Oil Free Chicken Sukka:ಎಣ್ಣೆ ಇಲ್ಲದೆ ಚಿಕನ್ ಸುಕ್ಕ ತಯಾರಿಸುವುದು ಹೇಗೆ ?

(Oil Free Chicken Sukka)ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯಕರ ಆಹಾರ ಸೇವಿಸುವಂತಹ ಆಹಾರ ಕ್ರಮವನ್ನು ಜೀವನದಲ್ಲಿ ರೂಡಿಸಿಕೊಂಡಿದ್ದಾರೆ. ಅದಕ್ಕಾಗಿ ಫ್ಯಾಟ್‌ ಅಂಶ ಇರುವಂತಹ ಆಹಾರವನ್ನು ಕಡಿಮೆ ಸೇವಿಸುತ್ತಾರೆ. ಹೆಚ್ಚಿನವರು ಅಡುಗೆಯಲ್ಲಿ ಎಣ್ಣೆಯನ್ನು ಕಡಿಮೆ ಬಳಕೆ ಮಾಡುತ್ತಾರೆ. ಆದರೆ ಚಿಕನ್ ಸುಕ್ಕ ಮಾಡುವುದಕ್ಕೆ ಸಾಕಷ್ಟು ಎಣ್ಣೆಯನ್ನು ಬಳಸಬೇಕಾಗುತ್ತದೆ. ಕೆಲವರು ಆಯಿಲ್ ಫ್ರೀ ಇರುವ ಚಿಕನ್ ಗ್ರೇವಿಯನ್ನು ತಿನ್ನಲು ಇಷ್ಟ ಪಡುತ್ತಾರೆ. ಈ ರೆಸಿಪಿಯನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಆಯಿಲ್ ಫ್ರೀ ಚಿಕನ್‌ ಗ್ರೇವಿಯನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

(Oil Free Chicken Sukka)ಬೇಕಾಗುವ ಸಾಮಗ್ರಿಗಳು:

  • ಈರುಳ್ಳಿ
  • ಟೊಮೆಟೊ
  • ಬೆಳ್ಳುಳ್ಳಿ
  • ಶುಂಠಿ
  • ಲವಂಗ
  • ಚಕ್ಕೆ
  • ಪೆಪ್ಪರ್
  • ಉಪ್ಪು
  • ಗರಂ ಮಸಾಲ
  • ಚಿಕನ್

ಮಾಡುವ ವಿಧಾನ:

ಮಿಕ್ಸಿ ಜಾರಿನಲ್ಲಿ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ,ಶುಂಠಿ, ಲವಂಗ, ಚಕ್ಕೆ, ಪೆಪ್ಪರ್, ಉಪ್ಪು, ಗರಂ ಮಸಾಲ ಮತ್ತು ನೀರನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಒಂದು ಬಣಾಲೆಯಲ್ಲಿ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಅದಕ್ಕೆ ತೊಳೆದಿಟ್ಟುಕೊಂಡ ಚಿಕನ್ ಹಾಕಿ ಬೇಯಿಸಿಕೊಂಡರೆ ಆಯಿಲ್ ಫ್ರೀ ಚಿಕನ್ ಗ್ರೇವಿ ಸವಿಯಲು ಸಿದ್ದವಾಗುತ್ತದೆ. ಹೆಚ್ಚಾಗಿ ಇದನ್ನು ದೊಸೆ ಮತ್ತು ರೊಟ್ಟಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ. ಇದನ್ನೂ ಓದಿ:Rasam Recipe : ಜ್ವರದಿಂದ ಬಾಯಿ ರುಚಿ ಕೆಟ್ಟಿದೆಯೇ : ಹಾಗಿದ್ದರೆ ಈ ರೀತಿ ರಸಂ ಮಾಡಿ

ಚಿಕನ್ ಟಿಕ್ಕಾ ಮಸಾಲ

ಬೇಕಾಗುವ ಸಾಮಗ್ರಿಗಳು:

  • ಚಿಕನ್
  • ಕಾರಪುಡಿ
  • ಜೀರಿಗೆ ಪುಡಿ
  • ಧನ್ಯ ಪುಡಿ
  • ಶುಂಠಿ ಬೆಳ್ಳುಳ್ಳಿ ಪೆಸ್ಟ್
  • ಮೊಸರು
  • ಟೊಮೆಟೊ
  • ಈರುಳ್ಳಿ
  • ಬೆಳ್ಳುಳ್ಳಿ
  • ಶುಂಠಿ
  • ಪಲಾವ್ ಎಲೆ
  • ಗೊಡಂಬಿ
  • ಕೆಂಪು ಮೆಣಸು
  • ಗರಮ್ ಮಸಾಲ
  • ಜೀರಿಗೆ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಚಿಕನ್ ಹಾಕಿಕೊಂಡು ಕಾರಪುಡಿ, ಜೀರಿಗೆ ಪುಡಿ, ಧನ್ಯ ಪುಡಿ, ಶುಂಠಿ ಬೆಳ್ಳುಳ್ಳಿ ಪೆಸ್ಟ್, ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿಕೊಳ್ಳಬೇಕು. ನಂತರ ಮಿಕ್ಸಿ ಜಾರಿಗೆ ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಪಲಾವ್ ಎಲೆ, ಗೊಡಂಬಿ, ಕೆಂಪು ಮೆಣಸು ,ಗರಮ್ ಮಸಾಲ, ಜೀರಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಒಂದು ಬಣಾಲೆ ಯಲ್ಲಿ ರುಬ್ಬಿಕೊಂಡ ಮಿಶ್ರಣಕ್ಕೆ ಬೇಯಿಸಿಕೊಂಡ ಚಿಕನ್ ಹಾಕಿ ಹದಿನೈದು ನಿಮಿಷಗಳ ವರೆಗೆ ಬೇಯಿಸಿದರೆ ಆಯಿಲ್ ಫ್ರೀ ಚಿಕನ್ ಟಿಕ್ಕಾ ಮಸಾಲ ಸವಿಯಲು ರೆಡಿ. ಇದನ್ನೂ ಓದಿ: Masala Papad: ಟೀ ಟೈಮ್‌ಗೆ ಬೆಸ್ಟ್‌ ಗರಿಗರಿಯಾದ ಮಸಾಲಾ ಪಾಪಡ್‌

How to make Chicken Sukka without oil

Comments are closed.