ಬೆಂಗಳೂರಲ್ಲಿ ಈ 2 ದಿನ ವಿದ್ಯುತ್ ವ್ಯತ್ಯಯ, ನಿಮ್ಮ ಏರಿಯಾ ಇದೇನಾ ನೋಡಿ!
Bengaluru power cut : ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಗಾಗ ಕರೆಂಟ್ ಹೋಗುವುದು ಮಾಮೂಲಿ ಆಗಿದೆ. ಏನಪ್ಪಾ ಸಿಟಿಯಲ್ಲಿದ್ರೂ ಪವರ್ ಕಟ್ ಆಗ್ತಾನೇ ಇರುತ್ತೆ ಅಂತ ಜನ ಬೇಸರ ವ್ಯಕ್ತಪಡಿಸುತ್ತಾರೆ. ಇನ್ನು ಬೆಂಗಳೂರಲ್ಲಿ ಈ 2 ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಆಗಲಿದೆ. ಹೌದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನವೆಂಬರ್ 4 ಮತ್ತು 6 ರಂದು ನಿರ್ವಹಣಾ ಕಾರ್ಯದ ಕಾರಣದಿಂದಾಗಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
Bengaluru power cut : ಮೊದಲೇ ಚಾರ್ಜ್ ಮಾಡಿಕೊಳ್ಳಿ
ತುರ್ತು ನಿರ್ವಹಣೆ ಮತ್ತು ಕಂಬಗಳ ಸ್ಥಳಾಂತರವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಎಚ್‍ಎಐ) ನಿರ್ವಹಿಸುತ್ತವೆ. ಅನಾನುಕೂಲತೆಯನ್ನು ತಪ್ಪಿಸಲು ನಿವಾಸಿಗಳು ತಮ್ಮ ದಿನವನ್ನು ಮುಂಚಿತವಾಗಿ ಯೋಜಿಸುವಂತೆ ಬೆಸ್ಕಾಂ ಒತ್ತಾಯಿಸಿದೆ. ಮೊದಲೇ ಅಗತ್ಯ ಇರುವ ವಸ್ತುಗಳನ್ನು ಚಾರ್ಜ್ ಮಾಡಿಕೊಳ್ಳಿ.
ಬೆಂಗಳೂರು ವಿದ್ಯುತ್ ಕಡಿತ ಪ್ರದೇಶಗಳು
ಚಿಕ್ಕಬಾಣಾವರ, ಚಿಕ್ಕಬಾಣಾವರ ಗ್ರಾಮ, ಆಲ್ದಮರದೊಡ್ಡಿ, ತಮ್ಮೇನಹಳ್ಳಿ, ಬೈಲಕೆರೆ, ವಡೇರಹಳ್ಳಿ, ಕೆಂಟೇನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪವರ್ ಕಟ್ ಆಗಲಿದೆ.
ತುಮಕೂರಲ್ಲೂ ಪವರ್ ಕಟ್
ಕರ್ನಾಟಕದ ತುಮಕೂರು ಸಹ ವಿದ್ಯುತ್ ಸ್ಥಗಿತವನ್ನು ಎದುರಿಸಲಿದೆ. ಉಪವಿಭಾಗ-1 ರ ಅಡಿಯಲ್ಲಿ ಮೂಲಸೌಕರ್ಯಗಳ ನವೀಕರಣದ ದೃಷ್ಟಿಯಿಂದ ತುಮಕೂರು ಪ್ರದೇಶವು ನವೆಂಬರ್ 4 ಮತ್ತು 6 ರಂದು ಸ್ಥಗಿತಗೊಳ್ಳಲಿದೆ.
ತುಮಕೂರಿನ ಈ ಜಾಗಗಳಲ್ಲಿ ವಿದ್ಯುತ್ ವ್ಯತ್ಯಯ
ಬೆಳಗುಂಬ ಗ್ರಾಮ ಮತ್ತು ಬಡಾವಣೆ, ಲಂಬಾಣಿ ತಾಂಡಾ, ಜ್ಯೋತಿಪುರ, ಎಸ್‍ಎಸ್ ಲೇಔಟ್, ಕುಂದೂರು ಗ್ರಾಮ ಮತ್ತು ಲೇಔಟ್, ವೆಂಕಟಾದ್ರಿ ಲೇಔಟ್.
2 ದಿನ ವಿದ್ಯುತ್ ವ್ಯತ್ಯಯವಾಗಲಿದ್ದು ಜನ ಮೊದಲೇ ತಮಗೆ ಅಗತ್ಯವಿರುವ ವಸ್ತುಗಳನ್ನು ಚಾರ್ಜ್ ಮಾಡಿಕೊಳ್ಳಿ ಎಂದು ಬೆಸ್ಕಾಂ ತಿಳಿಸಿದೆ.
ಚಿಕ್ಕಮಗಳೂರು ನಗರ ಪ್ರದೇಶದಲ್ಲಿ ಕಲ್ಯಾಣನಗರ, ಚಿಕ್ಕಕುರುಬರಹಳ್ಳಿ, ನರಿಗುಡ್ಡನಹಳ್ಳಿ, ಉದಯನಗರ, ಹಿರೇಮಗಳೂರು, ಕೋಟೆ, ಶಂಕರಪುರ, ಟಿಪ್ಪುನಗರ, ಬೇಲೂರು ರಸ್ತೆ, ಕುವೆಂಪು ನಗರ, ಎಂ.ಜಿ. ರಸ್ತೆ, ಮಾರ್ಕೆಟ್ ರಸ್ತೆ, ವಿಜಯನಗರ, ಹೊಸಮನೆ, ಗಾಂಧಿನಗರ, ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Bengaluru power cut



