kukke subramanya champa Shashti : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಸಂಭ್ರಮ : ಹರಿದುಬಂದ ಭಕ್ತಸಾಗರ

kukke subramanya champa Shashti : ಕುಕ್ಕೆ ಸುಬ್ರಹ್ಮಣ್ಯ : ನಾಡಿನಾದ್ಯಂತ ಇಂದು ಚಂಪಾಷಷ್ಠಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಾನದ ಚಂಪಾಷಷ್ಠಿಯ ಸಂಭ್ರಮ ಮುಗಿಲು ಮುಟ್ಟಿದೆ.
ಕುಕ್ಕೆ ಸನ್ನಿಧಾನದಲ್ಲಿ ನಡೆಯುವ ಚಂಪಾಷಷ್ಠಿಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರ ಸಂಖ್ಯೆ ಅಗಣಿತ ಪ್ರಮಾಣದಲ್ಲಿ ಹರಿದುಬಂದಿತ್ತು.
ಈ ದಿನದಂದು ಕುಕ್ಕೆಯಲ್ಲಿ ಬ್ರಹ್ಮರಥೋತ್ಸವ ನಡೆಯುವುದರಿಂದ ಬ್ರಹ್ಮರಥದಲ್ಲಿ ಸುಬ್ರಹ್ಮಣ್ಯಸ್ವಾಮಿಯನ್ನು ರಥಾರೂಢಗೊಳಿಸಲಾಗಿದೆ. ಮತ್ತೊಂದು ರಥದಲ್ಲಿ ಉಮಾಮಹೇಶ್ವರ ದೇವರ ತೇರನ್ನು ಎಳೆಯುವುದು ಈ ದಿನದ ಸಂಪ್ರದಾಯವಾಗಿದೆ.
ಇನ್ನು ಚಂಪಾಷಷ್ಠಿಯಲ್ಲಿ ಭಾಗಿಯಾಗಲು ಇಂದು ಧಾರ್ಮಿಕದತ್ತಿ ಇಲಾಖೆ ಸಚಿವರಾದ ರಾಮಲಿಂಗರೆಡ್ಡಿ ಕುಕ್ಕೆಗೆ ಆಗಮಿಸಿದ್ದಾರೆ. ರಥೋತ್ಸವದ ಸಂಭ್ರಮದಲ್ಲಿ ಸಂಪ್ರದಾಯದಂತೆ ಭಕ್ತರು ಕಾಳುಮೆಣಸು ಸೇರಿದಂತೆ ಧನ-ಧಾನ್ಯಗಳನ್ನು ಋತಕ್ಕೆ ಎರಚುವ ಮೂಲಕ ತಮ್ಮ ಭಕ್ತಿಭಾವ ಪ್ರದರ್ಶಿಸಿದರು.
ಇದನ್ನೂ ಓದಿ : ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ, ಹರಿದು ಬಂದ ಭಕ್ತ ಸಾಗರ
ಚಂಪಾಷಷ್ಠಿ ಮಹೋತ್ಸವವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು ಭಾರೀ ಸಂಖ್ಯೆಯಲ್ಲಿ ಜನಸ್ತೋಮವೇ ನೆರೆದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಸೆಂಬರ್ 2ನೇ ತಾರೀಖಿನವರೆಗೂ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಇರಲಿದೆ.
ಈ ಜಾತ್ರಾ ಮಹೋತ್ಸವದಲ್ಲಿ 60 ಸಾವಿರಕ್ಕೂ ಅಧಿಕ ಜನರು ಸೇರುವ ಹಿನ್ನೆಲೆಯಲ್ಲಿ ಯಾವುದೇ ದುಷ್ಕೃತ್ಯ ಸಂಭವಿಸಿದಂತೆ ಜಿಲ್ಲಾಡಳಿತ ಸಕಲ ಕ್ರಮ ಕೈಗೊಂಡಿದೆ. ಕಿಡಿಗೇಡಿಗಳಿಂದ ಯಾವುದೇ ಹಾನಿ ಸಂಭವಿಸದಂತೆ ಮದ್ಯದಂಗಡಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ : ದ್ವಿಚಕ್ರ ವಾಹನ ಓಡಿಸಿದ ಮಗ, ತಾಯಿಗೆ 26 ಸಾವಿರ ರೂಪಾಯಿ ದಂಡ
kukke subramanya champa Shashti Rathotsava



