Cooling Drinks : ದೇಹಕ್ಕೆ ತಂಪೆರೆಯುವ ತಂಪು ಪಾನೀಯಗಳು: ಈ ತಂಪು ಪಾನೀಯಗಳಿಂದ ಬಿಸಿಲಿನ ಬೇಗೆಯನ್ನು ಶಮನಗೊಳಿಸಿಕೊಳ್ಳಿ

ಬೇಸಿಗೆ ಶುರುವಾಗಿದೆ. ಸಹಜವಾಗಿಯೇ ನಾವು ನೀರು ಮತ್ತು ತಂಪು ಪಾನೀಯಗಳ(Cooling Drinks) ಮೊರೆ ಹೋಗುತ್ತಿದ್ದೇವೆ. ಈ ಋತು ದೇಹವನ್ನು ಶುದ್ಧಿಕರಿಸಲು ಒಳ್ಳೆಯ ಅವಕಾಶವಾಗಿದೆ ಮತ್ತು ನಮ್ಮ ಸ್ವಾಸ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಸಿಹಿ ಪದಾರ್ಥಗಳು, ಸಾಫ್ಟ್‌ ಡ್ರಿಂಕ್ಸ್‌, ಜ್ಯೂಸ್‌ ಮತ್ತು ಐಸ್‌ ಕ್ರೀಮ್‌ ಇವೆಲ್ಲವುಗಳು ದೇಹ ತೂಕ ಹೆಚ್ಚಿಸಿ , ಮಧುಮೇಹಗಳಂತಹ ದೀರ್ಘಕಾಲದ ರೋಗಗಳಲ್ಲಿ ಕೊನೆಗಾಣುವಂತೆ ಮಾಡುತ್ತದೆ. ಅತಿಯಾದ ಕಾರ್ಬೋನೇಟ್‌ ಅಂಶವಿರುವ ಪಾನೀಯಗಳನ್ನು ಸೇವಿಸಿವುದು ಬಾಯಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಇನ್ನು ಸಾಫ್ಟ್‌ ಡ್ರಿಂಕ್ಸ್‌ಗಳಿಂದ ಕಿಡ್ನಿ ಮತ್ತು ಹೃದಯಕ್ಕೆ ಅಪಾಯವಿದೆ.

ಯಾವುದೇ ರೀತಿಯ ದೈಹಿಕ ತೊಂದರೆಗಳನ್ನು ದೂರವಿರಲು ನೀವು ಒಂದ ಉತ್ತಮ ದಾರಿ ಹುಡುಕಬಹುದು. ಅದೇನೆಂದರೆ ಮನೆಯಲ್ಲಿಯೇ ತಯಾರಿಸಿದ ಪಾನೀಯಗಳನ್ನು ಸೇವಿಸುವುದು. ಆಯಾ ಋತುಗಳಲ್ಲಿ ಬಿಡುವ ಹಣ್ಣುಗಳು, ಗಿಡಮೂಲೆಕೆಗಳು, ಮತ್ತು ಮಸಾಲೆಗಳಲ್ಲಿಯೇ ತಂಪಾಗಿಸುವ ಗುಣಗಳಿರುತ್ತವೆ. ಅದರಿಂದ ದೇಹಕ್ಕೆ ಉಲ್ಲಾಸವನ್ನು ಹೆಚ್ಚಿಸುವ ಪಾನೀಯಗಳನ್ನು ತಯಾರಿಸಿ ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಬಹುದು. ನಾವು ಅಂತಹ ಕೆಲವು ಪಾನೀಯಗಳನ್ನು ಹೇಳುತ್ತೇವೆ. ನೀವೂ ಮನೆಯಲ್ಲಿ ಟ್ರೈ ಮಾಡಿ. ಈ ಬೇಸಿಗೆಯನ್ನು ಅತ್ಯಂತ ಉಲ್ಲಾಸದಿಂದ ಕಳೆಯಿರಿ.

  • ಸೋಂಪಿನ ಕಾಳಿನ ಶರಬತ್ತು
    ಒಂದು ಪಾತ್ರೆ ತೆಗೆದುಕೊಳ್ಳಿ, ಅದಕ್ಕೆ 2 ಚಮಚ ಸೋಂಪಿನ ಕಾಳಿನ ಪುಡಿ ಹಾಕಿ, ರುಚಿಗೆ ತಕ್ಕಷ್ಟು ಸಕ್ಕರೆ (ಮಿಶ್ರಿ ಸಕ್ಕರೆ ಉತ್ತಮ) ಸೇರಿಸಿ. 2 ಗ್ಲಾಸ್‌ ನೀರು ಸೇರಿಸಿ, ಚೆನ್ನಾಗಿ ಕಲುಕಿ. ಸೋಂಪಿನ ಕಾಳಿನ ಶರಬತ್ತು ರೆಡಿ.
  • ಶಕ್ತಿ ಕೊಡುವ ಹುರಿಗಡಲೆ ಪಾನೀಯ
    ಬೇಸಿಗೆಗೆ ಅತೀ ಹೆಚ್ಚಿನ ತಂಪು ನೀಡುವ ಮತ್ತು ಅತಿ ಸುಲಭವಾಗಿ ಜೀರ್ಣವಾಗಬಲ್ಲ ಅಧಿಕ ಪ್ರೋಟೀನ್‌ ಅಂಶ ಹೊಂದಿರುವ ಪಾನೀಯವೆಂದರೆ ಹುರಿಗಡಲೆ ಶರಬತ್ತು ಎಂದು ಫಿಟ್ನೆಸ್‌ ತಜ್ಞರೂ ಸಹ ಹೇಳುವ ಜನಪ್ರಿಯ ಆಯ್ಕೆಯಾಗಿದೆ. ಗ್ಲಾಸ್‌ ನೀರಿಗೆ ಒಂದು ಚಮಚ ಹುರಿಗಡಲೆ ಪೌಡರ್‌ ಹಾಕಿ. ಅದಕ್ಕೆ ಹುರಿದ ಜೀರಾ ಹಾಕಿ. ಅದಕ್ಕೆ ಚಿಟಿಕೆ ಪಿಂಕ್‌ ಸಾಲ್ಟ್‌ ಮತ್ತು ಬೆಲ್ಲ ಸೇರಿಸಿ. ಸುಲಭದ ಹುರಿಗಡಲೆ ಪಾನೀಯ ಕುಡಿಯಿರಿ.
  • ಪುದೀನಾ ಶರಬತ್ತು
    2 ರಿಂದ 3 ಗ್ಲಾಸ್‌ ನೀರು ತೆಗೆದುಕೊಂಡು ಒಂದು ಹಿಡಿ ಪುದೀನಾ, ಸಕ್ಕರೆ ಮತ್ತು ರಾಕ್‌ ಸಾಲ್ಟ್‌ ಸೇರಿಸಿ ನುಣ್ಣಗೆ ರುಬ್ಬಿ ಸೋಸಿಕೊಳ್ಳಿ. ಅದಕ್ಕೆ ಲಿಂಬು ರಸ ಸೇರಿಸಿ ಚೆನ್ನಾಗಿ ಕಲುಕಿ. ಅತ್ಯಂತ ರುಚಿಕರವಾದ ಪುದೀನ ಶರಬತ್ತು ರೆಡಿ.
  • ಗುಲ್ಕಂದ್‌
    ಒಂದು ಗ್ಲಾಸ್‌ ಹಾಲಿಗೆ ಒಂದು ಚಮಚ ಗುಲ್ಕಂದ್‌ ಸೇರಿಸಿ ಚೆನ್ನಾಗಿ ಕಲುಕಿ. ನಿಮ್ಮ ಕುಟುಂಬದವರ ಜೊತೆ ಗುಲ್ಕಂದ್‌ ಸವಿಯಿರಿ.
  • ಬಿಲ್ವ (ಬೇಲ)ದ ಶರಬತ್ತು
    ಬೇಲದ ಹಣ್ಣು ತೆಗೆದುಕೊಳ್ಳಿ. ಅದರ ತಿರುಳು ತೆಗೆಯಿರಿ. 20 ನಿಮಿಷಗಳವರೆಗೆ ಒಂದು ಗ್ಲಾಸ್‌ ನೀರಿನಲ್ಲಿ ನೆನೆಸಿಡಿ. ತಿರುಳನ್ನು ಮ್ಯಾಶ್‌ ಮಾಡಿ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ, ಹುರಿದ ಜೀರಿಗೆ, ಏಲಕ್ಕಿ ಪುಡಿ, ಬ್ಲಾಕ್‌ ಸಾಲ್ಟ್‌ ಹಾಕಿ ಚೆನ್ನಾಗಿ ಕಲುಕಿ. ಬೇಲದ ಹಣ್ಣಿನ ಶರಬತ್ತು ಸವಿಯಿರಿ.
  • ಕೋಕಮ್‌ (ಪುನರ್ಪುಳಿ) ಶರಬತ್ತು
    ಕೋಕಮ್‌ ಅಥವಾ ಪುನರ್ಪುಳಿ ಹಣ್ಣು ತೆಗೆದುಕೊಳ್ಳಿ. ಅದನ್ನು ಕತ್ತರಿಸಿ, ಅದರಲ್ಲಿಯ ಬೀಜಗಳನ್ನು ಬೇರ್ಪಡಿಸಿ. ನಂತರ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಕಲ್ಲು ಸಕ್ಕರೆ ಸೇರಿಸಿ. ಜೀರಿಗೆ ಪುಡಿ ಮತ್ತು ಎಲಕ್ಕಿ ಪುಡಿ ಹಾಕಿ, ಅದಕ್ಕೆ ನೀರು ಸೇರಿಸಿ, ಶರಬತ್ತ ತಯಾರಿಸಿ. ಕೋಕಮ್‌ ಶರಬತ್ತನ್ನು ಸವಿಯಿರಿ.
  • ಕಬ್ಬಿನ ಹಾಲು
    ಬೇಸಿಗೆ ಬಿಸಿಲಿಗೆ ಶಕ್ತಿ ವರ್ಧಕ ಮತ್ತು ಬಾಯಾರಿಕೆ ನೀಗಿಸಲು ಕಬ್ಬಿನ ಹಾಲು ಒಂದು ಉತ್ತಮ ಪಾನೀಯ. ಆಗಾಗ ಕಬ್ಬಿನ ಹಾಲು ಕುಡಿಯುತ್ತಿರಿ, ದೇಹಕ್ಕೆ ಉಲ್ಲಾಸವನ್ನು ತುಂಬುತ್ತದೆ.
  • ಎಳನೀರು
    ಅತ್ಯಂತ ಬೇಗನೆ ದೇಹಕ್ಕೆ ಚೈತನ್ಯ ಒದಗಿಸುವ ಬೆಸ್ಟ್‌ ಡ್ರಿಂಕ್‌ ಎಂದರೆ ಎಳನೀರು. ಇದನ್ನು ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು. ಆದರೆ ಬೆಳಿಗ್ಗೆ ಸೇವಿಸುವುದರಿಂದ ದಿನಪೂರ್ತಿ ಉಲ್ಲಾಸದಿಂದ ಇರಬಹುದು.

ಇದನ್ನೂ ಓದಿ : Coconut Water Benefits : ದೇಹ ಜೀವ ಎರಡಕ್ಕೂ ಆಧಾರ ಎಳನೀರು; ಹೊಸವರ್ಷದ ಮೊದಲ ದಿನ ಒಂದು ಬೊಂಡ ಹೀರಿಬಿಡೋಣ

ಇದನ್ನೂ ಓದಿ : Watermelon : ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳೇನು ಎಂಬುದು ಗೊತ್ತೇ?

(Cooling Drinks Best natural cooling drinks to beat the heat)

Comments are closed.