Solo Trip In India:ಭಾರತದಲ್ಲಿ ನೀವು ಸೋಲೋ ಆಗಿ ಪ್ರಯಾಣಿಸಬಹುದಾದ 5 ಸ್ಥಳಗಳು:

“ಲೈಫ್ ಮೆ ಘುಮಾ ನಹೀ ತೋ ಫಿರ್ ಕ್ಯಾ ಹಿ ಕಿಯಾ” ಎಂದು ಹಿಂದಿಯಲ್ಲಿ ಮಾತಿದೆ. ವಿಶೇಷವಾಗಿ ಭಾರತದಲ್ಲಿ, ಅನೇಕ ಸ್ಥಳಗಳು ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ಪ್ರಾಮುಖ್ಯತೆಯಿಂದ ತುಂಬಿವೆ. ಹಾಗಾಗಿ ನೀವು ಈ ಕೆಳಗಿನ ಉಲ್ಲಾಸಕರ ಸ್ಥಳಗಳಿಗೆ ಒಂದು ಸಲವಾದರೂ ಭೇಟಿ ನೀಡಲೇಬೇಕು.ನೀವು ಸೋಲೋ ಆಗಿ ಪ್ರಯಾಣಿಸಬಹುದಾದ 5 ಸ್ಥಳಗಳ ಪಟ್ಟಿ ಇಲ್ಲಿದೆ(Solo Trip In India):

ಋಷಿಕೇಶ, ಉತ್ತರಾಖಂಡ:
ಋಷಿಕೇಶವು ಜಗತ್ತಿನ ಯೋಗ ರಾಜಧಾನಿಯಾಗಿದೆ. ಟ್ರೆಕ್ಕಿಂಗ್, ರಿವರ್ ರಾಫ್ಟಿಂಗ್, ಬಂಗೀ ಜಂಪಿಂಗ್ ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದರಿಂದ ಸಾಹಸಿ ಜನರಿಗೆ ಇದು ಅತ್ಯುತ್ತಮ ಸ್ಥಳವಾಗಿದೆ. ಇದು ಯೋಗ ಮತ್ತು ಆಧ್ಯಾತ್ಮಿಕ ವೈಬ್‌ಗಳಿಗೆ ಹೆಸರುವಾಸಿಯಾಗಿದೆ.

ಗೋವಾ:
ಗೋವಾ ಕೇವಲ ಒಂದು ಪಾರ್ಟಿ ರಾಜಧಾನಿ ಮಾತ್ರವಲ್ಲದೆ ಎಲ್ಲರೂ ಆನಂದಿಸಬಹುದಾದ ಅನೇಕ ಅದ್ಭುತವಾದ ಬೀಚ್‌ಗಳನ್ನು ಹೊಂದಿದೆ. ನೀರಿನಲ್ಲಿಈಜಲು ಮತ್ತು ಬಿಸಿಲಿನ ವಾತಾವರಣದಲ್ಲಿ ಆಕಾಶದ ಕೆಳಗೆ ಮಲಗಲು ಬಯಸುವ ಹಾಗೂ ಏಕಾಂಗಿಯಾಗಿ ಪ್ರಯಾಣಿಸುವ ಜನರಿಗೆ ಇದು ಉತ್ತಮವಾಗಿದೆ.

ಮುಂಬೈ, ಮಹಾರಾಷ್ಟ್ರ:
ನೀವು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಅನ್ವೇಷಿಸುತ್ತಿದ್ದರೆ ಈ ಸ್ಥಳವನ್ನು ನೀವು ಎಂದಿಗೂ ತಪ್ಪಿಸಿಕೊಳ್ಳಬಾರದು. ಮುಂಬೈ, ಇದು ನಿದ್ದೆಯಿಲ್ಲದ ನಗರವಾಗಿದೆ. ಮುಂಬೈನಲ್ಲಿ ಸಾಕಷ್ಟು ಸ್ಥಳಗಳನ್ನು ಆನಂದಿಸಬಹುದು. ನೀವು ರಾತ್ರಿ ಕ್ಲಬ್ಗಳಲ್ಲಿ ಎಂಜಾಯ್ ಮಾಡಬಹುದು. ಅನೇಕ ಕೋಟೆಗಳಿಗೆ ಮತ್ತು ಅಣೆಕಟ್ಟುಗಳಿಗೆ ಭೇಟಿ ನೀಡಲೇಬೇಕು. ಅಲ್ಲದೆ, ಅಜಂತಾ ಗುಹೆಗಳಿಗೆ ಭೇಟಿ ನೀಡುವಾಗ ನೀವು ಬೋಟಿಂಗ್‌ನ ಆನಂದ ಅನುಭವಿಸಬಹುದು.
ಮುಂಬೈ ಕೂಡ ಅದ್ಭುತ ಕಡಲತೀರಗಳನ್ನು ಹೊಂದಿದೆ. ಜುಹು ಬೀಚ್, ಮೆರೈನ್ ಡ್ರೈವ್ ಮುಂಬೈನಲ್ಲಿರುವ ಕೆಲವು ಸುಂದರವಾದ ಬೀಚ್‌ಗಳು.

ಡಾರ್ಜಿಲಿಂಗ್:
ಡಾರ್ಜಿಲಿಂಗ್ ಅನ್ನು ಬೆಟ್ಟಗಳ ರಾಣಿ ಎಂದು ಪರಿಗಣಿಸಲಾಗಿದೆ. ಹಸಿರು ಚಹಾ ಸಸ್ಯಗಳು ಪರಿಸರವನ್ನು ತುಂಬಾ ಉಲ್ಲಾಸಕರವಾಗಿ ಮತ್ತು ಹಗುರವಾಗಿಸುವುದರಿಂದ ನೀವು ಶಾಂತಿಯಿಂದ ಇರುತ್ತೀರಿ ಮತ್ತು ಅಲ್ಲಿಯೇ ಇರಲು ಬಯಸುತ್ತೀರಿ. ನೀವು ರಮಣೀಯ ಸೌಂದರ್ಯ, ಕಾಂಚನಜುಂಗಾ ಶಿಖರ, ಸರೋವರಗಳು ಮತ್ತು ಇನ್ನೂ ಹೆಚ್ಚಿನದನ್ನು ವೀಕ್ಷಿಸಬಹುದು.

ಪಾಂಡಿಚೇರಿ:
ಸುಂದರ ಕಡಲತೀರಗಳು ಸೋಲೋ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಗಳಾಗಿವೆ. ಸೂರ್ಯಾಸ್ತದ ಸಮಯದಲ್ಲಿ ಕಡಲತೀರಗಳ ಸುತ್ತಲೂ ನಡೆಯಬಹುದು. ಪಾಂಡಿಚೇರಿಗೆ ಭೇಟಿನೀಡುವ ಮೂಲಕ ನೀವು ದೇಶದ ಹೊಸ ತಾಣವನ್ನು ಕಂಡುಕೊಳ್ಳುವಿರಿ.

ಇದನ್ನೂ ಓದಿ: GST Price Hike:ಮುಂದಿನ ವಾರದಿಂದ ಹಾಲು, ಅಕ್ಕಿ, ಮೊಸರು, ಇತರೆ ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆ

( Solo Trip In India to explore )

Comments are closed.