ಸುರತ್ಕಲ್​ : ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷನಿಂದ 1 ಕೋಟಿ ರೂಪಾಯಿ ವಂಚನೆ : ದೂರು ದಾಖಲು

ಸುರತ್ಕಲ್‌ : ಸುರತ್ಕಲ್​ ಬ್ಲಾಕ್​ ಯುವ ಕಾಂಗ್ರೆಸ್​ ಸಮಿತಿ ಉಪಾಧ್ಯಕ್ಷ (Surathkal Block Congress vice president) ಮೊಹಮ್ಮದ್​ ಕಲಂದರ್​ ನವಾಜ್​ ವಿರುದ್ಧ ಇದೀಗ ಬರೋಬ್ಬರಿ 1 ಕೋಟಿ 2 ಲಕ್ಷ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ.

ಈ ಕುರಿತು ಮಂಗಳೂರಿನ ಕಾವೂರು ಪೊಲೀಸ್‌ ಠಾಣೆಯಲ್ಲಿ ಗುತ್ತಿಗೆದಾರ ಸುರೇಶ್‌ ಕಾಮತ್‌ ಎಂಬವರು ದೂರು ದಾಖಲಿಸಿದ್ದಾರೆ. ಗುತ್ತಿಗೆದಾರ ಸುರೇಶ್​ ಕಾಮತ್​ ಅವರು ಕೆ.ಸಿ ಎಂಟರ್​ಪ್ರೈಸಸ್​ ಎಂಬ ಉದ್ಯಮ ನಡೆಸುತ್ತಿದ್ದರು. ಗುತ್ತಿಗೆದಾರರಿಗೆ ಸೆಂಟ್ರಿಂಗ್​ ಕೆಲಸಕ್ಕೆ ಬೇಕಾದ ಶೀಟ್‌, ಜಾಕ್​, ಫೋಲ್ಡಿಂಗ್​ ಹಾಗೂ ಜಾಲಿಗಳನ್ನು ಬಾಡಿಗೆ ನೀಡುವ ಕಾರ್ಯ ಮಾಡುತ್ತಿದ್ದರು.

ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷರಾಗಿರುವ ಆರೋಪಿ ಮೊಹಮ್ಮದ್‌ ಕಲಂದರ್‌ ನವಾಜ್‌ ತನ್ನ ಜೊತೆಗೆ ವ್ಯವಹಾರ ಮಾಡುತ್ತಿದ್ದು, ನನಗೆ ಕಟ್ಟಡ ನಿರ್ಮಾಣ ಕಾರ್ಯ ಹಾಗೂ ಪಿ.ಡಬ್ಲು.ಡಿ ಗುತ್ತಿಗೆ ಕೆಲಸಗಳು ಯಥೇಚ್ಛ ಪ್ರಮಾಣದಲ್ಲಿ ಸಿಕ್ಕಿದೆ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ.

ಸುರೇಶ್​ ಕಾಮತ್​ ಬಳಿಯಲ್ಲಿ ನವಾಜ್​ ಒಟ್ಟೂ 32 ಲಕ್ಷ ರೂಪಾಯಿ ಮೌಲ್ಯದ 3261 ಸೆಂಟ್ರಿಂಗ್​ ಶೀಟ್‌ ಗಳು, 35 ಲಕ್ಷ ರೂಪಾಯಿ ಮೌಲ್ಯದ 2770 ಜಾಕ್‌ಗಳು, 30 ಲಕ್ಷ ರೂಪಾಯಿ ಮೌಲ್ಯದ 750 ಸೆಟ್​ ಸ್ಕ್ಯಾಫೋಲಿಂಗ್​, 5 ಲಕ್ಷ ರೂಪಾಯಿ ಮೌಲ್ಯದ 295 ಜಾಲಿಗಳುನ್ನು ತೆಗೆದುಕೊಂಡು ಹೋಗಿದ್ದರು.

Also Read : ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಡಿಪಿಆರ್​​ಗಳಿಗೆ ಯೋಜನೆಗಳಿಗೆ ಕೇಂದ್ರದ ಅನುಮೋದನೆ

ಈ ಎಲ್ಲಾ ಸಾಮಗ್ರಿಗಳಿಗೆ ಕೇವಲ 20 ಲಕ್ಷ 68 ಸಾವಿರ ರೂಪಾಯಿ ಪಾವತಿ ಮಾಡಿದ್ದ ನವಾಜ್​ ಬಳಿಕ 4.3 ಲಕ್ಷ ರೂಪಾಯಿ ಕೈ ಸಾಲ ಪಡೆದುಕೊಂಡಿದ್ದು ಬಳಿಕ ಮೊಬೈಲ್​ ಸ್ವಿಚ್​​ ಆಫ್​ ಮಾಡಿಕೊಂಡು ಸಂಪರ್ಕಕ್ಕೆ ಸಿಗದೇ ಮೋಸ ಮಾಡಿದ್ದಾರೆ ಎಂದು ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಷ್ಟೇ ಅಲ್ಲಾ ಸುರೇಶ್​ ಕಾಮತ್‌ ಅವರ ಸ್ನೇಹಿತರಾದ ಭವಾನಿ ಶಂಕರ ಹೆಗ್ಡೆ, ಲೋಕೇಶ್​ ಅವರಿಂದಲೂ 45 ಲಕ್ಷ ಹಾಗೂ 70 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಎರಡು ಬಾರಿ ಬಾಡಿಗೆ ಪಡೆದು ಹಣ ಪಾವತಿಸದೇ ವಂಚಿಸಿರುವ ಆರೋಪ ಕೇಳಿ ಬಂದಿದೆ.

Also Read : ರಷ್ಯಾ ತೈಲ ಆಮದು ಸ್ಥಗಿತ: ವೆನೆಜುವೆಲಾದತ್ತ ಕಣ್ಣಿಟ್ಟ ಮಂಗಳೂರು ರಿಫೈನರಿ

ಇತ್ತ ಹಣವನ್ನೂ ಕೊಡದೇ, ಅತ್ತ ಸಾಮಗ್ರಿಯನ್ನು ಮರಳಿ ನೀಡದೆ ನವಾಜ್​ ವಂಚಿಸಿದ್ದು ನೊಂದ ಉದ್ಯಮಿಗಳು ಇದೀಗ ಕಾವೂರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

Surathkal Block Congress vice president Mohammad Qalandar Nawaz cheated of Rs 1 crore Complaint filed

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories