ಬಿಎಂಟಿಸಿ, ನಮ್ಮ ಮೆಟ್ರೋ ಪ್ರಯಾಣಕ್ಕೆ ಇನ್ಮುಂದೆ ಒಂದೇ ಸ್ಮಾರ್ಟ್ ಕಾರ್ಡ್​ : ಯಾರಿಗೆಲ್ಲ ಲಾಭ ?

ಸುಮಾರು 10 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಿಕ್ ಟಿಕೆಟ್​ ಮಷಿನ್​ಗಳನ್ನು ಅಳವಡಿಸಲು ಸಾರಿಗೆ ಇಲಾಖೆ ಮುಂದಾಗಿದ್ದು ಇನ್ಮೇಲೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಸಿ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಬಹುದಾಗಿದೆ.

ಬಿಎಂಟಿಸಿ ಬಸ್​ಗಳಲ್ಲಿ ಕಿಕ್ಕಿರಿದು ತುಂಬುವ ಪ್ರಯಾಣಿಕರ ಮಧ್ಯೆ ಟಿಕೆಟ್​ ಪಡೆದುಕೊಳ್ಳುವುದೇ ಹರಸಾಹಸದ ಕೆಲಸ. ಆದರೆ ಈ ಪ್ರಯಾಸಕ್ಕೆ ರಾಜ್ಯ ಸರ್ಕಾರ ಪೂರ್ಣವಿರಾಮ ನೀಡಲು ಮುಂದಾಗಿದ್ದು ನಮ್ಮ ಮೆಟ್ರೋ ಕಾರ್ಡ್ ಮೂಲಕವೇ ಬಿಎಂಟಿಸಿ ಬಸ್​ಗಳಲ್ಲಿಯೂ ಪ್ರಯಾಣಿಸುವ ಅವಕಾಶ ನೀಡುತ್ತಿದೆ. ಇದರಿಂದ ಬಿಎಂಟಿಸಿ ಪ್ರಯಾಣಿಕರು ಹಾಗೂ ಬಸ್​ ಕಂಡಕ್ಟರ್​ಗಳಿಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ಸುಮಾರು 10 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಿಕ್ ಟಿಕೆಟ್​ ಮಷಿನ್​ಗಳನ್ನು ಅಳವಡಿಸಲು ಸಾರಿಗೆ ಇಲಾಖೆ ಮುಂದಾಗಿದ್ದು ಇನ್ಮೇಲೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಸಿ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಬಹುದಾಗಿದೆ.

ಮುಂಬೈ ಮೂಲದ ಚಲೋ ಎಂಬ ಕಂಪನಿಗೆ 40 ಕೋಟಿ ರೂಪಾಯಿಗಳ ಟೆಂಡರ್​ ನೀಡಲಾಗಿದೆ. ಐದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ 11 ಸಾವಿರ ಇಟಿಎಂ ಮಷಿನ್ ಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈಗಾಗಲೇ ಚಲೋ ಕಂಪನಿಗೆ 11 ಸಾವಿರ ಮಷಿನ್ ಗಳನ್ನು ಸಪ್ಲೈ ಮಾಡಲು ಟೆಂಡರ್ ನೀಡಲಾಗಿದೆ. ಈ ಹೊಸ ಇಟಿಎಂ ಮೆಷಿನ್ ನಲ್ಲಿ ಎನ್ಸಿಎಂಸಿ ಕಾರ್ಡ್ ಬಳಕೆ ಮಾಡಿ ಅಂದರೆ ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಬಹುದಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ‘ಅಗತ್ಯ ವಸ್ತುಗಳ ಕಾಯ್ದೆ’ ಜಾರಿ : ಕಾಳಸಂತೆಯಲ್ಲಿ ಸಿಲಿಂಡರ್​ ಮಾರುವವರೇ ಎಚ್ಚರ

ಈ ಮಷಿನ್​ಗಳಲ್ಲಿ ಡೆಬಿಟ್​ ಕಾರ್ಡ್, ಕ್ರೆಡಿಟ್​ ಕಾರ್ಡ್​, ಯುಪಿಐ ಆ್ಯಪ್​ಗಳು ಸೇರಿದಂತೆ ವಿವಿಧ ಆನ್​ಲೈನ್​ ಪಾವತಿ ವ್ಯವಸ್ಥೆಗಳನ್ನು ಬಳಕೆ ಮಾಡಿ ಹಣ ಪಾವತಿಸಬಹುದಾಗಿದೆ. ಡೈನಾಮಿಕ್​ ಕ್ಯೂ ಆರ್​ ಕೋಡ್​ ಅಳವಡಿಕೆಯಾಗುವುದರಿಂದ ಕಂಡಕ್ಟರ್​ಗಳಿಗೂ ನಿಗಮಕ್ಕೆ ವಂಚನೆ ಮಾಡುವ ಅವಕಾಶ ಇರುವುದಿಲ್ಲ . ಹೀಗಾಗಿ ಸಾರಿಗೆ ಇಲಾಖೆಯಲ್ಲಿ ಪಾರದರ್ಶಕ ವ್ಯವಸ್ಥೆಗೆ ಈ ಮಷಿನ್​ಗಳು ಸಹಾಯ ಮಾಡಲಿವೆ.

 

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories