Right Time To Eat Fruit :ಮಲಗುವ ಮುನ್ನ ಹಣ್ಣುಗಳನ್ನು ತಿನ್ನುವುದು ಸುರಕ್ಷಿತವೇ? ಹಣ್ಣುಗಳನ್ನು ತಿನ್ನಲು ಸೂಕ್ತ ಸಮಯ ಯಾವುದು! ಮಿಸ್ ಮಾಡದೇ ಈ ಸ್ಟೋರಿ ಓದಿ

ನಮ್ಮಲ್ಲಿ ಹೆಚ್ಚಿನವರು ರಾತ್ರಿಯಲ್ಲಿ ಸಿಹಿ ತಿನ್ನುವ ಬಯಕೆಯನ್ನು ಹೊಂದಿರುತ್ತಾರೆ . ರಾತ್ರಿ ಸಣ್ಣ ಸ್ವೀಟ್ ಪೀಸ್ , ಸಿಹಿಯಾದ ಹಣ್ಣು ಕೊನೆಯಲ್ಲಿ ಬೆಲ್ಲದ ಸಣ್ಣ ತುಂಡು ತಿಂದಾದರೂ ಮಲಗುವ ರೂಡಿ ಹಲವರಿಗೆ ಇದೆ. ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ತಮ್ಮ ಸಿಹಿ ಬಯಕೆಗಳನ್ನು ಪೂರೈಸಲು ಸ್ವೀಟ್ಸ್ ಗಳ ಬದಲು ಹಣ್ಣುಗಳತ್ತ ತಿರುಗುತ್ತಾರೆ. ಹಣ್ಣುಗಳು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ . ಮಾವಿನಹಣ್ಣು, ಸೇಬು, ಪಪ್ಪಾಯಿ, ಕಿತ್ತಳೆ, ದ್ರಾಕ್ಷಿ, ದಾಳಿಂಬೆ ಮುಂತಾದ ಹಣ್ಣುಗಳು ನಮಗೆ ವರ್ಷದ ವಿವಿಧ ಸಮಯದಲ್ಲಿಸಿಗುತ್ತವೆ .ಅವುಗಳನ್ನು ನಿಯಮಿತವಾಗಿ ಬಳಸುವ ವ್ಯಕ್ತಿಗಳಿಗೆ ದೀರ್ಘ ಆಯುಷ್ಯವಿರುತ್ತದೆ. ಹಣ್ಣುಗಳು ವಿಟಮಿನ್‌, ಖನಿಜಾಂಶ, ಪೋಷಕಾಂಶಗಳನ್ನು ಹೊಂದಿರುವ ಉತ್ತಮ ಆಹಾರ. ಈ ದಿನಗಳಲ್ಲಿ ನಮ್ಮ ಶರೀರಕ್ಕೆ ಹಿಂದೆಂದಿಗಿಂತ ಹೆಚ್ಚು ವಿಟಮಿನ್ ಮತ್ತು ಮಿನರಲ್ ಗಳ ಅಗತ್ಯ ಇದೆ . ಹೀಗಾಗಿ ಗರ್ಭಿಣಿ ಸ್ತ್ರೀಯರಿಗೂ ಕೂಡ ಹಣ್ಣುಗಳನ್ನು ನಿಯಮಿತವಾಗಿ ತಿನ್ನಲು ಸಲಹೆ ನೀಡುತ್ತಾರೆ. ಆದರೆ ರಾತ್ರಿಯಲ್ಲಿ ಹಣ್ಣುಗಳನ್ನು ತಿನ್ನುವುದು ಆರೋಗ್ಯಕರವೇ ಅಥವಾ ಇಲ್ಲವೇ ಎಂಬ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಆಯುರ್ವೇದದ ಪ್ರಕಾರ ಸಂಜೆ 4 ಗಂಟೆಯ ನಂತರ ಹಣ್ಣುಗಳನ್ನು ತಿನ್ನಬಾರದು. ರಾತ್ರಿ ಹಣ್ಣುಗಳನ್ನು ತಿನ್ನುವುದು ಯಾಕೆ ಉಚಿತವಲ್ಲ ಎನ್ನಲು ಕಾರಣಗಳು (Right Time To Eat Fruit):

ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳ:
ಅನೇಕ ಹಣ್ಣುಗಳು ಸಕ್ಕರೆಯಲ್ಲಿ ಅಧಿಕವಾಗಿರುತ್ತವೆ ಮತ್ತು ರಾತ್ರಿಯ ಊಟದ ಮೊದಲು ಅವುಗಳನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆ ಖಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಭಾರತದ ಹೆಚ್ಚಿನ ಜನರು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಕೆಲವು ಹಣ್ಣುಗಳನ್ನು ತಿನ್ನುವುದು ಈ ಅಪಾಯವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ, ಮಲಗುವ ಮುನ್ನ ಕೆಲವು ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು.

ಇತರ ಪೋಷಕಾಂಶಗಳ ನಷ್ಟ:
ಹಣ್ಣುಗಳ ವಿಷಯಕ್ಕೆ ಬಂದಾಗ, ಹೆಚ್ಚಿನ ಜನರು ತರಕಾರಿಗಳು ಮತ್ತು ಪ್ರೋಟೀನ್‌ಗಳಂತಹ ಇತರ ಆಹಾರ ಪೂರಕಗಳನ್ನು ಬಿಟ್ಟುಬಿಡುತ್ತಾರೆ. ಏಕೆಂದರೆ ಅವರು ತಮ್ಮ ಆಹಾರದ ವೇಳಾಪಟ್ಟಿಯನ್ನು ನಿರ್ವಹಿಸುವಾಗ ಹಣ್ಣುಗಳನ್ನು ಸರಿಹೊಂದಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರೊಟಿನ್ , ಕಾರ್ಬೋಹೈಡ್ರೇಟ್ ಮುಂತಾದ ಅವಶ್ಯಕ ವಿಟಮಿನ್ಗಳ ಕೊರತೆ ಇಂದ ದೇಹದಲ್ಲಿ ಹೆಚ್ಚುವರಿ ತೊಡಕುಗಳನ್ನು ಉಂಟಾಗಬಹುದು.

ನಿಮ್ಮ ನಿದ್ರೆಗೆ ಭಂಗ ತರಬಹುದು
ರಾತ್ರಿಯ ಊಟದ ಸಮಯದಲ್ಲಿಅಥವಾ ಮಲಗುವ ಮುನ್ನ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಎನರ್ಜಿ ಸಿಗುವುದರಿಂದ ನೀವು ಆಳವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ ಮತ್ತು ಸುಲಭವಾಗಿ ವಿಚಲಿತರಾಗಬಹುದು.

ಯಾವ ಸಮಯದಲ್ಲಿ ಹಣ್ಣುಗಳನ್ನು ಸೇವಿಸುವುದು ಉತ್ತಮ?

ಬೆಳಗಿನ ಉಪಾಹಾರಕ್ಕಾಗಿ ಹಣ್ಣುಗಳನ್ನು ಸೇವಿಸಬೇಕು. ಏಕೆಂದರೆ ಅವು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ದಣಿದ ಭಾವನೆಯಿಲ್ಲದೆ ಕೆಲಸ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಮಾವು , ಪಪ್ಪಾಯಿ, ಸೇಬು, ಮುಸುಂಬಿ ಹೀಗೆ ಹಲವಾರು ಹಣ್ಣುಗಳನ್ನೂ ನಮ್ಮ ಬೆಳಗ್ಗಿನ ಉಪಹಾರದಲ್ಲಿ ಸೇರಿಸುದರಿಂದ ಇಡೀ ದಿನಕ್ಕೆ ಬೇಕಾದ ಎನರ್ಜಿಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ :Solo Trip In India:ಭಾರತದಲ್ಲಿ ನೀವು ಸೋಲೋ ಆಗಿ ಪ್ರಯಾಣಿಸಬಹುದಾದ 5 ಸ್ಥಳಗಳು

(Right Time To Eat Fruit)

Comments are closed.