Vladimir Putin Profile: ವ್ಲಾದಿಮಿರ್ ಪುಟಿನ್: ಬೇಹುಗಾರಿಕಾ ಸಂಸ್ಥೆ ಕೆಜಿಬಿ ಏಜೆಂಟ್‌ನಿಂದ ರಷ್ಯಾವನ್ನು ಕೈಮುಷ್ಠಿಯಲ್ಲಿ ಇಟ್ಟುಕೊಂಡ ಅಧ್ಯಕ್ಷನಾಗಿ ಬೆಳೆದ ಬಗೆಯಿದು

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಆಧುನಿಕ ಯುಗದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕದೇ ಏಕೆ ಯುದ್ಧ ಮತ್ತು ಅದರ ಘೋರ ಪರಿಣಾಮಗಳನ್ನು ಎಳೆದುತರುವುದು ಎಂಬ ಪ್ರಶ್ನೆಯನ್ನು ಇಡೀ ಜಗತ್ತೇ ವ್ಲಾದಿಮಿರ್ ಪುಟಿನ್‌ಗೆ ಕೇಳುತ್ತಿದೆ. ಆದರೆ ರಷ್ಯಾ ಅಧ್ಯಕ್ಷರು ಈ ಯಾವ ಪ್ರಶ್ನೆಯನ್ನೂ ಕಿವಿಗೆ ಹಾಕಿಕೊಳ್ಳದೇ ಸಮರಕ್ಕೆ ಬದ್ಧ (Russia vs Ukraine War) ಎನ್ನುತ್ತಿದ್ದಾರೆ. ಹಾಗಿದ್ದರೆ ಯುದ್ಧದ ಹಪಾಹಪಿ (World War 3) ತೋರಿಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯಾರು?(Vladimir Putin Biography) ಅವರ ಇತಿಹಾಸವೇನು (Vladimir Putin Profile)ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ವ್ಲಾದಿಮಿರ್ ಪುಟಿನ್ ಅಕ್ಟೋಬರ್ 7, 1952 ರಂದು ಲೆನಿನ್ಗ್ರಾಡ್ನಲ್ಲಿ ಕಾರ್ಮಿಕ ವರ್ಗದ ಕುಟುಂಬದಲ್ಲಿ ಜನಿಸಿದರು. ಪುಟಿನ್ ಅವರ ತಂದೆ ಕಮ್ಯುನಿಸ್ಟ್ ಪಕ್ಷದಲ್ಲಿ ಕೆಲಸ ಮಾಡಿದ್ದವರು.ಬಾಲ್ಯದಿಂದಲೆ ಪುಟಿನ್‌ ಸಮರ ಕಲೆಗಳ ಬಗ್ಗೆ ಆಕರ್ಷಿತರಾಗಿದ್ದರು. ಅವರು ಲೆನಿನ್‌ಗ್ರಾಡ್‌ ಎಂಬಲ್ಲಿ ಜೂಡೋ ಮತ್ತು ಸ್ಯಾಂಬೊ ಕಲಿತರಲ್ಲದೇ ಅಗ್ರ ಹೋರಾಟಗಾರ ಎಂದು ಸಹ ಕರೆಸಿಕೊಳ್ಳುತ್ತಿದ್ದರು. ಪುಟಿನ್ ಬಾಲ್ಯದಿಂದಲೇ ಹೊರಾಂಗಣ ಚಟುವಟಿಕೆಗಳನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತದೆ.

ವ್ಲಾದಿಮಿರ್ ಪುಟಿನ್ ನಂತರ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧ ಬೇಹುಗಾರಿಕಾ ಸಂಸ್ಥೆಯಾಗಿರುವ ಕೆಜಿಬಿಯನ್ನು ಸೇರಿದರು. ಅಮೆರಿಕದ ಜೊತೆಗಿನ ಉದ್ವಿಗ್ನತೆಯ ನಡುವೆಯೆ 80 ರ ದಶಕದಲ್ಲಿನ ಶೀತಲ ಸಮರದ ಸಮಯದಲ್ಲಿ ಅವರು ಹಿಂದಿನ ಸೋವಿಯತ್ ಒಕ್ಕೂಟಕ್ಕೆ ಪೂರ್ವ ಜರ್ಮನ್ ಗೂಢಚಾರರನ್ನು ನೇಮಿಸಿಕೊಂಡಿದ್ದರು ಎಂದು ನಂಬಲಾಗಿದೆ.

1990 ರ ದಶಕದಲ್ಲಿ, ಪುಟಿನ್ ರಷ್ಯಾದ ಫೆಡರಲ್ ಭದ್ರತಾ ಸೇವೆಯ ನಿರ್ದೇಶಕರಾಗಿದ್ದರು. ನಂತರ ರಷ್ಯಾ ಸರ್ಕಾರದ ಮುಖ್ಯಸ್ಥರಾಗಿದ್ದ ಯೆಲ್ಟ್ಸಿನ್ ಅವರು 1999 ರಲ್ಲಿ ರಾಜೀನಾಮೆ ನೀಡಿದ್ದರಿಂದ ಪುಟಿನ್ ರಷ್ಯಾದ ಸರ್ಕಾರದ ಮುಖ್ಯಸ್ಥರಾಗಿ ನೇಮಕಗೊಂಡರು.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ವ್ಲಾದಿಮಿರ್ ಪುಟಿನ್ ತಾವು ರಷ್ಯಾದ ಶ್ರೇಷ್ಠತೆಯನ್ನು ಪುನಃಸ್ಥಾಪಿಸಲು ಬಯಸುವುದಾಗಿ ಈಗಾಗಲೇ ಹಲವೆಡೆ ಘೋಷಿಸಿಕೊಂಡಿದ್ದಾರೆ. ವ್ಲಾದಿಮಿರ್ ಪುಟಿನ್ ತಮ್ಮನ್ನು ತಾವು ರಷ್ಯಾದ ರಕ್ಷಕನೆಂದು ವ್ಯಾಖ್ಯಾನಿಸಿಕೊಂಡಿದ್ದಾರೆ. ಅಲ್ಲದೇ ಪ್ರಜೆಗಳಲ್ಲಿ ಅದೇ ಭಾವನೆಯನ್ನು ಬಿತ್ತಿದ್ದಾರೆ.

1991 ರ ಸೋವಿಯತ್ ಒಕ್ಕೂಟದ ಪತನವನ್ನು ಇಪ್ಪತ್ತನೇ ಶತಮಾನದ “ಮಹಾನ್ ಭೌಗೋಳಿಕ ರಾಜಕೀಯ ದುರಂತ” ಎಂದು ಪುಟಿನ್ ವಿವರಿಸಿದ್ದರು.  ತಮ್ಮ ಎದುರಾಳಿಗಳನ್ನು ಏನಾದರೂ ಮಾಡಿ ಹಣಿದು ಮಟ್ಟಹಾಕಲೇ ಬೇಕೆಂಬ ಉದ್ದೇಶವನ್ನು ಪುಟನ್ ಬಹು ಮುಂಚಿನಿಂದಲೂ ಹೊಂದಿದ್ದಾರೆ. ಅದಕ್ಕೆ ಉದಾಹರಣೆಯೆಂದರೆ, ಪುಟಿನ್ ಕೈಗೊಂಡಿದ್ದ ಕ್ರಮಗಳ ಟೀಕಾಕಾರರಾಗಿದ್ದ ತನಿಖಾ ಪತ್ರಕರ್ತೆ ಅನ್ನಾ ಪೊಲಿಟ್ಕೊವ್ಸ್ಕಯಾ  2006 ರ ಪುಟಿನ್ ಅವರ ಜನ್ಮದಿನದಂದು ಮಾಸ್ಕೋದಲ್ಲಿ ಕೊಲೆಯಾದರು. ಕ್ರೆಮ್ಲಿನ್ ಪ್ರಾಂತ್ಯದ ವಿಮರ್ಶಕ ಅಲೆಕ್ಸಾಂಡರ್ ಲಿಟ್ವಿನೆಂಕೊ ಅದೇ ವರ್ಷ ಲಂಡನ್‌ನಲ್ಲಿ ವಿಕಿರಣಶೀಲ ವಸ್ತುವಿನ ವಿಷಪ್ರಾಶನದಿಂದ ನಿಧನರಾದರು. ಕೆಲ ವರ್ಷಗಳ ನಂತರ ಬ್ರಿಟಿಷ್ ವಿಚಾರಣೆಯಲ್ಲಿ ಅಲೆಕ್ಸಾಂಡರ್ ಲಿಟ್ವಿನೆಂಕೊ ರಷ್ಯಾದ ಗೂಢಚಾರರಿಂದ ಕೊಲ್ಲಲ್ಪಟ್ಟರು ಎಂದು ತೀರ್ಮಾನಿಸಿತು.

ಅಧ್ಯಕ್ಷ ಪುಟಿನ್ ಅವರು 70 ರ ದಶಕದಲ್ಲಿ ಸೇಂಟ್ ಪೀಟರ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದರು. ಅವರ ಪ್ರಬಂಧದ ಶೀರ್ಷಿಕೆ: “ಅಂತರರಾಷ್ಟ್ರೀಯ ಕಾನೂನಿನಲ್ಲಿ ಅತ್ಯಂತ ಒಲವುಳ್ಳ ರಾಷ್ಟ್ರ ವ್ಯಾಪಾರ ತತ್ವ”.

ದೀರ್ಘ ಕಾಲದಿಂದಲೂ ರಷ್ಯಾದ ಅಧ್ಯಕ್ಷರಾಗಿರುವ ವ್ಲಾದಿಮಿರ್ ಪುಟಿನ್, 1983 ರಲ್ಲಿ ಲ್ಯುಡ್ಮಿಲಾ ಶ್ಕ್ರೆಬ್ನೆವಾ ಎಂಬ ಮಹಿಳೆಯನ್ನು ವಿವಾಹವಾದರು. ಅವರಿಗೆ ಮಾರಿಯಾ ಮತ್ತು ಕಟೆರಿನಾ ಎಂಬ ಇಬ್ಬರು ಮಕ್ಕಳಿದ್ದಾರೆ. ಪುಟಿನ್ ತಮ್ಮ ಮಕ್ಕಳು ಮತ್ತು ಕುಟುಂಬದ ವಿವರ ಮಾಧ್ಯಮಗಳಿಗೆ ತಿಳಿಯದಂತೆ ಗೌಪ್ಯವಾಗಿಟ್ಟಿದ್ದಾರೆ. ಆದರೆ ಪುಟಿನ್ 2014 ರಲ್ಲಿ ತಮ್ಮ ಮಡದಿಯಿಂದ ಬೇರ್ಪಟ್ಟಿದ್ದಾರೆ.

2016 ರಲ್ಲಿ ನಡೆದ ಅಮೆರಿಕ ಚುನಾವಣೆ ಸೇರಿದಂತೆ ಇತರ ದೇಶಗಳ ಚುನಾವಣೆಗಳಲ್ಲಿ ಪುಟಿನ್ ಅವರ ಆಡಳಿತವು ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಲಾಗಿದೆ. ಫೋರ್ಬ್ಸ್ ಮ್ಯಾಗಜೀನ್ ಪುಟಿನ್ ಅವರನ್ನು ಅನೇಕ ಸಂದರ್ಭಗಳಲ್ಲಿ “ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿ” ಎಂದು ಹೆಸರಿಸಿದೆ. ಕಳೆದ ವರ್ಷ ರಷ್ಯಾದ ಅಧ್ಯಕ್ಷರು ಇನ್ನೂ ಎರಡು ಅವಧಿಗೆ ಸೇವೆ ಸಲ್ಲಿಸಲು ಅವಕಾಶ ನೀಡುವ ಕಾನೂನಿಗೆ ಸಹಿ ಹಾಕಿದ್ದಾರೆ. ಅಂದರೆ ಅವರು 2036 ರವರೆಗೆ ಅಧಿಕಾರದಲ್ಲಿ ಉಳಿಯಬಹುದು.

ಇದನ್ನೂ ಓದಿ: IAF’s Mi-17V-5 helicopter crash : ರಷ್ಯಾ ನಿರ್ಮಿತ Mi-17V-5 ಚಾಪರ್​ನ ಇತಿಹಾಸ ಹಾಗೂ ಸಾಮರ್ಥ್ಯದ ಬಗ್ಗೆ ಇಲ್ಲಿದೆ ಮಾಹಿತಿ

(Vladimir Putin Profile biography political career KGB agent to president)

Comments are closed.