ಯಶ್ ಅಭಿಮಾನಿಗಳಿಗೆ ಬಿಗ್ ಶಾಕ್…..! ಮುಂದೂಡಿಕೆಯಾಯ್ತು ಕೆಜಿಎಫ್-2 ರಿಲೀಸ್ …!!

ಕೊರೋನಾ ಎರಡನೇ ಅಲೆಗೆ ಜನಜೀವನ ಸಂಪೂರ್ಣ ತತ್ತರಿಸಿಹೋಗಿದೆ. ಭಾರತ ಹಾಗೂ ಕರ್ನಾಟಕದಲ್ಲಂತೂ ಜನರ ಜೀವ ಉಳಿಸಿಕೊಳ್ಳೊದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿದ್ದಾರೆ. ಈ ಸಂಕಷ್ಟ ಅರಿತ ಕೆಜಿಎಫ್ ಚಿತ್ರತಂಡ ಬಹುನೀರಿಕ್ಷಿತ ಕೆಜಿಎಫ್-2 ರಿಲೀಸ್ ಡೇಟ್ ಬದಲಾಯಿಸಿದ್ದು, ಯಶ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಎದುರಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್-2 ರಿಲೀಸ್ ಲಕ್ಷಾಂತರ ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರ ತಂಡ ಜುಲೈ 16 ರಂದು ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಿತ್ತು. ಡಬ್ಬಿಂಗ್ ಮುಗಿಸಿದ್ದ ಚಿತ್ರತಂಡ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿತ್ತು.

ಆದರೆ ಈಗ ಕೊರೋನಾ ಎರಡನೇ ಅಲೆ ತೀವ್ರಗೊಂಡಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಈ ಮಧ್ಯೆ ಸಿನಿಮಾ ಇಂಡಸ್ಟ್ರಿಯ ಎಲ್ಲ ಚಟುವಟಿಕೆಗಳ ಮೇಲೂ ನಿರ್ಬಂಧ ಹೇರಲಾಗಿದೆ. ಅಲ್ಲದೇ ಸದ್ಯ ಜನರು ಕೊರೋನಾ ಸೋಂಕಿನ ಬಾಧೆ ಕಡಿಮೆಯಾದರೇ ಸಾಕು ಎಂಬ ಪರಿಸ್ಥಿತಿಯಲ್ಲಿದ್ದಾರೆ.

ಈ ಪ್ರಕೃತಿ ವಿಕೋಪದಂತಹ ಹೊತ್ತಿನಲ್ಲಿ ಸಿನಿಮಾ ರಿಲೀಸ್ ಮಾಡೋದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ನಟ ಯಶ್ ಹಾಗೂ ಚಿತ್ರತಂಡ ಜುಲೈ 16 ರ ಸಿನಿಮಾ ರಿಲೀಸ್ ಡೇಟ್ ನಿಂದ ದೂರ ಸರಿದಿದೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಸಿನಿಮಾ ರಿಲೀಸ್ ಗೆ ನವರಾತ್ರಿ ವೇಳೆಗೆ ಮುಹೂರ್ತ ಫಿಕ್ಸ್ ಮಾಡಲಾಗುತ್ತದೆ ಎನ್ನಲಾಗಿದೆ. ಅಕ್ಟೋಬರ್ 23 ಕ್ಕೆ ಚಿತ್ರ ರಿಲೀಸ್ ಮಾಡೋದಾಗಿ ಹಿಂದೊಮ್ಮೆ ಸುದ್ದಿಯಾಗಿತ್ತು. ಬಹುಷಃ ಮತ್ತೊಮ್ಮೆ ಅದೇ ಮುಹೂರ್ತ ಫಿಕ್ಸ್ ಆಗೋ ಸಾಧ್ಯತೆಯೂ ಇದೆ.

https://kannada.newsnext.live/bed-blocking-mafiya-17-workers-rejoin-war-room/

ಆದರೆ ಜುಲೈ 16 ಕ್ಕೆ ಸಿನಿಮಾ ರಿಲೀಸ್ ಆಗ್ತಿಲ್ಲ ಅನ್ನೋದರ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅಥವಾ ನಟ ಯಶ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒನ್ಲಿ ಯಶ್ ಅನ್ನೋ ಟ್ವೀಟರ್ ಪೇಜ್ ನಿಂದ  ಈ ವಿಚಾರವನ್ನು ಟ್ವೀಟ್ ಮಾಡಲಾಗಿದ್ದು, ಯಶ್ ಅಥವಾ ಪ್ರಶಾಂತ್ ನೀಲ್ ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಈ ಸುದ್ದಿ ಅಧಿಕೃತವಾಗಲಿದೆ.

https://kannada.newsnext.live/astrology-horoscope-dailyastro-3/

ಬಹುತೇಕ ಕೆಜಿಎಫ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಸಂಗತಿ ಸತ್ಯ. ಯಾಕಂದ್ರೇ ಈ ಸಂಕಷ್ಟದ ಹೊತ್ತಿನಲ್ಲಿ ಸಿನಿಮಾ ರಿಲೀಸ್ ಮಾಡಿದ್ರೇ ಜನ ಥಿಯೇಟರ್ ಗೆ ಬರೋದು ಕಷ್ಟ ಅಂತಿದ್ದಾರೆ ತಜ್ಞರು.

Comments are closed.