Monsoon Tips:ಮಾನ್ಸೂನ್ ಸಮಯದಲ್ಲಿ ಉಪ್ಪಿನಕಾಯಿಯನ್ನು ದೀರ್ಘಕಾಲ ಸಂಗ್ರಹಿಸಲು ಹೀಗೆ ಮಾಡಿ

ಮಳೆಗಾಲದಲ್ಲಿ ಆಹಾರ ಪದಾರ್ಥಗಳ ಶೇಖರಣೆ ಸಮಸ್ಯೆಯಾಗಿಯೇ ಉಳಿದಿದೆ. ಮಾನ್ಸೂನ್ ಸಮಯದಲ್ಲಿ ಗಾಳಿಯಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ತೇವಾಂಶವು ಹೆಚ್ಚಾಗಿ ಆಹಾರ ಪದಾರ್ಥಗಳನ್ನು ಹಾಳುಮಾಡುತ್ತದೆ. ಮಳೆಗಾಲದ ದಿನಗಳಲ್ಲಿ ಉಪ್ಪಿನಕಾಯಿ ಬೇಗ ಹಾಳಾಗುತ್ತದೆ. ಸಾಮಾನ್ಯವಾಗಿ, ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ತಯಾರಿಸಲಾಗುತ್ತದೆ. ಆದರೆ , ಮಳೆಗಾಲದ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಗಾಳಿಯಲ್ಲಿ ತೇವಾಂಶವು ಅಧಿಕವಾಗಿ ಉಪ್ಪಿನಕಾಯಿಯನ್ನು ಹಾಳುಮಾಡುತ್ತದೆ(Monsoon Tips).

ಉಪ್ಪಿನಕಾಯಿಯ ಶೆಲ್ಫ್ ಲೈಫ್ ಅನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುವ ಕೆಲವು ಸರಳ ಸಲಹೆಗಳು ಇಲ್ಲಿವೆ.

ಗಾಜಿನ ಜಾಡಿಗಳನ್ನು ಬಳಸುವುದು:

ಈ ಮಳೆಗಾಲದಲ್ಲಿ ಗಾಜಿನ ಜಾಡಿಗಳಲ್ಲಿ ಉಪ್ಪಿನಕಾಯಿ ಸಂಗ್ರಹಿಸುವುದು ಒಳ್ಳೆಯ ಐಡಿಯಾ. ಪ್ಲಾಸ್ಟಿಕ್ ಚೀಲಗಳಲ್ಲಿ ಅಥವಾ ಪಾತ್ರೆಗಳಲ್ಲಿ ಇಟ್ಟಿರುವ ಉಪ್ಪಿನಕಾಯಿ ಸುಲಭವಾಗಿ ಕೆಡುತ್ತದೆ. ಆಹಾರ ಪದಾರ್ಥಗಳ ಶೆಲ್ಫ್ ಲೈಫ್ ವನ್ನು ಹೆಚ್ಚಿಸಲು, ಅವುಗಳನ್ನು ಬಿಗಿಯಾಗಿ ಪ್ಯಾಕ್ ಮಾಡಿದ ಪಾತ್ರೆಗಳಲ್ಲಿ ಸಂಗ್ರಹಿಸುವುದು ಅವಶ್ಯಕ.ಕಂಟೇನರ್ ಅನ್ನು ಸೂರ್ಯನ ಬೆಳಕಿನಲ್ಲಿ ಇರಿಸಿದರೂ, ನೀವು ಗಾಜಿನ ಜಾಡಿಗಳಲ್ಲಿ ಉಪ್ಪಿಕಾಕಾಯಿ ಅನ್ನು ಸಂಗ್ರಹಿಸಿದಾಗ ಗಾಳಿಯಲ್ಲಿ ಇರುವ ತೇವಾಂಶವು ಉಪ್ಪಿನಕಾಯಿಯ ಮೇಲೆ ಪರಿಣಾಮ ಬೀರುವುದಿಲ್ಲ. ಗಾಜಿನ ಕಂಟೇನರ್ ನ ಹೊರ ಪದರವು ಸೂರ್ಯನ ಬೆಳಕಿನಲ್ಲಿ ಬೆಚ್ಚಗಾಗುತ್ತದೆ, ಇದು ತೇವಾಂಶವನ್ನು ಒಳಗೆ ಸಂಗ್ರಹಿಸಲು ಅನುಮತಿಸುವುದಿಲ್ಲ. ಇದು ಉಪ್ಪಿನಕಾಯಿಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.

ಎಣ್ಣೆ ಮತ್ತು ಉಪ್ಪಿನ ಮಿಶ್ರಣ :

ಮನೆಯಲ್ಲಿ ಉಪ್ಪಿನಕಾಯಿ ಮಾಡುವಾಗ ಅನೇಕ ಜನರು ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ. ಸಾಮಾನ್ಯ ದಿನಗಳಲ್ಲಿ, ಇದು ಫಿಟ್‌ನೆಸ್ ಫ್ರೀಕ್‌ಗೆ ಉತ್ತಮವಾಗಿದೆ. ಆದರೆ ಮಾನ್ಸೂನ್ ಸಮಯದಲ್ಲಿ, ಹೆಚ್ಚುವರಿ ಪ್ರಮಾಣದಲ್ಲಿ ಉಪ್ಪು ಮತ್ತು ಎಣ್ಣೆಯನ್ನು ಸೇರಿಸುವುದು ಅವಶ್ಯಕ. ಉಪ್ಪು ಮತ್ತು ಎಣ್ಣೆಯ ಮಿಶ್ರಣವು ನೈಸರ್ಗಿಕ ಸಂರಕ್ಷಕದಂತೆ ಕಾರ್ಯನಿರ್ವಹಿಸುತ್ತದೆ, ಇದು ಉಪ್ಪಿನಕಾಯಿ ಹಾಳಾಗದಂತೆ ರಕ್ಷಿಸುತ್ತದೆ.ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ, ಉಪ್ಪಿನಕಾಯಿ ಮಿಶ್ರಣಕ್ಕೆ ಹೆಚ್ಚುವರಿ ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿದರೆ ಬಹಳ ಉತ್ತಮ.

ತೇವವಾದ ಸ್ಥಳಗಳಿಂದ ದೂರವಿಡಿ:

ಕೆಲವೊಮ್ಮೆ, ಸರಿಯಾಗಿ ಪ್ಯಾಕ್ ಮಾಡಿದರೂ, ಉಪ್ಪಿನಕಾಯಿ ಹಾಳಾಗುತ್ತದೆ. ಕಾರಣ ಉಪ್ಪಿನಕಾಯಿಯನ್ನು ಒದ್ದೆಯಾದ ಅಥವಾ ಆರ್ದ್ರ ಸ್ಥಳದಲ್ಲಿ ಸಂಗ್ರಹಿಸುವುದು. ಇದು ಉಪ್ಪಿನಕಾಯಿಯ ರುಚಿಯನ್ನು ಬದಲಾಯಿಸಲು ಕಾರಣವಾಗಬಹುದು. ಶೆಲ್ಫ್ ಲೈಫ್ ಅನ್ನು ಹೆಚ್ಚಿಸಲು ಉಪ್ಪಿನಕಾಯಿ ಜಾಡಿಗಳನ್ನು ಒಣ ಸ್ಥಳದಲ್ಲಿ ಸಂಗ್ರಹಿಸುವುದು ಅವಶ್ಯಕ.ಶೇಖರಣೆಯ ಹೊರತಾಗಿ, ಉಪ್ಪಿನಕಾಯಿಗಳ ಶೆಲ್ಫ್ ಲೈಫ್ ಅನ್ನುಹೆಚ್ಚಿಸಲು ಕೆಲವು ಇತರ ಅಭ್ಯಾಸಗಳನ್ನು ಅನುಸರಿಸಿ. ಉಪ್ಪಿನಕಾಯಿ ಜಾರ್ ಒಳಗೆ ಚಮಚವನ್ನು ಬಿಡಬೇಡಿ ಮತ್ತು ಒದ್ದೆಯಾದ ಕೈಯಲ್ಲಿ ಉಪ್ಪಿನಕಾಯಿ ಜಾರ್ ಅನ್ನು ಮುಟ್ಟಬೇಡಿ.

ಇದನ್ನೂ ಓದಿ: Bloating Problem:ಹೊಟ್ಟೆ ಉಬ್ಬರಿಸುತ್ತದೆಯೇ? ಈ 7 ಆಹಾರಗಳನ್ನು ಸೇವಿಸಲೇಬೇಡಿ

(Monsoon Tips to preserve pickle )

Comments are closed.