Instagram ಪರಿಚಯಿಸಿದ ಹೊಸ ವೈಶಿಷ್ಟ್ಯಗಳು ನಿಮಗೆ ಗೊತ್ತಾ; ಈಗ ರೀಲ್ಸ್‌ ಮಾಡುವುದು ಇನ್ನೂ ಸುಲಭ

ಫೋಟೊ/ವಿಡಿಯೋಗಳನ್ನು ಶೇರ್‌ ಮಾಡಲು ಅತಿ ಹೆಚ್ಚು ಜನರು ಬಳಸುವ ಜನಪ್ರಿಯ ಸೋಷಿಯಲ್‌ ಮೀಡಿಯಾ ಎಂದರೆ ಇನ್ಸ್ಟಾಗ್ರಾಮ್‌ (Instagram). ಮೆಟಾ (Meta) ದ ಒಡೆತನದಲ್ಲಿರುವ ಇನ್ಸ್ಟಾಗ್ರಾಮ್‌ ಶಾರ್ಟ್‌ ವಿಡಿಯೋಗಳನ್ನು ರಚಿಸಲು ಅವಕಾಶ ನೀಡುತ್ತದೆ. ಅದಕ್ಕೆ ಹೊಸ ಹೊಸ ವೈಶಿಷ್ಟ್ಯಗಳನ್ನು ಆಗಾಗ ಸೇರಿಸುತ್ತಲೇ ಇರುತ್ತದೆ. ಈಗ ಇನ್ಸ್ಟಾಗ್ರಾಮ್‌ ಶಾರ್ಟ್‌ ವಿಡಿಯೋ (Reels) ರಚಿಸಲು ಎರಡು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಹೊಸದಾಗಿ ಬದಲಾವಣೆ ಮಾಡಿದ ಮತ್ತು ಸೇರ್ಪಡೆಗೊಳಿಸಿದ ವೈಶಿಷ್ಟ್ಯಗಳು ಏನು? ಆ ವೈಶಿಷ್ಟ್ಯಗಳನ್ನು ಬಳಸುವುದು ಹೇಗೆ ಇಲ್ಲಿದೆ ಓದಿ.

ಇನ್ಸ್ಟಾಗ್ರಾಮ್‌ ಹೊಸದಾಗಿ ಪರಿಚಯಿಸಿದ ಎರಡು ವೈಶಿಷ್ಟ್ಯಗಳೆಂದರೆ ಇನ್ಸ್ಟಾಗ್ರಾಮ್‌ ಪೋಸ್ಟ್‌ಗಳನ್ನು ಶೆಡ್ಯೂಲ್‌ ಮಾಡುವುದು ಮತ್ತು ಅಚೀವ್‌ಮೆಂಟ್ಸ್‌.

  1. ಪೋಸ್ಟ್‌ಗಳನ್ನು ಶೆಡ್ಯೂಲ್‌ ಮಾಡುವುದು (Schedule posts on Instagram): ಹೊಸ ವೈಶಿಷ್ಟ್ಯವು ನೀವು ರಚಿಸಿದ ರೀಲ್‌, ಫೋಟೋಗಳನ್ನು ಪೋಸ್ಟ್‌ ಅಂದರೆ ಶೇರ್‌ ಮಾಡುವ ಮೊದಲು ಅದನ್ನು ಶೆಡ್ಯೂಲ್‌ ಮಾಡಬಹುದಾಗಿದೆ. ಶೆಡ್ಯೂಲ್ ಅನ್ನು 75 ದಿನಗಳವರೆಗೆ ಮಾಡಬಹುದಾಗಿದೆ. ಒಮ್ಮೆ ಪೋಸ್ಟ್‌ ರಚಿಸಿದ ನಂತರ (ಶೇರ್‌ ಮಾಡುವ ಮೊದಲು) ಅಡ್ವಾನ್ಸ್‌ ಸೆಟ್ಟಿಂಗ್ಸ್‌ ಅನ್ನು ಟ್ಯಾಪ್‌ ಮಾಡುವುದರ ಮೂಲಕ ಶೆಡ್ಯೂಲ್‌ ಮಾಡಬಹುದಾಗಿದೆ. ಶೆಡ್ಯೂಲ್‌ ದಿಸ್‌ ಪೋಸ್ಟ್‌ ಅನ್ನು ಟ್ಯಾಪ್‌ ಮಾಡಿದರೆ ಅಲ್ಲಿ ನಿಮ್ಮ ಪೋಸ್ಟ್‌ ಲೈವ್‌ ಆಗುವ ದಿನ ಮತ್ತು ಗಂಟೆಯನ್ನು (ಡೇಟ್‌ ಆಂಡ್‌ ಟೈಮ್‌) ಹೊಂದಿಸಿಕೊಳ್ಳಬಹುದಾಗಿದೆ. ನಂತರ ಇನ್ಸ್ಟಾಗ್ರಾಮ್‌ ಪೋಸ್ಟ್‌ಗೆ ಹಿಂತಿರುಗಿ ನಂತರ ಶೆಡ್ಯೂಲ್‌ ಮೇಲೆ ಟ್ಯಾಪ್‌ ಮಾಡಿ.
  2. ಅಚೀವ್‌ಮೆಂಟ್ಸ್‌ (Achievement) : ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ರಚನೆಮಾಡುವವರು ಕೆಲವು ನಿರ್ದಿಷ್ಟ ವಿಷಯಗಳನ್ನು ಸಮುದಾಯದೊಂದಿಗೆ ಹಂಚಿಕೊಳ್ಳಬಹುದಾಗಿದೆ. ಅದನ್ನು ಆಡ್ ಯುವರ್ಸ್ ಸ್ಟಿಕ್ಕರ್, ಕೊಲಾಬ್ಸ್ ಟೂಲ್ ಅಥವಾ ರೀಮಿಕ್ಸ್ ಮೂಲಕ ಮತ್ತೊಬ್ಬ ರಚನಾಕರರೊಂದಿಗೆ ಕೊಲಾಬರೇಟ್‌ ಆಗುತ್ತಾರೆ. ರೀಲ್‌ಗಳನ್ನು ಕಮ್ಯುನಿಟಿಯಲ್ಲಿ ಹೆಚ್ಚು ಇಂಟರಾಕ್ಟೀವ್‌ ಮಾಡುವ ಸಲುವಾಗಿ ಪೋಲ್ಸ್‌, ಕ್ವಿಜ್‌ ಗಳಂತಹ ಸಂವಾದಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಟ್ರೆಂಡಿಂಗ್‌ನಲ್ಲಿರುವ ಆಡಿಯೋ ಅಥವಾ ಸಂಭಾಷಣೆಗಳಲ್ಲಿ ಸೇರಿಕೊಳ್ಳುವುದು. ಒಂದು ವಾರದಲ್ಲಿ ಒಂದಕ್ಕಿಂತ ಹೆಚ್ಚು ಸೃಜನಾತ್ಮಕ ರೀಲ್‌ಗಳನ್ನು ಮಾಡುವುದು. ರಚನಾಕಾರರು ತಮ್ಮ ರೀಲ್‌ಗಳ ನೋಟಿಫಿಕೇಶನ್‌ ಕಳುಹಿಸಿದ ನಂತರ ಅವರು ಅನ್‌ಲಾಕ್‌ ಮಾಡಿದ ಅಚೀವ್‌ಮೆಂಟ್‌ನಲ್ಲಿ ಭಾಗವಹಿಸಬಹುದಾಗಿದೆ. ಅದನ್ನು ವ್ಯೂ ಮಾಡುವುದರ ಮೂಲಕ ನೋಡಬಹುದಾಗಿದೆ. ರೀಲ್‌ನಲ್ಲಿರುವ ಮೆನು (…) ಗೆ ಹೋಗುವುದರ ಮೂಲಕ ಅಚೀವ್‌ಮೆಂಟ್‌ಗಳನ್ನು ನೋಡಬಹುದಾಗಿದೆ.

ಹೊಸ ವೈಶಿಷ್ಟ್ಯಕ್ಕೆ ಜನರ ಪ್ರತಿಕ್ರಿಯೆ ಏನು?
ಇನ್ಸ್ಟಾಗ್ರಾಮ್‌ನ ಹೊಸ ವೈಶಿಷ್ಟ್ಯಗಳಿಗೆ ಜನರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಇದು ರಚನಾಕಾರರಿಗೆ ಬಹಳ ಲಾಭದಾಯಕವಾಗಿದೆ ಎಂದು ಹೇಳಿದ್ದಾರೆ. ವಾರದ ಮೊದಲೇ ಯಾವುದನ್ನು ಪೋಸ್ಟ್‌ ಮಾಡಬೇಕು ಎಂದು ನಿರ್ಧರಿಸಬಹುದಾಗಿದೆ. ಇತರ ಕೆಲಸಗಳಿಗೂ ಸಮಯ ಹೊಂದಿಸಿಕೊಳ್ಳಬಹುದಾಗಿದೆ ಮತ್ತು ತಮ್ಮ ಫಾಲೋವರ್‌ಗಳಿಗೆ ನಿರಂತರವಾಗಿ ಮನರಂಜನೆ ಮತ್ತು ವಿಷಯಗಳನ್ನು ತಲುಪಿಸಬಹುದಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ :Honda : ಗುಡ್‌ ನ್ಯೂಸ್‌; ಈ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಿದ ಹೊಂಡಾ

ಇದನ್ನೂ ಓದಿ : Meta Company : Twitter ಬೆನ್ನಲ್ಲೇ ಫೇಸ್‌ಬುಕ್ ನ ಮೆಟಾ ಕಂಪೆನಿಯಲ್ಲೂ ಉದ್ಯೋಗಿಗಳಿಗೆ ಗೇಟ್ ಪಾಸ್


(Instagram introduced new features for content creators)

Comments are closed.