kaju katli :ದುಬಾರಿ ಬೆಲೆಯ ಕಾಜು ಕಟ್ಲಿ ಮನೆಯಲ್ಲೇ ತಯಾರಿಸಿಕೊಳ್ಳಿ

(kaju katli)ಹಲವಾರು ಸಿಹಿತಿನಿಸುಗಳಲ್ಲಿ ದುಬಾರಿ ಬೆಲೆಯ ಸಿಹಿ ತಿನಿಸು ಕಾಜು ಕಟ್ಲಿ. ಕೆಲವರಿಗಂತು ಕಾಜು ಕಟ್ಲಿಯನ್ನು ಅಂಗಡಿಗಳಿಂದ ಖರೀದಿಸಿ ತಿನ್ನುವುದು ಅಸಾಧ್ಯದ ಮಾತು.ಆದರು ಕೂಡ ಮನೆಯಲ್ಲಿ ಗೊಡಂಬಿ ಇದ್ದರೆ ಕಾಜುಕಟ್ಲಿಯನ್ನು ತಯಾರಿಸಿಕೊಳ್ಳುವುದು ಸುಲಭ.ಹೆಚ್ಚು ಹಣವನ್ನು ಖರ್ಚು ಮಾಡಿ ಅಂಗಡಿಗಳಿಂದ ಕಾಜು ಕಟ್ಲಿಯನ್ನು ಖರೀದಿ ಮಾಡುವ ಬದಲು ಮನೆಯಲ್ಲಿಯೇ ಕಾಜು ಕಟ್ಲಿಯನ್ನು ತಯಾರಿಸಿಕೊಳ್ಳಬಹುದು. ಇದನ್ನು ಮಾಡುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

(kaju katli)ಬೇಕಾಗುವ ಸಾಮಾಗ್ರಿಗಳು:
ಗೊಡಂಬಿ
ಸಕ್ಕರೆ
ನೀರು
ತುಪ್ಪ

ಮಾಡುವ ವಿಧಾನ:
ಮೊದಲು ಮಿಕ್ಸಿ ಜಾರಿಯಲ್ಲಿ ಗೊಡಂಬಿಯನ್ನು ಪುಡಿಮಾಡಿಕೊಂಡು ಗಾಳಿಸಿಕೊಳ್ಳಬೇಕು. ಗಾಳಿಸಿಕೊಂಡ ಗೊಡಂಬಿ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿ ಇಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಸಕ್ಕರೆ, ನೀರನ್ನು ಹಾಕಿ ಸಕ್ಕರೆ ಕರಗುವ ವರೆಗೆ ಕಾಯಿಸಿಕೊಳ್ಳಬೇಕು.ಅನಂತರ ಅದಕ್ಕೆ ಪುಡಿಮಾಡಿಟ್ಟುಕೊಂಡ ಗೊಡಂಬಿಯನ್ನು ಹಾಕಿ ಸ್ವಲ್ಪ ದಪ್ಪ ಹದ ಬರುತ್ತಿದ್ದ ಹಾಗೆ ತುಪ್ಪವನ್ನು ಹಾಕಿ 15 ನಿಮಿಷ ಕಾಯಿಸಬೇಕು. ಅನಂತರ ಚಪಾತಿ ಲಟ್ಟಿಸುವ ಮಣೆಗೆ ತುಪ್ಪವನ್ನು ಸವರಿ ಕಾಯಿಸಿಕೊಂಡ ಗೊಡಂಬಿ ದಪ್ಪ ಹದವನ್ನು ಅಗಲವಾಗಿ ನಾದಿಕೊಂಡು ಅದನ್ನು ಕತ್ತರಿಸಿದರೆ ಸಿಹಿ ಅಂಗಡಿಯಲ್ಲಿ ಖರೀದಿಸುವಂತಹ ಕಾಜು ಕಟ್ಲಿಯನ್ನು ಮನೆಯಲ್ಲೇ ತಿನ್ನಬಹುದು.

ಪೇರಳೆ ಹಣ್ಣಿನ ಕೇಸರಿಬಾತ್(ಸಿಬೆಹಣ್ಣು)

ಬೇಕಾಗುವ ಸಾಮಾಗ್ರಿಗಳು :
ಪೇರಳೆಹಣ್ಣು(ಸೀಬೆ)
ಸಣ್ಣ ರವೆ( ಬಾಂಬೆ ರವೆ)
ಡ್ರೈ ಫ್ರೂಟ್ಸ್‌
ಸಕ್ಕರೆ
ನೀರು
ತುಪ್ಪ
ಕಲರ್‌ ಪೌಡರ್(ಬೇಕಾದಲ್ಲಿ)

ಇದನ್ನೂ ಓದಿ:Instagram ಪರಿಚಯಿಸಿದ ಹೊಸ ವೈಶಿಷ್ಟ್ಯಗಳು ನಿಮಗೆ ಗೊತ್ತಾ; ಈಗ ರೀಲ್ಸ್‌ ಮಾಡುವುದು ಇನ್ನೂ ಸುಲಭ

ಇದನ್ನೂ ಓದಿ:Honor killing : ಮರ್ಯಾದಾ ಹತ್ಯೆ : ಅನ್ಯ ಜಾತಿ ಯುವಕನೊಂದಿಗೆ ಪ್ರೀತಿ : ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಂದೆ

ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಪೇರಳೆಹಣ್ಣನ್ನು ಬೆಯಿಸಿಕೊಳ್ಳಬೇಕು.ಪೇರಳೆ ಹಣ್ಣಿನ ಒಳಗೆ ಇರುವ ಭಾಗವನ್ನು ತೆಗೆದುಕೊಂಡು ಸಿಪ್ಪೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು.ನಂತರ ರುಬ್ಬಿಕೊಂಡ ಪೇರಳೆ ಹಣ್ಣನ್ನು ಬಾಣಲೆಗೆ ಹಾಕಿ ಸ್ವಲ್ಪ ಬೆಯಿಸಿಕೊಂಡು ನೀರನ್ನು ಬೆರೆಸಿಕೊಳ್ಳಬೇಕು. ಅನಂತರ ಅದಕ್ಕೆ ಸಣ್ಣ ರವೆ ಮತ್ತು ಡ್ರೈ ಫ್ರೂಟ್ಸ್‌ ಹಾಕಿಕೊಂಡು ಸೌಟನ್ನು ಆಡಿಸಬೇಕು. ಅದಕ್ಕೆ ಸಕ್ಕರೆಯನ್ನು ಬೇರೆಸಿಕೊಂಡು ಸೌಟನ್ನು ಆಡಿಸಿದರೆ ಸಿಹಿಪ್ರಿಯರಿಗೆ ಪೇರಳೆ ಹಣ್ಣಿನ ಕೇಸರಿಬಾತ್‌ ಸವಿಯಲು ರೆಡಿ. ಹಣ್ಣಾಗಿರುವುದರಿಂದ ಆರೋಗ್ಯಕ್ಕೂ ಕೂಡ ಉತ್ತಮವಾಗಿರುತ್ತದೆ.

How to prepare expensive kaju katli at home

Comments are closed.