ACB RAID BBMP : ಬಿಬಿಎಂಪಿ ಕೇಂದ್ರ ಕಚೇರಿ, ಸೇರಿ 27 ಕಚೇರಿ ಮೇಲೆ ಎಸಿಬಿ ದಾಳಿ

ಬೆಂಗಳೂರು : ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ 8 ವಲಯಗಳ ಸುಮಾರು 27 ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳ (ACB RAID BBMP) ತಂಡ ದಾಳಿ ನಡೆಸಿದೆ. ಟಿಡಿಆರ್‌ ಹಾಗೂ ಟೌನ್‌ ಪ್ಲಾನಿಂಗ್‌ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಖಾತಾ ನೀಡುವ ಕಚೇರಿಗಳಲ್ಲಿ ಎಬಿಸಿ ಅಧಿಕಾರಿಗಳು ಕಡತ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಬಿಬಿಎಂಪಿಯ ಇಲಾಖೆಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ.

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಕಚೇರಿಯ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಇದೀಗ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿಯನ್ನು ನಡೆಸಿದ್ದಾರೆ. ಕೇಂದ್ರ ಕಚೇರಿ ಸೇರಿದಂತೆ ಬಿಬಿಎಂಪಿಗೆ ಸಂಬಂಧಿಸಿದ ಸುಮಾರು 27 ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಸುಮಾರು 200 ಅಧಿಕ ಅಧಿಕಾರಿಗಳ ಎಂಟು ತಂಡ ಕಡತಗಳ ಪರಿಶೀಲನೆ ನಡೆಸುತ್ತಿದೆ.

ಸಾರ್ವಜನಿಕರಿಂದ ಸಾಕಷ್ಟು ವರ್ಷಗಳಿಂದಲೂ ಬಿಪಿಎಂಪಿ ಅಧಿಕಾರಿಗಳ ವಿರುದ್ದ ಆರೋಪ ಕೇಳಿಬರುತ್ತಿತ್ತು. ಇದೀಗ ಟಿ.ವಿ.ವಿಜಯಕುಮಾರ್‌ ಎಂಬವರು ಅವರು ನೀಡಿರುವ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿದೆ. ಕೇಂದ್ರ ಕಚೇರಿ, ವಲಯ ಆಯುಕ್ತರ ವಲಯ, ಆಯುಕ್ತರ ಕಚೇರಿಯಲ್ಲಿ ದಾಳಿ ನಡೆದಿದೆ. ಅಲ್ಲದೇ ರಾಜಕಾಲುವೆ ವಿಭಾಗ, ಆರೋಗ್ಯ ವಿಭಾಗ, ಜಾಹೀರಾತು ವಿಭಾಗಗಳಲ್ಲಿಯೂ ಪರಿಶೀಲನೆ ಮುಂದುವರಿದಿದೆ. ಅಧಿಕಾರಿಗಳು ಮಧ್ಯವರ್ತಿಗಳ ಜೊತೆಗೆ ಅವ್ಯವಹಾರವನ್ನು ನಡೆಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಟಿ.ವಿ.ವಿಜಯಕುಮಾರ್‌ ಅವರು ಎಸಿಬಿ ಆಯುಕ್ತರು, ಲೋಕಾಯುಕ್ತರು ಹಾಗೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು.

ಬಿಬಿಎಂಪಿಯಲ್ಲಿನ ಭ್ರಷ್ಟಾಚಾರದ ಕುರಿತು ವಿಜಯಕುಮಾರ್‌ ಮಾಹಿತಿಯನ್ನು ಕೇಳಿದ ವೇಳೆಯಲ್ಲಿ ಅಧಿಕಾರಿಗಳು ಧಮಕಿ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿಯೂ ಅವರು ಎಸಿಬಿಗೆ ದೂರನ್ನು ನೀಡಿದ್ದಾರೆ. ಸದ್ಯಕ್ಕೆ 27 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ. ದಾಳಿ ಇನ್ನಷ್ಟು ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸಾಕಷ್ಟು ಅಧಿಕಾರಿಗಳು ಬಿಬಿಎಂಪಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಇನ್ನುಂದೆ ಬೀದಿ ಬದಿ ವ್ಯಾಪಾರಕ್ಕೂ ಬೇಕು ಸರ್ಟಿಫಿಕೇಟ್ : ನಗರದಲ್ಲಿ ಹೊಸ ನಿಯಮ ಜಾರಿ

ಇದನ್ನೂ ಓದಿ : ಬೆಂಗಳೂರಿನಲ್ಲಿ ಇನ್ನೂ ಲಸಿಕೆ ಪಡೆದಿಲ್ಲ ಲಕ್ಷಾಂತರ ಜನರು: ಲಸಿಕೆ ಪಡೆಯದವರ ಪತ್ತೆಗೆ ಪೊಲೀಸರ ಮೊರೆ ಹೋದ ಬಿಬಿಎಂಪಿ

ACB raid on BBMP head office and 27 offices across Bangalore 8 divisions

Comments are closed.