Avarekalu Palav Recipe : ಸುಲಭವಾಗಿ ಮಾಡಿ ಅವರೆಕಾಳು ಪಲಾವ್‌

ಪ್ರತಿದಿನ ಬೆಳಿಗ್ಗೆ ಹೊತ್ತಿನ ತಿಂಡಿಗೆ ಏನು ಮಾಡುವುದು ಎನ್ನುವ ಗೊಂದಲ ಪ್ರತಿ ಮನೆಯಲ್ಲೂ ಸಾಮಾನ್ಯವಾಗಿರುತ್ತದೆ. ದಿನ ಮಾಡಿದ ತಿಂಡಿಯನ್ನೇ ಮಾಡಿದರೆ ಮನೆಯಲ್ಲಿ ತಿನ್ನುವುದಿಲ್ಲ. ಹಾಗಾಗಿ ಅಡುಗೆ ಮಾಡುವ ಗೃಹಿಣಿಗೆ ಪ್ರತಿದಿನ ತಿಂಡಿತಿನಿಸು ಮಾಡುವುದು ತಲೆನೋವಿನ ಸಂಗತಿಯಾಗಿರುತ್ತದೆ. ಪಲಾವ್‌ ಒಂದು ಆರೋಗ್ಯಕರವಾದ ತಿಂಡಿ ಯಾಕೆಂದರೆ ಅದರಲ್ಲಿ ಹೆಚ್ಚಿನ ತರಕಾರಿಗಳನ್ನು ಬಳಸಿ ಮಾಡುತ್ತಾರೆ. ಪಲಾವ್‌ವನ್ನು ತುಂಬಾ ರೀತಿಯಲ್ಲಿ ಮಾಡುತ್ತಾರೆ. ಅದರಲ್ಲಿ ಅವರೆಕಾಳು ಪಲಾವ್‌ (Avarekalu Palav Recipe) ಮಾಡುವುದು ಹೇಗೆ ಎಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಅವರೆಕಾಳು
  • ಬಿನ್ಸ್‌
  • ಕ್ಯಾರೆಟ್‌
  • ಆಲೂಗಡ್ಡೆ
  • ಈರುಳ್ಳಿ
  • ಟೊಮೊಟೊ
  • ಕೊತ್ತಂಬರಿ ಸೊಪ್ಪು
  • ಹಸಿಮೆಣಸು
  • ಕಾಳುಮೆಣಸು
  • ಪುದಿನಸೊಪ್ಪು
  • ಗರಂ ಮಸಾಲ ಚಕ್ಕೆ
  • ಅಕ್ಕಿ
  • ಶುಂಠಿ
  • ಬೆಳ್ಳುಳ್ಳಿ

(Avarekalu Palav Recipe)ತಯಾರಿಸುವ ವಿಧಾನ :
ಮೊದಲಿಗೆ ಪಲಾವ್‌ಗೆ ಬೇಕಾಗುವ ಮಸಾಲವನ್ನು ಮಾಡಿಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿ ಸೊಪ್ಪು ಒಂದು ಕಟ್‌, ಪುದಿನ ಸೊಪ್ಪು ಒಂದು ಹಿಡಿ, ಒಂದು ಸಣ್ಣ ಈರುಳ್ಳಿ, ಒಂದು ಟೊಮೊಟೊ, ಎರಡು ಹಿಡಿ ಬೆಳ್ಳುಳ್ಳಿ, ಒಂದು ಇಂಚು ಶುಂಠಿ, ಐದು ಹಸಿಮೆಣಸು, ಗರಂ ಮಸಾಲ ಚಕ್ಕೆ ಸ್ವಲ್ಪ, ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬಿಕೊಳ್ಳಬೇಕು.

ಆಮೇಲೆ ಕುಕ್ಕರ್‌ಗೆ ಆರು ಟೇಬಲ್‌ ಸ್ಪೂನ್‌ ಅಡುಗೆ ಎಣ್ಣೆ ಹಾಕಿ ಅದು ಬಿಸಿ ಆದಮೇಲೆ ಅದಕ್ಕೆ ಕಾಲು ಸ್ಪೂನ್‌ನಷ್ಟು ಸಾಸಿವೆ, ಜೀರಿಗೆ ಹಾಕಬೇಕು. ನಂತರ ಪಲಾವ್‌ ಎಲೆ, ಒಂದು ತುಂಡು ಗರಂ ಮಸಾಲ ಚಕ್ಕೆ ಹಾಕಿ ಆದಮೇಲೆ ಕಟ್‌ ಮಾಡಿ ಇಟ್ಟುಕೊಂಡ ಎರಡು ಈರುಳ್ಳಿಯನ್ನು ಹಾಕಿ ಎರಡು ನಿಮಿಷಗಳ ಕಾಲ ಹುರಿದುಕೊಳ್ಳಬೇಕು. ಆಮೇಲೆ ಮೊದಲೇ ಕಟ್‌ ಮಾಡಿ ಇಟ್ಟುಕೊಂಡ(ಒಂದು ಕೆಜಿ ಅಕ್ಕಿಗೆ ಬೇಕಾಗುವಷ್ಟು) ಬಿನ್ಸ್‌, ಕ್ಯಾರೆಟ್, ಆಲೂಗಡ್ಡೆ, ಟೊಮೊಟೊವನ್ನು ಹಾಕಿ ಪ್ರೈ ಮಾಡಿಕೊಳ್ಳಬೇಕು. ಆಮೇಲೆ ನೆನೆಸಿ ಸ್ವಚ್ಚ ಮಾಡಿ ಇಟ್ಟುಕೊಂಡ ಒಂದು ಬೌಲ್‌ ಅವರೆಕಾಳನ್ನು ಹಾಕಬೇಕು. ಅದಕ್ಕೆ ರುಬ್ಬಿ ರೆಡಿ ಮಾಡಿ ಇಟ್ಟುಕೊಂಡ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ನಂತರ ತೊಳೆದು ಇಟ್ಟುಕೊಂಡ ಅಕ್ಕಿಯನ್ನು ಹಾಕಿ ಒಂದು ಕಪ್‌ ನೀರನ್ನು ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿ ಕುಕ್ಕರ್‌ ಮುಚ್ಚಳವನ್ನು ಮುಚ್ಚಿ ಒಂದು ಸೀಟಿ ತೆಗೆದು ಗ್ಯಾಸ್‌ನ್ನು ಆಫ್‌ ಮಾಡಿದರೆ ಸಾಕಾಗುತ್ತದೆ. ಕುಕ್ಕರ್‌ ಸೀಟಿ ತಣ್ಣಗೆ ಆದ ಮೇಲೆ ಓಪನ್‌ ಮಾಡಿದರೆ ಅವರೆಕಾಳು ಪಲಾವ್‌ ರೆಡಿಯಾಗಿರುತ್ತದೆ. ಇದನ್ನು ಮೊಸರು ಬಜ್ಜಿ ಜೊತೆ ಸವಿಯಲು ತುಂಬಾ ಚೆನ್ನಾಗಿ ಇರುತ್ತದೆ.

ಇದನ್ನೂ ಓದಿ : Chicken Green Masala Recipe : ಮನೆಯಲ್ಲೇ ಮಾಡಿ ಸ್ಪೇಶನ್‌ ಚಿಕನ್‌ ಗ್ರೀನ್‌ ಮಸಾಲ

ಇದನ್ನೂ ಓದಿ : Katta Mitta : ಬಾಯಲ್ಲಿ ನೀರೂರಿಸುತ್ತೆ ಹುಣಸೆ ಹಣ್ಣಿನ “ಕಟ್ಟಾ ಮಿಟ್ಟಾ”

ಇದನ್ನೂ ಓದಿ : Mushroom Biryani Recipe : ನೀವು ಸಸ್ಯಹಾರಿಗಳೇ ? ಬಿರಿಯಾನಿ ತಿನ್ನಲು ಆಸೆಯೇ ? ಮನೆಯಲ್ಲೇ ಮಾಡಿ ಮಶ್ರೂಮ್‌ ಬಿರಿಯಾನಿ

ಇನ್ನೂ ಅವರೆಕಾಳನ್ನು ಬಳಸಿ ಕಾಳು ಸಾರು ಮಾಡುತ್ತಾರೆ. ಹಾಗೆ ಅವರೆಕಾಳು ಉಪ್ಪಿಟ್ಟನ್ನು ಮಾಡುತ್ತಾರೆ. ಹೆಚ್ಚಿನ ಅಡುಗೆಯಲ್ಲಿ ಬಟಾಣಿಯನ್ನು ಬಳಸಿ ಮಾಡುತ್ತಾರೆ. ಅದರ ಬದಲೂ ಅವರೆಕಾಳು ಸಿಕ್ಕಿದ್ದರೆ ಇದನ್ನು ಕೂಡ ಬಳಸಿ ಮಾಡಬಹುದು.

Easy to make Avarekalu Palav Recipe

Comments are closed.