christmas Fruit Cake Recipe)ಕ್ರೀಸ್‌ ಮಸ್‌ ಹಬ್ಬ ಹತ್ತಿರ ಬರುತ್ತಿದ್ದ ಹಾಗೆ ಬೇಕರಿಗಳಲ್ಲಿ ಹಲವು ಬಗೆಯ ಕೇಕ್‌ ಗಳನ್ನು ಮಾಡುತ್ತಾರೆ. ಹಲವರ ಮನೆಯಲ್ಲಿ ಕ್ರೀಸ್‌ ಮಸ್‌ ಹಬ್ಬದ ತಯಾರಿಗಳು ಜೊರಾಗಿ ಇರುತ್ತದೆ. ಹಲವು ಬಗೆಯ ಸ್ವೀಟ್‌, ಕೇಕ್‌ ಗಳನ್ನು ಬೆಕರಿಯಿಂದ ಕೊಂಡು ತರುತ್ತಾರೆ. ಕೆಲವರು ಮನೆಯಲ್ಲಿಯೇ ಸ್ವೀಟ್‌, ಕೇಕ್‌ ಗಳನ್ನು ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಕೇಕ್‌ ಮಾಡುಲು ಮೊಟ್ಟೆ ಬಳಕೆ ಮಾಡುತ್ತಾರೆ. ವಿಶೇಷವಾಗಿ ಕ್ರಿಸ್‌ ಮಸ್‌ ಹಬ್ಬ ಸಂದರ್ಭದಲ್ಲಿ ವೈನ್‌ ಬಳಸಿ ಪ್ರೂಟ್ ಕೇಕ್‌ ಗಳನ್ನು ಮಾಡುತ್ತಾರೆ. ಮೊಟ್ಟೆ , ವೈನ್‌ ನಿಂದ ಮಾಡಿದ ಕೇಕ್‌ ತಿನ್ನಲು ಬಯಸದವರು ಮನೆಯಲ್ಲಿಯೇ ಪ್ರೂಟ್ ಕೇಕ್‌ ಮಾಡಬಹುದು. ಈ ಪ್ರೂಟ್‌ ಕೇಕ್‌ ಹೇಗೆ ಮಾಡುವುದು ಎಂಬ ಮಾಹಿತಿ ತಿಳಿಯೋಣ.

(Christmas Fruit Cake Recipe)ಬೇಕಾಗುವ ಸಾಮಾಗ್ರಿಗಳು:

  • ಒಣ ದ್ರಾಕ್ಷಿ
  • ಟುಟ್ಟಿ ಫ್ರೂಟಿ
  • ಬ್ಲೂ ಬೆರಿ
  • ಅಂಜೂರ ಹಣ್ಣು
  • ಏಪ್ರಿಕಾಟ್‌ ಹಣ್ಣು
  • ದ್ರಾಕ್ಷಿ ಜ್ಯೂಸ್‌
  • ಬೆಣ್ಣೆ
  • ಕಂದು ಸಕ್ಕರೆ
  • ಎಣ್ಣೆ
  • ಮೊಸರು
  • ಮೈದಾ
  • ಬಾದಾಮಿ ಪುಡಿ
  • ಬೇಕಿಂಗ್‌ ಸೋಡಾ
  • ಉಪ್ಪು
  • ಲವಂಗ ಪುಡಿ
  • ದಾಲ್ಚಿನ್ನಿ ಪುಡಿ
  • ಪಿಸ್ತಾ
  • ಚೆರಿ ಹಣ್ಣು
  • ಬಾದಾಮಿ


ಮಾಡುವ ವಿಧಾನ
ಬೌಲ್‌ ನಲ್ಲಿ ನೂರು ಗ್ರಾಂ ಒಣ ದ್ರಾಕ್ಷಿ, ಐವತ್ತು ಗ್ರಾಂ ಟುಟ್ಟಿ ಫ್ರೂಟಿ, ಇನ್ನೂರು ಗ್ರಾಂ ಬ್ಲೂ ಬೆರಿ , ನೂರು ಗ್ರಾಂ ಅಂಜೂರ ಹಣ್ಣು, ಐವತ್ತು ಗ್ರಾಂ ಏಪ್ರಿಕಾಟ್‌, ಇನ್ನೂರು ಮಿಲಿಲೀಟರ್‌ ನಷ್ಟು ಕಪ್ಪು ದ್ರಾಕ್ಷಿ ಜ್ಯೂಸ್‌ ಹಾಕಿಕೊಂಡು( ಕಪ್ಪು ದ್ರಾಕ್ಷಿಯನ್ನು ಮಿಕ್ಸಿ ಜಾರಿಯಲ್ಲಿ ಹಾಕಿ ಜ್ಯೂಸ್‌ ತಯಾರಿಸಿಕೊಳ್ಳಿ) ಚೆನ್ನಾಗಿ ಮಿಶ್ರಣ ಮಾಡಿಕೊಂಡು ಒಂದು ಡಬ್ಬಿಯಲ್ಲಿ ಹಾಕಿ ಮುಚ್ಚಿ ಎಂಟಗಂಟೆ ಹಾಗೆ ಇಡಬೇಕು. ನಂತರ ಮತ್ತೆ ಚಮಚ ಆಡಿಸುತ್ತಾ ಮಿಶ್ರಣ ಮಾಡಿಕೊಂಡು, ಮತ್ತೊಂದು ಬೌಲ್‌ ನಲ್ಲಿ 250 ಗ್ರಾಂ ಬೆಣ್ಣೆ, 300 ಗ್ರಾಂ ಕಂದು ಸಕ್ಕರೆ ಮಿಶ್ರಣ ಮಾಡಿ ಅದನ್ನು ಮಿಕ್ಸಿ ಜಾರಿಯಲ್ಲಿ ಹಾಕಿ ಕ್ರೀಮ್‌ ಹದಕ್ಕೆ ಬರುವವರೆಗೆ ರುಬ್ಬಿಕೊಂಡು ಸಣ್ಣ ಲೋಟದ ಅರ್ಧದಷ್ಟು ಎಣ್ಣೆ ಹಾಕಬೇಕು , 130 ಗ್ರಾಂ ಮೊಸರು,ಹಾಕಿ ಮತ್ತೆ ರುಬ್ಬಿಕೊಂಡು ಬೌಲ್‌ ಗೆ ಹಾಕಬೇಕು ನಂತರ 300 ಗ್ರಾಂ ಮೈದಾ ಹಾಕಿ, ೫೦ ಗ್ರಾಂ ಬಾದಾಮಿ ಪುಡಿ , ಕಾಲು ಚಮಚ ಬೇಕಿಂಗ್‌ ಸೋಡಾ , ಅರ್ಧ ಚಮಚ ಉಪ್ಪು, ಅರ್ಧ ಚಮಚ ಲವಂಗ ಪುಡಿ,ಅರ್ಧ ಚಮಚ ದಾಲ್ಚಿನ್ನಿ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ದ್ರಾಕ್ಷಿ ಜ್ಯೂಸ್‌ ನಲ್ಲಿ ನೆನಸಿಟ್ಟ ಡ್ರೈ ಪ್ರೂರ್ಟ್ಸ್‌ ಹಾಕಿ, ಎರಡು ಚಮಚ ಪಿಸ್ತಾ, ಎರಡು ಚಮಚ ಚೆರಿ ಹಣ್ಣು, ಎರಡು ಚಮಚ ಬಾದಾಮಿ ( ಎಲ್ಲವನ್ನು ಕಟ್‌ ಮಾಡಿಕೊಂಡು ಹಾಕಬೇಕು) ಹಾಕಿ ಮಿಶ್ರಣ ಮಾಡಬೇಕು. ನಂತರ ಕೆಕ್‌ ಟಿನ್‌ ನಲ್ಲಿ ಕೇಕ್‌ ಪ್ಲೆಟ್‌ ಇಟ್ಟುಕೊಂಡು ಬೌಲ್‌ ನಲ್ಲಿ ಇರುವ ಕೇಕ್‌ ಮಿಶ್ರಣ ವನ್ನು ಅದಕ್ಕೆ ಹಾಕಬೇಕು. ನಂತರ ಅದನ್ನು ಓವನ್‌ ನಲ್ಲಿಇಟ್ಟು 160 ಡಿಗ್ರಿ ಹೀಟ್‌ ನಲ್ಲಿ ಒಂದು ವರೆ ಗಂಟೆ ಇಡಬೇಕು. ಸರಿಯಾಗಿ ಬೆಂದಿರುವುದನ್ನು ನೋಡಲು ಗೊಬಿ ಕಡ್ಡಿಯನ್ನು ಅದಕ್ಕೆ ಚುಚ್ಚಿ, ಕೇಕ್‌ ಆ ಕಡ್ಡಿಗೆ ಅಂಟದಿದ್ದರೆ ಕೇಕ್‌ ಬೆಂದಿದೆ ಎಂದರ್ಥ.

ಇದನ್ನೂ ಓದಿ:Crab Sukka Recipe:ಆಹಾ ರುಚಿಯಾದ ಏಡಿ ಸುಕ್ಕಾ (Crab Sukka ) ಒಮ್ಮೆ ಟ್ರೈ ಮಾಡಿ

ಇದನ್ನೂ ಓದಿ:Banana Stem Recipe:ದೇಹದ ಹಲವು ಸಮಸ್ಯೆ ನಿವಾರಣೆ ಮಾಡುವ ಬಾಳೆ ದಿಂಡಿನ ದೋಸೆ

ಬಾಣಲೆಯಲ್ಲಿ ಎರಡು ಚಮಚ ಕತ್ತರಿಸಿಕೊಂಡ ಚೆರಿ , ಕಾಲು ಕಪ್‌ ಸಕ್ಕರೆ, ಒಂದು ಕಪ್‌ ನೀರು ಹಾಕಿ ಕಾಯಿಸಿಕೊಳ್ಳಬೇಕು. ಕೇಕ್‌ ಗೆ ಗೊಬಿ ಸ್ಟಿಕ್‌ ನಲ್ಲಿ ಚುಚ್ಚಿ ಕೊಳ್ಳಬೇಕು ನಂತರ ಅದರ ಮೇಲೆ ಬಾಣಲೆಯಲ್ಲಿ ಕಾಯಿಸಿಕೊಂಡ ಚೆರಿ ,ಸಕ್ಕರೆಯ ಮಿಶ್ರಣ ಹಾಕಬೇಕು ನಂತರ ಇದನ್ನು ಕತ್ತರಿಸಿಕೊಂಡರೆ ರುಚಿಯಾಗಿ ಸವಿಯಲು ಪ್ರೂಟ್ ಕೇಕ್‌ ರೆಡಿ.

Christmas Fruit Cake Recipe Fruit cake is easily prepare the without using eggs and wine

Comments are closed.