Karkala : ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಮಹಿಳೆ ಸಾವು !

ಕಾರ್ಕಳ : ಹಲ್ಲುಜ್ಜುವ ಪೇಸ್ಟ್‌ ಎಂದು ತಪ್ಪಾಗಿ ತಿಳಿದು ಇಲಿ ಪಾಷಾಣದಿಂದ ಹಲ್ಲುಜ್ಜಿದ ವೃದ್ದ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಕಾಬೆಟ್ಟು ಎಂಬಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿ ಕಲಾವತಿ (61 ವರ್ಷ) ಎಂಬವರೇ ಮೃತಪಟ್ಟ ದುರ್ದೈವಿ. ಅಗಸ್ಟ್‌ 20 ರಂದು ಬೆಳಗ್ಗೆ ಎದ್ದ ಕೂಡಲೇ ಕಲಾವತಿ ಪೇಸ್ಟ್‌ ಹಾಕಿಕೊಂಡು ಹಲ್ಲು ಉಜ್ಜಿದ್ದಾರೆ. ನಂತರದಲ್ಲಿ ಹಲ್ಲುಜ್ಜಲು ಬಳಸಿದ್ದು ಟೂಥ್‌ ಪೇಸ್ಟ್‌ ಅಲ್ಲಾ, ಇಲಿ ಪಾಷಾಣ ಅನ್ನೋದು ಅರಿವಿಗೆ ಬಂದಿತ್ತು. ಆದರೆ ಎರಡು ದಿನಗಳ ಬಳಿಕ ಕಲಾವತಿ ಅಸ್ವಸ್ಥಗೊಂಡಿದ್ದರು.

ಕೂಡಲೇ ಅವರನ್ನು ಕಾರ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಲಾವತಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಬೋಲ್ಟ್‌ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ : ಮಂಗಳೂರಲ್ಲಿ ವ್ಯಕ್ತಿಯ ಬಂಧನ

ಇದನ್ನೂ ಓದಿ : ಕೇರಳಕ್ಕೆ ಶ್ರೀಲಂಕಾ ಉಗ್ರರು ನುಸುಳಿರುವ ಶಂಕೆ : ಕರಾವಳಿಯಾದ್ಯಂತ ಹೈ ಅಲರ್ಟ್‌

(Udupi : Karkala Women dies in Tooth Poison )

Comments are closed.