ಚಿಕನ್ ಚಾಪ್ಸ್ ಮಂಡ್ಯದಲ್ಲಿ ತುಂಬಾನೇ ಫೇಮಸ್. ಚಿಕನ್ ಚಾಪ್ಸ್ ನೋಡೊಕೇ ತಿಳಿ ಸಾರಿನ ರೀತಿ ಕಂಡ್ರು ಕೂಡ ಇದರ ಟೇಸ್ಟ್ ಮಾತ್ರ ಸೂಪರ್ ಆಗಿರುತ್ತೆ. ಅದರಲ್ಲೂ ರಾಗಿ ಮುದ್ದೇ ಜೊತೆ ಚಿಕನ್ ಚಾಪ್ಸ್ ಇದ್ರೇ ಕೇಳೊದೇ ಬೇಡ. ಪ್ಲೇಟ್ ಖಾಲಿ ಆಗಿದ್ದು ಗೊತ್ತೇ ಆಗಲ್ಲಾ. ಈ ಚಿಕನ್ ಚಾಪ್ಸ್ ಯಾವ ರೀತಿ ತರಾರಿ ಮಾಡಬೇಕು ಅನ್ನೋದನ್ನು ಹೇಳಿಕೊಡ್ತೇವೆ ಕೇಳಿ.
ಚಿಕನ್ ಚಾಪ್ಸ್ ತಯಾರಿಸಲು ಬೇಕಾಗುವ ಪದಾರ್ಥಗಳು : ಚಿಕನ್ 1 ಕೆಜಿ, ಈರುಳ್ಳಿ 4, ಬೆಳ್ಳುಳ್ಳಿ 4 ಎಸಳು, ಹಸಿಮೆಣಸಿನಕಾಯಿ 2, ಮೊಸರು 1 ಕಪ್, ಗರಂ ಮಸಾಲ 1 ಚಮಚ, ತೆಂಗಿನ ತುರಿ ಕಾಲು ಕಪ್, ಸ್ವಲ್ಪ ಶುಂಠಿ, ಸಾಸಿವೆ ಅರ್ಧ ಚಮಚ, ಅರಿಶಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು.
ಇದನ್ನೂ ಓದಿ: Chicken Sukka : ಬಾಯಲ್ಲಿ ನೀರೂರಿಸುವ ಚಿಕನ್ ಸುಕ್ಕ ರೆಸಿಪಿ : ಒಮ್ಮೆ ಟ್ರೈ ಮಾಡಿ
ಚಿಕನ್ ಚಾಪ್ಸ್ ಮಾಡುವ ವಿಧಾನ : ಚಿಕನ್ ಅನ್ನು ತುಂಡು ತುಂಡಾಗಿ ಕತ್ತರಿಸಿ ತೊಳೆಯಿರಿ. ತೆಂಗಿನ ತುರಿ, ಖಾರದಪುಡಿ, ಅರಿಶಿನ ಪುಡಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ರುಬ್ಬಿ ಆ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಮಿಶ್ರಣ ಮಾಡಿ 1 ಗಂಟೆ ಕಾಲ ಇರಿಸಿ. ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆಯನ್ನು ಸುರಿದು ಆ ಎಣ್ಣೆಯು ಬಿಸಿಯಾದಾಗ ಸಾಸಿವೆ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ.
ಈರುಳ್ಳಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಆ ನಂತರ ಮಸಾಲೆಯಲ್ಲಿ ಮಿಶ್ರಣ ಮಾಡಿರುವ ಚಿಕನ್ ಹಾಕಿ ಮೂರ್ನಾಲ್ಕು ನಿಮಿಷ ಸೌಟ್ ನಿಂದ ಆಡಿಸಿ, ಬಳಿಕ ಮೊಸರು ಹಾಕಿ ಗರಂ ಮಸಾಲ ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ಆ ಪಾಕವು ಗ್ರೇವಿ ರೀತಿಗೆ ಬಂದ ನಂತರ ಉರಿಯಿಂದ ಕೆಳಗಿಳಿಸಿದರೆ ರುಚಿಕರ ಎನಿಸುತ್ತದೆ. ಅಗತ್ಯ ಎನಿಸಿದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಚಿಕನ್ ಚಾಪ್ಸ್ ಸವಿಯಲು ಸಿದ್ಧ.
ಇದನ್ನೂ ಓದಿ; ಕರಾವಳಿಗರ ಫೇವರೆಟ್ ಬಂಗುಡೆ ಫ್ರೈ : ತಯಾರಿಸುವುದು ಬಲು ಸುಲಭ̈
(Taste village style chicken chops)
Comments are closed.