Dog Bites : ಒಂದೇ ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಜನರಿಗೆ ನಾಯಿ ಕಡಿತ : 26 ಮಂದಿ ಸಾವು

ಮಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು, ಅರಮನೆ ನಗರಿ ಮೈಸೂರಿನ ಬೆನ್ನಲ್ಲೇ ಇದೀಗ ಬಂದರು ನಗರಿ ಮಂಗಳೂರಲ್ಲಿ ಬೀದಿನಾಯಿಗಳ ದಾಳಿ (Dog Bites) ಪ್ರಕರಣ ಹೆಚ್ಚುತ್ತಿದೆ. ಮಂಗಳೂರು ನಗರದ ಕುಂಪಲದಲ್ಲಿ ಬೀದಿ ನಾಯಿ ವ್ಯಕ್ತಿಯೋರ್ವರ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ.
ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ 2 ಲಕ್ಷದ 86 ಸಾವಿರಕ್ಕೂ ಅಧಿಕ ಜನರಿಗೆ ನಾಯಿ ಕಚ್ಚಿದ್ದು, ಈಗಾಗಲೇ 26 ಮಂದಿ ನಾಯಿಗಳ ದಾಳಿಯಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಬೀದಿ ನಾಯಿಗಳು ಮಕ್ಕಳು, ಹಿರಿಯ ಮೇಲೆ ಹೆಚ್ಚಾಗಿ ದಾಳಿ ನಡೆಸುತ್ತಿವೆ.
ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 2025ರ ಜನವರಿಯಿಂದ ಅಕ್ಟೋಬರ್ ವರೆಗೆ ಸುಮಾರು 26 ಮಂದಿ ಬೀದಿ ನಾಯಿ ದಾಳಿಗೆ ತುತ್ತಾಗಿ ಜೀವ ತೆತ್ತಿದ್ದಾರೆ.
ಭಾರತದಲ್ಲಿ 2018ರಲ್ಲಿ 75 ಲಕ್ಷದ 70 ಸಾವಿರಕ್ಕೂ ಅಧಿಕ ಮಂದಿಗೆ ನಾಯಿ ಕಡಿತ ಉಂಟಾಗಿದ್ರೆ, 2020ರಲ್ಲಿ47 ಲಕ್ಷಕ್ಕೂ ಅಧಿಕ ಪ್ರಕರಣ, 2021ರಲ್ಲಿ 32 ಲಕ್ಷ ಪ್ರಕರಣಗಳು ವರದಿಯಾಗಿವೆ. 2023ರಲ್ಲಿ 30.5 ಲಕ್ಷ, 2024ರಲ್ಲಿ 37 ಲಕ್ಷಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ : ಜಮೆಯಾಗದ ಅಡಿಕೆ ವಿಮೆ.. ಸರ್ಕಾರಕ್ಕೆ ಪತ್ರ ಬರೆಯಲು ದಕ್ಷಿಣ ಕನ್ನಡ ರೈತರ ನಿರ್ಧಾರ
ಕರ್ನಾಟಕ ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಹುಬ್ಬಳ್ಳಿ ನಗರಗಳಲ್ಲಿ ರಾತ್ರಿ ಪಾಳಯದಲ್ಲಿ ಉದ್ಯೋಗ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಕೆಲಸ ಮುಗಿಸಿ ಮನೆಗೆ ಮರಳುವವರ ಮೇಲೂ ನಾಯಿಗಳು ದಾಳಿ ನಡೆಸುತ್ತಿವೆ.
ಮಂಗಳೂರು ನಗರದ ಕರಂಗಲ್ಪಾಡಿ, ಮಲ್ಲಿಕಟ್ಟೆ, ಉರ್ವಾ, ಕಾವೂರು, ಸೆಂಟ್ರಲ್ ಮಾರ್ಕೇಟ್, ಕಂಕನಾಡಿ ಮಾರ್ಕೇಟ್ ಬಿಕರ್ನಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ.
ಇದನ್ನೂ ಓದಿ : ದ್ವಿಚಕ್ರ ವಾಹನ ಓಡಿಸಿದ ಪುತ್ರ : ತಾಯಿಗೆ 26 ಸಾವಿರ ದಂಡ ವಿಧಿಸಿದ ಕೋರ್ಟ್
ಪ್ರತೀ ವರ್ಷ ಮಹಾನಗರ ಪಾಲಿಗೆಗಳು ನಾಯಿಗಳ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗಾಗಿ 50 ಲಕ್ಷ ರೂಪಾಯಿ ಹಣವನ್ನು ಮೀಸಲಿಡುತ್ತಿವೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳ ಅಸಡ್ಡೆಯಿಂದಾಗಿ ನಾಯಿ ದಾಳಿಗಳ ಪ್ರಕರಣ ಹೆಚ್ಚುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.
Dog Bites Surge Over 2 Lakh Cases and 26 Deaths in a Single Year



