ಬೆಂಗಳೂರೂ ವಿಮಾನ ನಿಲ್ದಾಣದ ಬಳಿ ಸ್ಪೋಟ : 6 ಮಂದಿ ಗಾಯ, ಆಸ್ಪತ್ರೆಗೆ ದಾಖಲು

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಸ್ಪೋಟ ಸಂಭವಿಸಿದ್ದು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಮಾನ ನಿಲ್ದಾಣದ ಕಾರ್ಗೋ ಕಾಂಪ್ಲೆಕ್ಸ್ ಬಳಿಯಲ್ಲಿ ಎರಡನೇ ಟರ್ಮಿನಲ್ ಗಾಗಿ ರಸ್ತೆ ವಿಸ್ತರಣೆಯ ಕಾರ್ಯ ನಡೆಯುತ್ತಿತ್ತು. ರಸ್ತೆಗೆ ಬಣ್ಣ ಬಳಿಯುವ ಸಲುವಾಗಿ ಕಾರ್ಮಿಕರು ಬಣ್ಣಗಳನ್ನು ಸಿಲಿಂಡರ್ ಮೂಲಕ ಕಾಯಿಸುತ್ತಿದ್ದರು. ಈ ವೇಳೆಯಲ್ಲಿ ಸ್ಪೋಟ ಸಂಭವಿಸಿದೆ.

ಗಾಯಗೊಂಡವರೆಲ್ಲರೂ ಕಾರ್ಮಿಕರಾಗಿದ್ದಾರೆ. ಎಲ್ಲಾ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸ್ಪೋಟದ ತೀವ್ರತೆಗೆ ಬಣ್ಣಗಳ ದಾಸ್ತಾನಿಗೂ ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ.

Comments are closed.