ಮಂಗಳೂರು : ಮಕ್ಕಳಿಗೆ ಶಾಲೆ ರಜೆ, ಡಿಡಿಪಿಐ ಹೊಸ ಆದೇಶ
Mangalore School holiday : ಮಂಗಳೂರು : ಭಾರೀ ಮಳೆಯ ಹಿನ್ನೆಲೆಯಲ್ಲಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಕೆಲವು ದಿನ ರಜೆ ನೀಡಲಾಗಿತ್ತು. ಮಳೆಯ ಕಾರಣಕ್ಕೆ ಮಕ್ಕಳು ಶಾಲೆಯ ರಜೆಯ ಮಜಾ ಅನುಭವಿಸಿದ್ದರು. ಆದ್ರೀಗ ಶಿಕ್ಷಣ ಇಲಾಖೆ ಮಕ್ಕಳಿಗೆ ಶಾಕ್ ಕೊಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಳೆಯಿಂದ ನೀಡಲಾಗಿದ್ದ ರಜಾ ದಿನಗಳಲ್ಲಿ ಶನಿವಾರದಂದು ತರಗತಿ ನಡೆಸಿ, ರಜೆಯನ್ನು ಸರಿದೂಗಿಸುವಂತೆ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಶಿಧರ್ ಅವರು ಆದೇಶ ಹೊರಡಿಸಿದ್ದು, ಮುಖ್ಯೋಪಾಧ್ಯಾಯರಿಗೆ ರಜೆಯ ತರಗತಿ ಸರಿದೂಗಿಸಿ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿತ್ತು. ಈ ರಜೆ ದಿನಗಳನ್ನು ಸರಿದೂಗಿಸುವಂಗತೆ ಸೂಚಿಸಿದೆ.
ಇದನ್ನೂ ಓದಿ : ಶಿಕ್ಷಕರಿಗೆ ಇನ್ಮುಂದೆ ಹಾವು ಹಿಡಿಯುವ ಕೆಲಸ, ಸರಕಾರದಿಂದ ಹೊಸ ಆದೇಶ
ಕೇವಲ ಶಿಕ್ಷಣ ಇಲಾಖೆ ಮಾತ್ರವಲ್ಲದೇ, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ ಮೂಲಕ ಪದವಿ ಪೂರ್ವ ಕಾಲೇಜುಗಳಲ್ಲಿಯೂ ಹೆಚ್ಚುವರಿ ತರಗತಿಗಳನ್ನು ನಡೆಸುವಂತೆ ಸೂಚಿಸಿದೆ.
ಬಾರೀ ಮಳೆ ಅತೀ ಹೆಚ್ಚು ರಜೆ
ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ವರ್ಷವೇ ಅತೀ ಹೆಚ್ಚು ಬಾರಿ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಈ ಬಾರಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿತ್ತು.
ಕಳೆದ 2 ವರ್ಷಗಳಿಂದಲೂ ಅತಿಯಾದ ಮಳೆ ಬಂದಾಗ, ಜಿಲ್ಲಾಡಳಿತ ರಜೆಯನ್ನು ಘೋಷಿಸಿತ್ತು. ನಂತರ ಶನಿವಾರದಂದು ಇಡೀ ದಿನ ತರಗತಿಗತಿ ನಡೆಸುವ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡಿಕೊಂಡು ಬರುತ್ತಿದೆ.
ಇದನ್ನೂ ಓದಿ : ಕರಾವಳಿಯಲ್ಲಿ ಬಾರೀ ಮಳೆ : 6 ಜಿಲ್ಲೆಗಳಿಗೆ ರಜೆ ಘೋಷಣೆ
Mangalore School holiday for Students DDPI new order in Kannada news



