ಗಣೇಶ ಚೌತಿಗೆ ಮನೆಯಲ್ಲಿ ಮಾಡಿ ಕಡಲೇ ಬೆಳೆ ಹೋಳಿಗೆ

ಹಬ್ಬ ಹರಿದಿನಗಳಲ್ಲಿ ಅದು ಕರ್ನಾಟಕದಲ್ಲಿ ಹೋಳಿಗೆನೆ ಸ್ಪೆಷಲ್‌ ಸಿಹಿ.‌ ಮನೆ ಮಂದಿಯೆಲ್ಲಾ ಇಷ್ಟ ಪಟ್ಟುತ್ತಿನ್ನುವ ಈ ಹೋಳಿಗೆಗೆ ಸ್ವಪ ತುಪ್ಪ ಬೆರೆಸಿದರಂತೂ ಮುಗಿದೇ ಹೋಯಿತು. ಹೋಳಿಗೆ ಕಾಲಿ ಆದದ್ದೇ ತಿಳಿಯುವುದಿಲ್ಲ. ಈ ರುಚಿಕರವಾದ ಹೋಳಿಗೆಯನ್ನು ಸುಲಭವಾಗಿ ಮಾಡಲು ನಾವು ಇವತ್ತು ನಿಮಗೆ ಹೇಳಿಕೊಡ್ತೀವಿ.

ಕಡಲೇಬೇಳೆ ಹೋಳಿಗೆ ಮಾಡಲು ಬೇಕಾಗುವ ಸಾಮಾಗ್ರಿಗಳು: ಕಡಲೇಬೇಳೆ – 2 ಕಪ್, ಮೈದಾ – 1 ಕಪ್, ಸಕ್ಕರೆ – 2 ಕಪ್, ಏಲಕ್ಕಿ 3 ರಿಂದ 4 ಇವಿಷ್ಟನ್ನು ಮೊದಲೇ ರೆಡಿಮಾಡಿ ಇಟ್ಟು ಕೊಂಡರೆ ಉತ್ತಮ.

ಇದನ್ನೂ ಓದಿ: ಒಮ್ಮೆ ಈ ವೆಜ್ ಬಿರಿಯಾನಿ ತಿಂದ್ರೆ ಮತ್ತೆ ಮತ್ತೆ ಮಾಡದೆ ಬಿಡಲ್ಲ

ಮಾಡುವ ವಿಧಾನ : ಮೊದಲಿಗೆ ಕಡಲೇಬೇಳೆಯನ್ನು ಒಂದು ಪಾತ್ರೆಗೆ ನೀರು ಹಾಕಿ ಚೆನ್ನಾಗಿ ಬೇಯಿಸಿ. ಇನ್ನು ಕನಕ ರೆಡಿ ಮಾಡಿಕೊಳ್ಳಿ. ಒಂದು ಪಾತ್ರೆಗೆ 2 ಸ್ಪೂನ್ ನಷ್ಟು ಸಕ್ಕರೆ ಹಾಕಿ ಬಳಿಕ ಸ್ವಲ್ಪ ನೀರು ಹಾಕಿ ಸಕ್ಕರೆ ಕರಗಿಸಿ. ನಂತರ ಮೈದಾ ಹಾಕಿ ನೀರು ಹಾಕಿ ಮಿಕ್ಸ್ ಮಾಡಿ. ಚಪಾತಿ ಹದದಷ್ಟು ಗಟ್ಟಿ ಬೇಡ. ಕೈಯಲ್ಲಿ ಅಂಟುವ ರೀತಿ ಇರಲಿ. ಬಳಿಕ ಸ್ವಲ್ಪ ಎಣ್ಣೆ ಹಾಕಿ ತಿರುವಿ. ಪಾತ್ರೆಯನ್ನು ಹಾಗೆಯೇ ಇಟ್ಟು ಮುಚ್ಚಿಡಿ. 2 ಗಂಟೆಗಳ ಕಾಲ ಹಾಗೆಯೇ ಇಡಿ.

ಕಡಲೇಬೇಳೆ ಸರಿಯಾಗಿ ಬೆಂದ ಬಳಿಕ ಸೋಸಿ ತೆಗೆಯಿರಿ. 2 ಕಪ್ ಕಡಲೇಬೇಳೆಗೆ 2 ಕಪ್ ಸಕ್ಕರೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಸಕ್ಕರೆ ಕರಗಿದ ಮೇಲೆ ಸ್ಟೌ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿ 5 ರಿಂದ 10 ನಿಮಿಷ ಕುದಿಸಿ. ಸ್ವಲ್ಪ ಬಿಸಿಯಿದ್ದಾಗಲೇ ಈ ಮಿಶ್ರಣವನ್ನು ರುಬ್ಬಿಕೊಳ್ಳಿ. ಜೊತೆಗೆ ಏಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಿ.

ಇದನ್ನೂ ಓದಿ: Carrot Halwa : ಕ್ಯಾರೆಟ್ ಹಲ್ವಾ ತಟ್ಟನೇ ಮನೆಯಲ್ಲೇ ಮಾಡಬಹುದು

ಮಿಕ್ಸಿ ಬದಲು ಗ್ರೈಂಡರ್ ನಲ್ಲಿ ರುಬ್ಬಿದರೆ ಒಳ್ಳೆಯದು.. ಬಳಿಕ ಹೂರಣವನ್ನು ಉಂಡೆ ಮಾಡಿಟ್ಟುಕೊಳ್ಳಿ. ಬಳಿಕ ರೆಡಿ ಮಾಡಿರೋ ಮೈದಾ ಹಿಟ್ಟಿನ ಕನಕವನ್ನು ಉಂಡೆಯಂತೆ ತೆಗೆದುಕೊಳ್ಳಿ. ಬಳಿಕ ಚಪಾತಿ ಮಣೆಯಲ್ಲಿ ಹಿಟ್ಟು ಹಾಕಿ ಕನಕ ಕ್ಕೆ ಹೂರಣದ ಉಂಡೆ ಸೇರಿಸಿ ಮೆಲ್ಲನೆ ಲಟ್ಟಿಸಿ. ಬಳಿಕ ಸ್ಟೌವ್ ಮೇಲೆ ಇಟ್ಟ ಕಾವಲಿಗೆ ಹಾಕಿ ಸರಿಯಾಗಿ ಎರಡೂ ಕಡೆ ಬೇಯಿಸಿದರೆ ಕಡಲೇಬೇಳೆಹೋಳಿಗೆ ಸವಿಯಲು ಸಿದ್ಧ.

( Kadalebele Holige Recipe)

Comments are closed.