ಧರ್ಮಸ್ಥಳದ ಭಕ್ತಾದಿಗಳ ಗಮನಕ್ಕೆ : ವಸತಿ ಗೃಹಗಳ ಬುಕ್ಕಿಂಗ್ ನೆಪದಲ್ಲಿ ಸೈಬರ್ ವಂಚನೆ, ಆಡಳಿತ ಮಂಡಳಿಯಿಂದ ಎಚ್ಚರಿಕೆ
ಬೆಳ್ತಂಗಡಿ : Attention Dharmasthala devotees: ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಪಾರ. ಆದರೆ ಈ ಭಕ್ತಾದಿಗಳಿಗೆ ಸೈಬರ್ ವಂಚಕರ ಕಾಟ ಎದುರಾಗಿದ್ದು ಈ ಸಂಬಂಧ ಇದೀಗ ಸ್ವತಃ ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಸಂದೇಶ ಹೊರಡಿಸಿದೆ. ವಸತಿ ಗೃಹಗಳ ಬುಕ್ಕಿಂಗ್ ಹೆಸರಿನಲ್ಲಿ ತೆರೆದುಕೊಂಡಿರುವ ನಕಲಿ ವೆಬ್ಸೈಟ್ ಜಾಲಗಳ ಬಗ್ಗೆ ಭಕ್ತಾದಿಗಳನ್ನು ಎಚ್ಚರಿಸಿದೆ.
ಈ ಸಂಬಂಧ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ನಕಲಿ ವೆಬ್ಸೈಟ್ಗಳು, ಫೋನ್ ಕರೆಗಳು ಅಥವಾ ವಾಟ್ಸಾಪ್ ಸಂದೇಶಗಳ ಮೂಲಕ ನಡೆಯುವ ನಕಲಿ ವಸತಿಗೃಹಗಳ ಬುಕ್ಕಿಂಗ್ ಬಗ್ಗೆ ಎಚ್ಚರಿಕೆಯಿಂದಿರಿ.
ಶ್ರೀ ಕ್ಷೇತ್ರ ಧರ್ಮಸ್ಥಳದ ಅತಿಥಿ ಗೃಹಗಳ ಮುಂಗಡ ಕಾಯ್ದಿರಿಸುವಿಕೆ ಕೇವಲ ಅಧಿಕೃತ ವೆಬ್ಸೈಟ್ http://www.shridharmasthala.org ಮೂಲಕ ಮಾತ್ರ ಮಾಡಬಹುದಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಆ್ಯಪ್ ಅಥವಾ ಪ್ಲಾಟ್‌ಫಾರ್ಮ್‌ಗಳ ಮೂಲಕ ಬುಕ್ಕಿಂಗ್ ಮಾಡಲು ಅವಕಾಶವಿರುವುದಿಲ್ಲ ಎಂದು ಜನಜಾಗೃತಿ ಸಂದೇಶ ರವಾನಿಸಿದೆ.
Also Read: ಮಂಗಳೂರಿನಲ್ಲಿ ಬಾಲಕಿ ಗ್ಯಾಂಗ್ ರೇಪ್, ಕೊಲೆ ಪ್ರಕರಣ: 3 ಅಪರಾಧಿಗಳಿಗೆ ಮರಣದಂಡನೆ ಖಚಿತಪಡಿಸಿದ ಹೈಕೋರ್ಟ್
ಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ ಈ ಸಂದರ್ಭದ ಲಾಭ ಪಡೆದು ಸೈಬರ್ ವಂಚಕರು ವಸತಿಗೃಹಗಳ ವಂಚನೆ ಹೆಸರಿನಲ್ಲಿ ಭಕ್ತಾದಿಗಳಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಿದೆ.ಮಂಗಳೂರಿನಲ್ಲಿ ಬಾಲಕಿ ಗ್ಯಾಂಗ್ ರೇಪ್, ಕೊಲೆ ಪ್ರಕರಣ: 3 ಅಪರಾಧಿಗಳಿಗೆ ಮರಣದಂಡನೆ ಖಚಿತಪಡಿಸಿದ ಹೈಕೋರ್ಟ್
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಕಲಿ ಸೈಬರ್ ಜಾಲದ ಬಗ್ಗೆ ಮಾಹಿತಿ ನೀಡಿರುವ ದೇವಸ್ಥಾನದ ಆಡಳಿತ ಮಂಡಳಿ ಜೊತೆಯಲ್ಲಿ ದೇವಸ್ಥಾನದ ಅಧಿಕೃತ ವೆಬ್ಸೈಟ್ ಬಗ್ಗೆಯೂ ಮಾಹಿತಿ ನೀಡಿದೆ. ಹೀಗಾಗಿ ಭಕ್ತಾದಿಗಳು ಧರ್ಮಸ್ಥಳ ದೇಗುಲದ ಅಧಿಕೃತ ವೆಬ್ಸೈಟ್ ಖಾತೆಯ ಮೂಲಕವೇ ಬುಕ್ಕಿಂಗ್ ಮಾಡುವ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.



