ಬೆಡ್ ಬ್ಲಾಕಿಂಗ್ ದಂಧೆ : ಅಮಾನತ್ತು ಆಗಿದ್ದ 17 ಸಿಬ್ಬಂದಿ ಕೆಲಸಕ್ಕೆ ಮರು ನೇಮಕ

ಬೆಂಗಳೂರು :  ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ‌ ಬೆಳಕಿಗೆ ಬಂದ ಬೆನ್ನಲ್ಲೆರ 17 ಮಂದಿ ಮುಸ್ಲೀ ನೌಕರರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿತ್ತು. ಇದೀಗ ಎಲ್ಲಾ ಸಿಬ್ಬಂದಿಗಳನ್ನು ಮರು ನೇಮಕ‌ ಮಾಡಿಕೊಳ್ಳಲಾಗಿದೆ.

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸಿಬ್ಬಂದಿಗಳು ಬಾಗಿಯಾಗಿಲ್ಲ, ಈ ಸಿಬ್ಬಂದಿಗಳನ್ನು ಮರು ನೇಮಕ ಮಾಡಿಕೊಳ್ಳುವಂತೆ ಕ್ರಿಸ್ಟಲ್ ಇನ್ಫೋ ಸೀಸ್ಟಮ್ಸ್ ಅಂಡ್ ಸರ್ವಿಸಸ್ ಸಂಸ್ಥೆ ಅಧಿಕಾರಿಗಳು ಮನವಿ‌ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಉಸ್ತುವಾರಿ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರು ಅಮಾನತು ರದ್ದು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಇಂದು ಕೆಲಸಕ್ಕೆ ಹಾಜರಾಗುವ ಸಾಧ್ಯತೆಯಿದೆ.

ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಶಾಸಕರು ವಾರ್ ರೂಂ ನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿ ರುವ ಕುರಿತು ಆರೋಪ ಮಾಡಿದ್ದರು. ಇದರ‌‌ ಬೆನ್ನಲ್ಲೇ 17 ಮುಸ್ಲಿಂ ನೌಕರರನ್ನು ಅಮಾನತು ಮಾಡಲಾಗಿತ್ತು.

Comments are closed.