kpcc office : ಮುಸ್ಲಿಂ ಮತಗಳು ಚದುರದಂತೆ ಕಾಂಗ್ರೆಸ್​ ಮಾಸ್ಟರ್​ ಪ್ಲಾನ್​ : ಒಕ್ಕಲಿಗ ಮತಗಳ ಮೇಲೂ ಕಣ್ಣು

ಬೆಂಗಳೂರು : kpcc office : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಎಂಟು ತಿಂಗಳು ಬಾಕಿ ಉಳಿದಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಮುಂದಿನ ಚುನಾವಣೆಗೆ ಭರ್ಜರಿ ತಯಾರಿಯನ್ನೇ ನಡೆಸುತ್ತಿವೆ. ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಬಿಜೆಪಿಯದ್ದಾದರೆ ಮತ್ತೊಮ್ಮೆ ಅಧಿಕಾರ ಗದ್ದುಗೆಯೇರುವ ಕನಸು ಜೆಡಿಎಸ್​ ಹಾಗೂ ಕಾಂಗ್ರೆಸ್​ನದ್ದಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್​ ನಾಯಕರು ಮುಸ್ಲಿಂ ಮತಗಳು ಚದುರಿ ಹೋಗದಂತೆ ನೋಡಿಕೊಳ್ಳಲು ವಿವಿಧ ರಣ ತಂತ್ರಗಳನ್ನು ಹೂಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.


ಕಾಂಗ್ರೆಸ್​ನ ಬಹುದೊಡ್ಡ ವೋಟ್​ ಬ್ಯಾಂಕ್​ ಅಂದರೆ ಅದು ಅಲ್ಪ ಸಂಖ್ಯಾತರು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಗಿದ್ದು ಈ ಸಭೆಯಲ್ಲಿ ಮುಸ್ಲಿಂ ಮತಗಳನ್ನು ಕ್ರೋಢಿಕರಿಸುವ ಬಗ್ಗೆ ಜೊತೆಯಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯುವ ಬಗ್ಗೆ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಯು.ಟಿ ಖಾದರ್, ತನ್ವೀರ್ ಸೇಠ್, ನಜೀರ್ ಅಹ್ಮದ್, ಸಲೀಂ ಅಹ್ಮದ್, ರೆಹಮಾನ್ ಖಾನ್, ರಿಜ್ವಾನ್ ಅರ್ಷದ್ ಸೇರಿದಂತೆ ಅನೇಕರು ಭಾಗಿಯಾದರು.


ಮುಸ್ಲಿಂ ಮತಗಳ ಮೇಲೆ ಎಸ್​ಡಿಪಿಐ ಕೂಡ ಕಣ್ಣಿಟ್ಟಿದೆ. ಹೀಗಾಗಿ ಕಾಂಗ್ರೆಸ್​ ಪಕ್ಷವನ್ನು ಪದೇ ಪದೇ ಟಾರ್ಗೆಟ್​ ಮಾಡ್ತಿದೆ. ಈಗಾಗಲೇ ಹಿಜಾಬ್​ ವಿವಾದ, ಆಝಾನ್​ ಗಲಾಟೆ ಮುಂತಾದ ವಿಚಾರಗಳಲ್ಲಿ ಕಾಂಗ್ರೆಸ್​ನ ನಡೆ ಬಗ್ಗೆ ಮುಸ್ಲಿಂ ಸಮುದಾಯಗಳಲ್ಲಿ ಅಸಮಾಧಾನ ಉಂಟಾಗಿದೆ. ಇದರ ಲಾಭವನ್ನು ಎಸ್​ಡಿಪಿಐ ಪಡೆದುಕೊಳ್ತಿದೆ. ಆದ್ದರಿಂದ ಮುಸ್ಲಿಂ ಮತಗಳು ಯಾವುದೇ ಕಾರಣಕ್ಕೂ ಚದುರಿ ಹೋಗದಂತೆ ನೋಡಿಕೊಂಡು ನಾವು ಮುಂದಿನ ನಡೆ ಇಡಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ.


ಜೆಡಿಎಸ್​ ಪಕ್ಷದ ಪ್ರಮುಖ ಅಸ್ತ್ರವೆಂದರೆ ಅದು ಒಕ್ಕಲಿಗ ಮತ. ಅಲ್ಲದೇ ಮುಸ್ಲಿಂ ಮತಗಳ ಮೇಲೂ ಜೆಡಿಎಸ್​ನ ಪ್ರಭಾವವಿದೆ. ಹೀಗಾಗಿ ಮುಸ್ಲಿಂ ಮತಗಳು ಇಲ್ಲಿ ಕೂಡ ಚದುರಿ ಹೋಗುವ ಎಲ್ಲಾ ಸಾಧ್ಯತೆಯಿದೆ. ಹೀಗಾಗಿ ಒಕ್ಕಲಿಗ ಹಾಗೂ ಮುಸ್ಲಿಂ ಸಮುದಾಯ ಯಾವುದೇ ಕಾರಣಕ್ಕೂ ಜೆಡಿಎಸ್​ನತ್ತ ವಾಲದಂತೆ ನೋಡಿಕೊಳ್ಳಬೇಕು ಎಂದು ಡಿ.ಕೆ ಶಿವಕುಮಾರ್ ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.

ಇದನ್ನು ಓದಿ : yash movie : ಬಾಲಿವುಡ್​ನಲ್ಲಿ ರಿಮೇಕ್​ ಆಗಲಿದೆ ರಾಕಿಂಗ್​ ಸ್ಟಾರ್​ ಯಶ್​ ನಟನೆಯ ಈ ಸಿನಿಮಾ

ಇದನ್ನೂ ಓದಿ : bus stand : ಎಮ್ಮೆಯಿಂದ ಬಸ್​ ತಂಗುದಾಣ ಉದ್ಘಾಟನೆ ಮಾಡಿಸಿದ ಗ್ರಾಮಸ್ಥರು :ಗದಗದಲ್ಲೊಂದು ವಿಚಿತ್ರ ಘಟನೆ

meeting of minority community leaders was held at the kpcc office in bengaluru

Comments are closed.