Jaljeera : ಜಲ್ಜೀರಾ ಎಂಬ ಅಮೃತ ಪಾನೀಯ! ಬೇಸಿಗೆಯಲ್ಲಿ ಏಕೆ ಕುಡಿಯಬೇಕು ಎಂಬುದು ನಿಮಗೆ ಗೊತ್ತೇ?

ಬಿಸಿಲು ಏರುತ್ತಲೇ ಇದೆ. ಹಾಗೆಯೇ ವ್ಯಾಪಾರಿಗಳು ಜಲ್ಜೀರಾವನ್ನು(Jaljeera) ಮಾರಾಟ ಮಾಡುವುದೂ ಎಲ್ಲಡೆ ಕಣ್ಣಿಗೆ ಬೀಳುತ್ತಲೇ ಇದೆ. ಜಲ್ಜೀರಾ ಬೇಸಿಗೆಯ ಅತಿ ಪ್ರೀತಿಯ ಪಾನೀಯವಾಗಿದೆ. ಇದು ಬಾಯಾರಿಕೆಯನ್ನಷ್ಟೇ ನೀಗಿಸುವುದಿಲ್ಲ, ಅಸಂಖ್ಯಾತ ಆರೋಗ್ಯದ ಪ್ರಯೋಜನಗಳಿಂದಲೂ ಕೂಡಿದೆ. ಖುಷಿಯ ಸಮಚಾರವೆಂದರೆ, ನೀವು ಈ ಆರೋಗ್ಯಕರ ಪಾನಿಯವನ್ನು ಸವಿಯಲು ಹೊರಗಡೆ ಹೋಗುವ ಅಗತ್ಯವಿಲ್ಲ. ಏಕೆಂದರೆ ಒಂದು ಗ್ಲಾಸ್‌ ಜಲ್ಜೀರಾ ತಯಾರಿಸಲು ಅಗತ್ಯವಿರುವ ಪದಾರ್ಥಗಳು ಸಾಮಾನ್ಯವಾಗಿ ಪ್ರತಿ ಭಾರತೀಯರ ಅಡುಗೆಮನೆಯಲ್ಲಿಯೇ ಸಿಗುತ್ತದೆ.

ಜಲ್ಜೀರಾವನ್ನು ಸುಲಭವಾಗಿ ತಯಾರಿಸುವ ಸಲುವಾಗಿ ಹಲವಾರು ಕಂಪನಿಗಳು ಜಲ್ಜೀರಾದ ಪೌಡರ್‌ ಅನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆದರೂ ನೀವು ಜಲ್ಜೀರಾ ಪೌಡರ್‌ ಅನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬೇಕು ಅಂದುಕೊಂಡಿದ್ದರೆ, ನಾವು ಹೇಳುವ ವಿಧಾನ ಅನುಸರಿಸಿ.

ಜಲ್ಜೀರಾ(Jaljeera) ಪೌಡರ್‌ ತಯಾರಿಸುವ ವಿಧಾನ :

  1. ಮೊದಲಿಗೆ 4 ಚಮಚ ಪುದೀನಾ ಪುಡಿ, 4 ಚಮಚ ಹುರಿದ ಜೀರಿಗೆ, 2 ಚಮಚ ಕರಿ ಮೆಣಸು, 2 ಚಮಚ ಸಿಟ್ರಿಕ್‌ ಆಸಿಡ್‌(ಆಮ್ಚೂರ್‌ ಪೌಡರ್‌), 1 ಚಮಚ ಶುಂಠಿ ಪೌಡರ್‌, 1/4 ಚಮಚ ಇಂಗು, 2 ಚಮಚ ಕಪ್ಪು ರಾಕ್‌ ಸಾಲ್ಟ್‌, 4 ಕಪ್ಪು ಏಲಕ್ಕಿ ಮತ್ತು 2 ಚಮಚ ಉಪ್ಪು ಇವೆಲ್ಲವುಗಳನ್ನು ಮಿಕ್ಸರ್‌ ಜಾರ್‌ಗೆ ಹಾಕಿಕೊಳ್ಳಿ.
  2. ನುಣ್ಣಗೆ ಪೌಡರ್‌ ಆಗುವವರೆಗೆ ಗ್ರೈಂಡ್‌ ಮಾಡಿ.
  3. ಒಂದು ಚಮಚ ಜಲ್ಜೀರಾ ಪೌಡರ್‌ ಅನ್ನು ಒಂದು ಗ್ಲಾಸ್‌ ತಣ್ಣಗಿನ ನೀರಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್‌ ಮಾಡಿ. ಇದನ್ನು ಬೂಂದಿ ಕಾಳುಗಳಿಂದ ಅಲಂಕರಿಸಿ. ಬಿಸಿಲಿನ ಬೇಗೆ ತಣಿಸುವ ನಿಮ್ಮ ತಾಜಾ ರುಚಿಕರವಾದ ಜಲ್ಜೀರಾ ಸಿದ್ಧವಾಯಿತು.


ಇದನ್ನೂ ಓದಿ : Watermelon : ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳೇನು ಎಂಬುದು ಗೊತ್ತೇ?

ಪ್ರಯೋಜನಗಳು :

ವಿಟಮಿನ್‌ ಸಿ ಯ ಕೊರತೆ ಸುಧಾರಿಸುವುದು :
ವಿಟಮಿನ್‌ ಸಿ ಹೇರಳವಾಗಿರುವ ಮಾವಿನ ಕಾಯಿ ಪೌಡರ್‌ ಅಥವಾ ಆಮ್ಚೂರ್‌ ಪೌಡರ್‌ ಜಲ್ಜೀರಾ ಪೌಡರ್‌ನಲ್ಲಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಇದು ವಿಟಮಿನ್‌ ಸಿ ಯ ಕೊರತೆಯಿಂದ ಬರುವ ಸ್ಕರ್ವಿ ರೋಗವನ್ನು ತಡೆಯುತ್ತದೆ.

ಅಜೀರ್ಣ ಹೋಗಲಾಡಿಸುವುದು :
ಬೇಸಿಗೆಯಲ್ಲಿ ಎದುರಾಗುವ ಎಸಿಡಿಟಿ ಮತ್ತು ಅಜೀರ್ಣ ಸಮಸ್ಯೆಗಳಿಗೆ ಜಲ್ಜೀರಾವು ಅಮೃತವಾಗಿದೆ. ಬರೀ ಅಜೀರ್ಣಕ್ಕಷ್ಟೇ ಅಲ್ಲ, ಎಸಿಡಿಟಿ, ಹೊಟ್ಟೆಯುಬ್ಬುರ ಮತ್ತು ಇತರೆ ಗ್ಯಾಸ್ಟ್ರಿಕ್‌ ಸಮಸ್ಯೆಗಳಿಗೂ ಪರಿಹಾರವಾಗಿದೆ.

ಕ್ಯಾಲೋರಿ ಕಡಿಮೆ ಮಾಡುವುದು:
ಸಕ್ಕರೆಯಿಂದ ತುಂಬಿರುವ ಎಲ್ಲಾ ಕಾರ್ಬೊನೇಟೆಡ್‌ ಪಾನೀಯಗಳ ಬದಲಿಗೆ ಇದು ಪರಿಪೂರ್ಣವಾಗಿದೆ. ಜಲ್ಜೀರಾವನ್ನು ನಿರಾತಂಕವಾಗಿ ಸೇವಿಸಬಹುದಾದ ಪಾನೀಯವಾಗಿದೆ. ಏಕೆಂದರೆ ಅದನ್ನು ಮನೆಯಲ್ಲಿಯೇ ಮಾಡಿರುವುದರಿಂದ ನಿಮಗೆ ಬೇಕಾದಷ್ಟು ಸೇವಿಸಬಹುದು ಮತ್ತು ಕ್ಯಾಲೋರಿಗಳ ಬಗ್ಗೆಯೂ ಚಿಂತಿಸುಬೇಕಾಗಿಲ್ಲ.

ಅನಿಮಿಯಾ ತಡೆಯುವುದು :
ಜಲ್ಜೀರಾದಲ್ಲಿರುವ ಜೀರಿಗೆಯು ಅನಿಮಿಯಾ ತಡೆಯಲು ಸಹಕಾರಿ. ಏಕೆಂದರೆ ಜೀರಿಗೆಯು ಅಧಿಕ ಕಬ್ಬಿಣಾಂಶವನ್ನು ಹೊಂದಿದೆ. ಇದು ದೇಹವನ್ನು ಹೈಡ್ರೇಟ್‌ ಮಾಡುತ್ತದೆ ಮತ್ತು ತಂಪಾಗಿರಿಸುತ್ತದೆ.

ಇದನ್ನೂ ಓದಿ : skin in summer : ಬೇಸಿಗೆ ಕಾಲದಲ್ಲಿ ಹೀಗಿರಲಿ ನಿಮ್ಮ ತ್ವಚೆಯ ಆರೈಕೆ

(Jaljeera an elixir drink, how to make jaljeera at home)

Comments are closed.