Car Sunroof : ಕಾರಿನ ಸನ್ರೂಪ್ ಬಳಸೋ ಮುನ್ನ ಹುಷಾರ್ : ವೈರಲ್ ವಿಡಿಯೋ

Car Sunroof : ಈಗ ಎಲ್ಲಿ ನೋಡಿದರಲ್ಲೂ ಕಾರುಗಳದ್ದೇ ಹಾವಳಿ. ಅದರಲ್ಲೂ ಸನ್ ರೂಫ್ ಇರೋ ಕಾರುಗಳೆಂದರೆ ಕ್ರೇಜ್ ಜಾಸ್ತಿ. ಸನ್ರೂಫ್ ಇರೋ ಗಾಡಿಗಳನ್ನು ತಗೊಂಡ್ರೆ ಅದೊಂದು ಸ್ಟ್ಯಾಂಡರ್ಡ್ ಅಂತ ಈಗ ಅಂದುಕೊಳ್ಳುತ್ತಾರೆ.
ಅದರಲ್ಲೂ ಮಕ್ಕಳಿಗೆ,ಯುವಕ ಯುವತಿಯರಿಗೆ ಸಿಟಿಯಲ್ಲಿ ಸನ್ ರೂಫ್ (Car Sunroof) ನಲ್ಲಿ ನಿಲ್ಲೋದೆ ಒಂದು ಕ್ರೇಜ್ ಆಗಿದೆ. ಸುರಕ್ಷತೆಯನ್ನೂ ನೋಡದೆ ನಿಂತು ಮಜಾ ತಗೋತಾರೆ.
ಆದ್ರೆ ಈಗ ಇದು ಬೆಂಗಳೂರಿನ ರಸ್ತೆಗಳಲ್ಲಿ ಈ ರೀತಿ ನಿಂತು ಓಡಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹದೇ ಒಂದು ವಿಡಿಯೋ ಸೋಶಿಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆರು ವರ್ಷದ ಬಾಲಕನೊಬ್ಬ ಸನ್ ರೂಫ್ ಕಾರ್ ನಲ್ಲಿ ನಿಂತು ರೋಡ್ ನಾ ಮಜಾ ತಗೊಂಡು ಹೋಗುತ್ತಿದ್ದ..
ಇದನ್ನೂ ಓದಿ : ಒಡಿಶಾ: ಕಾರಿನಲ್ಲೇ 9ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ
ಇದೇ ವೇಳೆ ಭಾರಿ ವಾಹನಗಳು ಹೋಗದಂತೆ ಹಾಕಲಾಗುವ ಓವರ್ ಹೆಡ್ ಬ್ಯಾರಿಯರ್ ಆತನ ತಲೆಗೆ ತಾಗಿದೆ. ತಕ್ಷಣವೇ ಆ ಬಾಲಕ ಕಾರಿನೊಳಗೆ ಬಿದ್ದಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ವಿದ್ಯಾರಣ್ಯದ ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ನಡೆದಿದೆ ಅಂತ ಹೇಳಲಾಗುತ್ತಿದೆ. ಈ ಘಟನೆಯಲ್ಲಿ ಬಾಲಕನಿಗೆ ಗಂಭೀರ ಗಾಯ ಆಗಿಲ್ಲ ಅಂತ ಹೇಳಲಾಗುತ್ತಿದೆ.
ಈ ಕುರಿತಂತೆ ಸೆಕ್ಷನ್ 285ರ ಅಡಿಯಲ್ಲಿ ಕೇಜ್ ಕೇಸು ದಾಖಲಿಸಲಾಗಿದೆ. ಘಟನೆ ನಡೆದಾಗ ಬಾಲಕನ ಸಂಬಂಧಿಕರು ವಾಹನ ಚಲಾಯಿಸುತ್ತಿದ್ದರು ಎನ್ನಲಾಗುತ್ತಿದೆ.
ಇದನ್ನೂ ಓದಿ : Viral News: ಸಮೋಸಾ ತರಲಿಲ್ಲವೆಂದು ಪತಿ ಹಾಗೂ ಮಾವನಿಗೆ ಹೊಡೆದ ಮಹಿಳೆ
ಈ ಕುರಿತಂತೆ ಪ್ರತಿಕ್ರಿಸಿರುವ ನೆಟ್ಟಿಗರು , ಪೋಷಕರು ಕಾರಿನಲ್ಲಿ ಮಕ್ಕಳಿಗೆ ಈ ರೀತಿ ಸೌಕರ್ಯ ನೀಡುವ ಮುನ್ನ , ಅವರ ಸುರಕ್ಷತೆಗೂ ಆದ್ಯತೆ ನೀಡಿ ಅಂತಿದ್ದಾರೆ



