ಶಿಕ್ಷಕರಿಗೆ ಇನ್ಮುಂದೆ ಹಾವು ಹಿಡಿಯುವ ಕೆಲಸ..! ಸರಕಾರದಿಂದ ಹೊಸ ಆದೇಶ ಜಾರಿ

ಕಾಸರಗೋಡು : ಚುನಾವಣಾ ಕರ್ತವ್ಯ, ಜನಗಣತಿ, ಜಾತಿಗಣತಿ, ಬಿಸಿಯೂಟ, ಮೊಟ್ಟೆ ನೀಡುವುದು ಸೇರಿದಂತೆ ಶಿಕ್ಷಕರಿಗೆ ನಾನಾ ರೀತಿಯಲ್ಲಿ ಸರಕಾರ ಹೊರೆ ಹೊರಿಸಿದೆ. ಇನ್ಮುಂದೆ ಶಿಕ್ಷಕರು ಹಾವು ಹಿಡಿಯುವ ಕೆಲಸವನ್ನೂ ಮಾಡಬೇಕು. ಈ ಕುರಿತು ಸರಕಾರ ಆದೇಶ ಹೊರಡಿಸಿದೆ.

ಶಿಕ್ಷಕರು ಕೇವಲ ಪಾಠ ಮಾಡೋದಕ್ಕೆ ಮಾತ್ರವಲ್ಲ, ಶಾಲಾ ಪರಿಸರಕ್ಕೆ ಬರುವ ಹಾವುಗಳನ್ನು ಕೂಡ ಶಿಕ್ಷಕರೇ ಹಿಡಿಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಹಾವು ಹಿಡಿಯುವ ಅರಣ್ಯ ಇಲಾಖೆಯ ನೇತೃತ್ವದಲ್ಲಿ ತರಬೇತಿ ನೀಡಲು ಸರಕಾರ ಮುಂದಾಗಿದೆ.

ಶಾಲಾ ಆವರಣ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ವೈಜ್ಞಾನಿಕವಾಗಿ ಹಾವುಗಳನ್ನು ಹಿಡಿಯುವುದು ಹೇಗೆ ಎಂಬ ತರಬೇತಿಯನ್ನು ಶಿಕ್ಷಕರಿಗೆ ನೀಡಲಾಗುತ್ತದೆ. ಒಟ್ಟು ಎರಡು ಹಂತಗಳಲ್ಲಿ ತರಬೇತಿ ನೀಡಲು ಸರಕಾರ ಚಿಂತನೆ ನಡೆಸಿದೆ.

ಅಂದಹಾಗೆ ಈ ಆದೇಶ ಜಾರಿ ಮಾಡ್ತಾ ಇರೋದು ಕೇರಳ ಸರಕಾರ. ಕೇರಳದಲ್ಲಿ 2019ರಲ್ಲಿ 123 ಮಂದಿ ಹಾವು ಕಡಿತದಿಂದ ಸಾವನ್ನಪ್ಪಿದ್ದರು. 2024ರಲ್ಲಿ ಈ ಸಂಖ್ಯೆ 34ಕ್ಕೆ ಇಳಿಕೆಯಾಗಿದೆ. ಕಳೆದ 10 ವರ್ಷಗಳಲ್ಲಿ 921 ಮಂದಿ ವಿಷಕಾರಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎನ್ನುತ್ತಿದೆ ಅರಣ್ಯ ಇಲಾಖೆಯ ಅಂಕಿಅಂಶಗಳು.

ಇದೇ ಕಾರಣದಿಂದಲೇ ಕೇರಳ ಸರಕಾರ ಸರ್ಪ ಆಪ್‌ ಜಾರಿ ಮಾಡಿದ್ದು, ಇದೀಗ 5 ವರ್ಷಗಳನ್ನು ಪೂರೈಸುತ್ತಿದೆ. ಈ ಹೊತ್ತಲ್ಲೇ ಕೇರಳ ಸರಕಾರ ಶಿಕ್ಷಕರಿಗೆ ತರಬೇತಿ ನೀಡುವ ಯೋಜನೆಯನ್ನು ರೂಪಿಸಿದೆ.

ಇದನ್ನೂ ಓದಿ : ಎಂಬಿಎ ಪದವೀಧರರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಕೇರಳದ ಕೆಲವು ಜಿಲ್ಲೆಗಳಲ್ಲಿನ ಶಾಲೆಗಳು ಅರಣ್ಯ ಇಲಾಖೆಗೆ ಹೊಂದಿಕೊಂಡಿವೆ. ಶಾಲಾ ಆವರಣದಲ್ಲಿ ಮಕ್ಕಳು ಹಾವುಗಳ ಕಡಿತಕ್ಕೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿಯೇ ಈ ತರಬೇತಿ ನೀಡಲಾಗುತ್ತಿದೆ.

ಮೊದಲ ಹಂತದಲ್ಲಿ ಪಾಲಕ್ಕಾಡು ಜಿಲ್ಲೆಯ ಶಿಕ್ಷಕರಿಗೆ ಹಾವು ಹಿಡಿಯುವ ತರಬೇತಿ ನೀಡಲಾಗುತ್ತದೆ. ಆಗಸ್ಟ್‌ 11 ರಂದು ಪಾಲಕ್ಕಾಡ್‌ ಜಿಲ್ಲೆಯ ಶಿಕ್ಷಕರಿಗೆ ತರಬೇತಿ ಕೊಡಿಸಲಾಗುತ್ತಿದೆ.

ಏನಿದು ಸರ್ಪ ಆಪ್‌ ?

ಸರ್ಪ್‌ (Snake Awareness, Rescue, and Protection App) ಅಪ್‌ ಇದು ಕೇರಳದ ಅರಣ್ಯ ಇಲಾಖೆಯ ಅಭಿವೃದ್ದಿ ಪಡಿಸಿರುವ ಮೊಬೈಲ್‌ ಅಪ್ಲಿಕೇಶನ್.‌

ಹಾವುಗಳ ಬಗ್ಗೆ ಅರಿವು ಮೂಡಿಸುವುದು, ಅವುಗಳನ್ನು ರಕ್ಷಿಸುವುದು ಮತ್ತು ಅವುಗಳಿಗೆ ಸಂಬಂಧಿಸಿದ ಘಟನೆಗಳನ್ನು ನಿರ್ವಹಿಸುವುದು ಇದರ ಮುಖ್ಯ ಉದ್ದೇಶ.

ಹಾವು ಕಂಡಾಗ ಸಾರ್ವಜನಿಕರು ಈ ಆಪ್‌ನಲ್ಲಿ ಅದರ ಸ್ಥಳದ ಬಗ್ಗೆ ನಿಖರವಾದ ಮಾಹಿತಿಯೊಂದಿಗೆ ವರದಿ ಮಾಡಬಹುದು. ಹತ್ತಿರದಲ್ಲಿರುವ ತರಬೇತಿ ಪಡೆದ ಉರಗ ರಕ್ಷಕರಿಗೆ ತಕ್ಷಣವೇ ಈ ಮಾಹಿತಿ ತಲುಪುತ್ತದೆ.

ಇದನ್ನೂ ಓದಿ : ಮುಂದಿನ ವಾರ 3 ದಿನ ಶಾಲೆಗಳಿಗೆ ರಜೆ

ಒಂದೊಮ್ಮೆ ಹಾವು ಕಚ್ಚಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ ಮತ್ತು ಹತ್ತಿರದ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆ್ಯಂಟಿ-ವೆನಮ್ ಚಿಕಿತ್ಸೆಯ ಬಗ್ಗೆ ಈ ಆಪ್ ಮಾಹಿತಿ ನೀಡುತ್ತದೆ.

ವಿಷಪೂರಿತ ಮತ್ತು ವಿಷರಹಿತ ಹಾವುಗಳ ಬಗ್ಗೆ ಮಾಹಿತಿ ನೀಡುವುದರಿಂದ, ಅವುಗಳನ್ನು ಗುರುತಿಸಲು ಸುಲಭವಾಗುತ್ತದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಈ ಆಪ್ ಮೂಲಕ ಹಾವು ರಕ್ಷಣಾ ಕಾರ್ಯಾಚರಣೆಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಬಹುದು.

ಹಾವುಗಳು ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ಕಡಿಮೆ ಮಾಡುವುದು ಮತ್ತು ಪರಿಸರ ವ್ಯವಸ್ಥೆಯಲ್ಲಿ ಹಾವುಗಳ ಪಾತ್ರದ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು. ಇದರಿಂದ ಹಾವುಗಳ ಅನಗತ್ಯ ಹತ್ಯೆಯನ್ನು ತಡೆಯಲು ಸಹಾಯವಾಗುತ್ತದೆ.

teachers trained in Snake catching New Order Kerala Government kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories