Mango smoothie: ಬೇಸಿಗೆ ವಾತಾವರಣಕ್ಕೆ ತಂಪು ಕೊಡುವ ಮಾವಿನ ಹಣ್ಣಿನ ಸ್ಮೂದಿ

(Mango smoothie) ತನ್ನ ವಿಶೇಷವಾದ ಪರಿಮಳ, ಬಣ್ಣ, ಸ್ವಾದದಿಂದ ಎಲ್ಲರನ್ನೂ ಆಕರ್ಷಿಸುವ ಹಣ್ಣು ಮಾವಿನಹಣ್ಣು. ಮಾವಿನಹಣ್ಣನ್ನು ಅಡುಗೆಯಲ್ಲಿ ಬಳಸುವುದನ್ನು ಹಿರಿಯರು ರೂಢಿಸಿಕೊಂಡು ಬಂದಿದ್ದಾರೆ. ಮಾವಿನ ಹಣ್ಣು ಹಲವು ಪೋಷಕಾಂಶಗಳಿಂದ ಸಮೃದ್ದವಾಗಿದ್ದು, ಪ್ರೋಟಿನ್‌, ಕೊಬ್ಬು, ಕಾರ್ಬೋಹೈಡ್ರೇಟ್‌, ನಾರು, ಪೊಟ್ಯಾಷಿಯಮ್‌, ಸೋಡಿಯಂ, ಹೀಗೆ ಹಲವು ಪೋಷಕಾಂಶಗಳನ್ನು ಹೊಂದಿದೆ. ಆಂಟಿಆಕ್ಸಿಡೆಂಟ್ಸ್‌ ಗುಣ ಹೊಂದಿರುವ ಮಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಾವಿನ ಹಣ್ಣು ಸೇವನೆ ದೇಹಕ್ಕೆ ಆರೋಗ್ಯಕರ.

ಹಿಂದಿನ ಕಾಲದಲ್ಲಿ ಮಾವಿನ ಹಣ್ಣನ್ನು ಬಳಸಿ ಅನೇಕ ರೀತಿಯ ಅಡುಗೆಗಳನ್ನು ಖಾದ್ಯಗಳನ್ನು ಸಿಹಿ ತಿಂಡಿಗಳನ್ನು ತಯಾರಿಸುತ್ತಿದ್ದರು. ಆದರೆ ಇಲ್ಲಿ ನಿಮಗೆ ಹೇಳಲು ಹೊರಟಿರುವುದು ಮಾವಿನ ಹಣ್ಣಿನ ಸ್ಮೂದಿ ರೆಸಿಪಿ ಬಗ್ಗೆ. ಇನ್ನೇನು ಚಳಿಗಾಲ ಕಳೆದು ಬೇಸಿಗೆ ಕಾಲ ಸಮೀಪಿಸುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಈ ರೀತಿಯ ಸ್ಮೂದಿಗಳನ್ನು ಮಾಡಿ ಸೇವಿಸಿದರೆ ದೇಹ ತಂಪಾಗಿರುತ್ತದೆ. ಹಾಗಿದ್ದರೆ ಮಾವಿನ ಹಣ್ಣಿನ ಸ್ಮೂದಿ ಮಾಡುವುದು ಹೇಗೆ, ಇದಕ್ಕೆ ಬೇಕಾದ ಸಾಮಾಗ್ರಿಗಳೇನು ಎಂಬುದನ್ನು ತಿಳಿಯೋಣ;

ಮಾವಿನ ಹಣ್ಣಿನ ಸ್ಮೂದಿ (Mango smoothie) ಮಾಡಲು ಬೇಕಾಗುವ ಪದಾರ್ಥಗಳು;
2 ಮಾವು
1 ಕಪ್ ಮೊಸರು
ಪುದೀನ ಎಲೆಗಳು
ಸೇಬು
1 ಚಮಚ ಚಿಯಾ ಬೀಜಗಳು
1/2 ಕಪ್ ಐಸ್ ಪೀಸ್
1 ಕಪ್ ಓಟ್ಸ್
2 ಚಮಚ ಜೇನುತುಪ್ಪ
ಬಾಳೆಹಣ್ಣು
ಬೆರಿಹಣ್ಣುಗಳು
1 ಚಮಚ ತೆಂಗಿನತುರಿ

ಮಾವಿನ ಹಣ್ಣಿನ ಸ್ಮೂದಿ (Mango smoothie) ತಯಾರಿಸುವ ವಿಧಾನ;
ಮೊದಲಿಗೆ ಹಣ್ಣುಗಳನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ನಂತರ ಕತ್ತರಿಸಿದ ಮಾವಿನಹಣ್ಣು, ಮೊಸರು, ಓಟ್ಸ್, ಐಸ್ ಕ್ಯೂಬ್ಗಳು ಮತ್ತು ಜೇನುತುಪ್ಪವನ್ನು ಒಂದು ಬ್ಲೆಂಡರ್‌ ನಲ್ಲಿ ಸೇರಿಸಿ ನಯವಾಗಿ ಬ್ಲೆಂಡ್‌ ಮಾಡಿಕೊಳ್ಳಿ. ನಂತರ ತಯಾರಿಸಿದ ಸ್ಮೂದಿಯನ್ನು ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ. ಇದಕ್ಕೆ ಹಣ್ಣಿನ ಚೂರುಗಳು, ಬ್ಲೂಬೆರ್ರಿಗಳು, ಚಿಯಾ ಬೀಜಗಳು, ತೆಂಗಿನಕಾಯಿ ಚೂರುಗಳನ್ನು ಸೇರಿಸಿ ಮತ್ತು ಪುದೀನ ಎಲೆಗಳಿಂದ ಅಲಂಕರಿಸಿ. ಇದೀಗ ಮಾವಿನ ಹಣ್ಣಿನ ಸ್ಮೂದಿ ರೆಸಿಪಿ ಸವಿಯಲು ಸಿದ್ದ.

ಇದನ್ನೂ ಓದಿ : Fruit Vs Fruit Juice : ಯಾವುದು ಬೆಸ್ಟ್‌? ತಾಜಾ ಹಣ್ಣುಗಳಾ ಅಥವಾ ಹಣ್ಣುಗಳಿಂದ ತಯಾರಿಸಿದ ಜ್ಯೂಸ್‌

ಇದನ್ನೂ ಓದಿ : Bottle guard Halva: ಬಾಯಲ್ಲಿ ನೀರೂರಿಸುವ ಸೋರೆಕಾಯಿ ಹಲ್ವಾ..! ಒಮ್ಮೆ ಹೀಗೆ ಮಾಡಿ ನೋಡಿ

ಇದನ್ನೂ ಓದಿ : Save Dish From Too Much Salt : ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ? ಈ ಸಿಂಪಲ್‌ ಟ್ರಿಕ್‌ ಉಪಯೋಗಿಸಿ ನೋಡಿ

Mango Smoothie: A refreshing mango smoothie for summer weather

Comments are closed.