ಪ್ರೇಮಿಗಳ ದಿನದಂದು ಹೊಸ ದಾಖಲೆ ಬರೆದ ಬೆಂಗಳೂರು ಏರ್ಪೋರ್ಟ್ : ಗುಲಾಬಿ ರಫ್ತಿನಲ್ಲಿ ಇತಿಹಾಸ ನಿರ್ಮಾಣ
ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕವಾಗಿ ಹೊಸ ಸಾಧನಗೈದಿದೆ. ದಾಖಲೆಯ 60 ದಶಲಕ್ಷಕ್ಕೂ ಅಧಿಕ ಗುಲಾಬಿ ಹೂವುಗಳನ್ನು ವಿಶ್ವದೆಲ್ಲೆಡೆ ರಫ್ತು ಮಾಡುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಒಟ್ಟು ತೂಕದಲ್ಲಿ ಶೇ. 64 ರಷ್ಟು ಮತ್ತು ಹೂವುಗಳ ಸಂಖ್ಯೆಯಲ್ಲಿ ಶೇ. 38 ರಷ್ಟು ಏರಿಕೆ ಕಂಡು ಬಂದಿದ. ಬೆಂಗಳೂರು ಏರ್ಪೋರ್ಟ್ನಿಂದ ಒಟ್ಟು 2,700 ಮೆಟ್ರಿಕ್ ಟನ್ಗಿಂತಲೂ ಅಧಿಕ ತೂಕದ ಹೂವುಗಳನ್ನು ರವಾನಿಸಲಾಗಿದೆ.
26 ಅಂತಾರಾಷ್ಟ್ರೀಯ ತಾಣಗಳಿಗೆ ಬೆಂಗಳೂರಿನಿಂದ ಗುಲಾಬಿ ಹೂವು ಸರಬರಾಜಾಗಿದೆ. ಇದರಲ್ಲಿ ಸಿಂಗಾಪುರ ಮೊದಲ ಸ್ಥಾನ ಪಡೆದುಕೊಂಡಿದೆ. ಲಾಸ್ ಏಂಜಲೀಸ್ ಹಾಗ ಲಂಡನ್ ಗ್ಯಾಟಿಂಕ್ನಂತಹ ನಗರಗಳಲ್ಲಿಯೂ ಬೆಂಗಳೂರಿನ ಗುಲಾಬಿಯ ಕಂಪು ತಲುಪಿದೆ. ಭಾರತದೊಳಗೆ 47 ತಾಣಗಳಿಗೆ ಒಟ್ಟು 2,402 ಮೆಟ್ರಿಕ್ ಟನ್ ಹೂವುಗಳನ್ನು ಸಾಗಿಸಲಾಗಿದೆ. ಈ ಮೂಲಕ ಸತತ 5ನೇ ವರ್ಷವೂ ಗುಲಾಬಿ ಹೂವು ರಫ್ತಿನಲ್ಲಿ ಬೆಂಗಳೂರು ಅಗ್ರಗಣ್ಯ ಸ್ಥಾನ ಗಳಿಸಿದಂತಾಗಿದೆ.



