School Bus Accident : ಕಲ್ಲಡ್ಕ- ಶಾಲಾ ಬಸ್ ಮೇಲೆ ಬಿದ್ದ ಮರ, ಬಾಲಕಿ ಸಾವು, ನಾಲ್ವರು ಮಕ್ಕಳಿಗೆ ಗಾಯ
ಸಂಜೆ ಶಾಲೆಯ ಮುಗಿಯುತ್ತಿದ್ದಂತೆಯೇ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ ಬಸ್ ಮಾಣಿ ಮೂಲಕ ಭರಣಿಕೆರೆ, ಕಲ್ಲೆಟ್ಟಿಗೆ ತೆರಳಿ, ಅಲ್ಲಿಂದ ಪೆರ್ನೆಗೆ ಸಂಚಾರ ಮಾಡಬೇಕಿತ್ತು. ಆದರೆ ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿನ ಕಲ್ಲೇಟಿ ಬಳಿಯಲ್ಲಿ ಮರವೊಂದು ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದಿದೆ

ಮಂಗಳೂರು : ಶಾಲಾ ಬಸ್ ಮೇಲೆ ಮರವೊಂದು ಉರುಳಿ ಬಿದ್ದು ಬಾಲಕಿಯೋರ್ವಳು ಮೃತಪಟ್ಟು, ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಬಳಿಯ ಕಲ್ಲೆಟ್ಟಿ ಎಂಬಲ್ಲಿ ಡನೆದಿದೆ. ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲ್ಲಡ್ಕದ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಎಂದು ತಿಳಿದು ಬಂದಿದೆ.
ಕಲ್ಲಡ್ಕದ ಶ್ರೀರಾಮ ಆಂಗ್ಲಮಾಧ್ಯಮ ಶಾಲೆಯ ಎಲ್ಕೆಜಿ ವಿದ್ಯಾರ್ಥಿನಿ ಬಂಟ್ವಾಳ ತಾಲೂಕಿನ ಬಿಳಿಯೂರಿನ ತೋಟ ಹೌಸ್ನ ಚಂದ್ರಶೇಖರ ಮತ್ತು ಅನಿತಾ ದಂಪತಿಗಳ ಪುತ್ರಿಯಾಗಿರುವ ಚಿರನ್ವಿ ( 6 ವರ್ಷ) ಮೃತಪಟ್ಟ ಬಾಲಕಿ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ಅನ್ವಿ ಎಂಬಾಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ, ಪೆರ್ನೆಯ ನಿವಾಸಿ ಕ್ಷಿತಿ ರೈಯನ್ನು ಕಲ್ಕಡ್ಕದ ಪುಷ್ಪರಾಜ್ ಆಸ್ಪತ್ರಗೆ ದಾಖಲಿಸಲಾಗಿದೆ. ಉಳಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಂಜೆ ಶಾಲೆಯ ಮುಗಿಯುತ್ತಿದ್ದಂತೆಯೇ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ ಬಸ್ ಮಾಣಿ ಮೂಲಕ ಭರಣಿಕೆರೆ, ಕಲ್ಲೆಟ್ಟಿಗೆ ತೆರಳಿ, ಅಲ್ಲಿಂದ ಪೆರ್ನೆಗೆ ಸಂಚಾರ ಮಾಡಬೇಕಿತ್ತು. ಆದರೆ ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿನ ಕಲ್ಲೇಟಿ ಬಳಿಯಲ್ಲಿ ಮರವೊಂದು ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದಿದೆ. ಇದರಿಂದಾಗಿ ಬಸ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಬಸ್ಸಿನಲ್ಲಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಬಂಟ್ವಾಳದ ಶಾಕಸರಾದ ರಾಜೇಶ್ ನಾಯಕ್ ಅವರು ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ವಿಳಂಭವಿಲ್ಲದೆ ತುರ್ತು ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದಾರೆ. ಈ ಕುರಿತು ಸ್ಥಳಕ್ಕೆ ಬಂಟ್ವಾಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Kalladka Sri Rama English medium School Bus Accident Girls dies, four children Injured

