ಟ್ರಾಫಿಕ್ ಫೈನ್ 50% ಡಿಸ್ಕೌಂಟ್‌ಗೆ ಮುಗಿಬಿದ್ದ ಜನರು.. 100 ಕೇಸ್‌ಗೆ 27 ಸಾವಿರ ರೂ. ಕಟ್ಟಿ ದಾಖಲೆ ಬರೆದ ಬೈಕ್ ಸವಾರ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಗೆ ವಾಹನ ಸವಾರರು ಮನಸೋತಿದ್ದಾರೆ. ಕೇವಲ ಎರಡೇ ದಿನದಲ್ಲಿ ಸಂಚಾರ ಪೊಲೀಸ್‌ ಇಲಾಖೆಯ ಖಜಾನೆಗೆ ಕೋಟಿ ಕೋಟಿ ರೂಪಾಯಿ ದಂಡದ ಹಣ ಹರಿದು ಬಂದಿದೆ.

ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ದ ಬೆಂಗಳೂರು ಪೊಲೀಸರು ಕೈಗೊಂಡ ಕ್ರಮಕ್ಕೆ ಉತ್ತಮ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಗೆ ವಾಹನ ಸವಾರರು ಮನಸೋತಿದ್ದಾರೆ. ಕೇವಲ ಎರಡೇ ದಿನದಲ್ಲಿ ಸಂಚಾರ ಪೊಲೀಸ್‌ ಇಲಾಖೆಯ ಖಜಾನೆಗೆ ಕೋಟಿ ಕೋಟಿ ರೂಪಾಯಿ ದಂಡದ ಹಣ ಹರಿದು ಬಂದಿದೆ. ಅದ್ರಲ್ಲೂ ರಾಜಾಜಿನಗರದ ಬೈಕ್‌ ಸವಾರನೊಬ್ಬ ತನ್ನ ವಿರುದ್ದ ದಾಖಲಾಗಿದ್ದ 100 ಟ್ರಾಫಿಕ್‌ ರೂಲ್ಸ್‌ ಉಲ್ಲಂಘನೆ ಪ್ರಕರಣಕ್ಕೆ ಒಂದೇ ಬಾರಿ 27,500 ರೂಪಾಯಿ ದಂಡ ಪಾವತಿಸಿದ್ದಾನೆ.

ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿದ್ದ ಸವಾರರಿಗೆ ಶೇಕಡಾ 50ರಷ್ಟು ರಿಯಾಯಿತಿ ಆಫರ್ ಸದ್ಯ ಭರ್ಜರಿಯಾಗಿ ವರ್ಕ್ ಆಗ್ತಿದೆ. ಜೂನ್ 21 ಮತ್ತು ಜೂನ್ 22ರ ಮೊದಲ ಎರಡು ದಿನಗಳಲ್ಲೇ ವಾಹನ ಸವಾರರು ಒಟ್ಟು 75,487 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, ಸಂಚಾರ ಪೊಲೀಸ್ ವಿಭಾಗಕ್ಕೆ ಒಟ್ಟು 2,24,70,450 ರೂಪಾಯಿ ದಂಡದ ಹಣ ಸಂಗ್ರಹವಾಗಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ವಾಹನ ಸವಾರರೇ ಗಮನಿಸಿ… ಟ್ರಾಫಿಕ್ ದಂಡ ಪಾವತಿಸುವವರಿಗೆ ಬಂಪರ್ ಆಫರ್: ಇಂದಿನಿಂದಲೇ ಶೇ. 50 ರಿಯಾಯಿತಿ ಅನ್ವಯ! 

ಟ್ರಾಫಿಕ್‌ ದಂಡ ಪಾವತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಯೋರ್ವ ಎಲ್ಲರ ಗಮನ ಸೆಳೆದಿದ್ದಾನೆ. ರಾಜಾಜಿನಗರದ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿರುವ ಬೈಕ್‌ ಸವಾರನೋರ್ವ ಹೆಲ್ಮೆಟ್‌ ರಹಿತ ಚಾಲನೆ ಸೇರಿದಂತೆ ಒಟ್ಟು 100 ಬಾರಿ ನಿಯಮ ಉಲ್ಲಂಘನೆ ಮಾಡಿದ್ದ. ಶೇಕಡಾ 50 ರಷ್ಟು ರಿಯಾಯಿತಿ ನೀಡಿದ್ದರೂ ಕೂಡ ಒಟ್ಟಿಗೆ 27,500 ರೂಪಾಯಿ ದಂಡ ಪಾವತಿಸಿ ಆಫರ್ ಸದುಪಯೋಗ ಪಡಿಸಿಕೊಂಡಿದ್ದಾನೆ. ಅಲ್ಲದೇ ಮುಂದೆ ನಿಯಮ ಉಲ್ಲಂಘನೆ ಮಾಡದಂತೆ ಪ್ರಮಾಣ ಮಾಡಿದ್ದಾನೆ, “ಮುಂದಿನ ದಿನಗಳಲ್ಲಿ ಎಂದಿಗೂ ನಿಯಮ ಉಲ್ಲಂಘಿಸುವುದಿಲ್ಲ” ಎಂದು ಆತ ಪೊಲೀಸರ ಮುಂದೆ ಪ್ರಮಾಣ ಮಾಡಿದ್ದಾನೆ.

ವಾಹನ ಸವಾರರು ತಮ್ಮ ಬಾಕಿ ದಂಡವನ್ನು ಪಾವತಿಸಲು ಜುಲೈ 10, 2026ರವರೆಗೆ ಮಾತ್ರವೇ ಕಾಲಾವಕಾಶ ಇದೆ. ಬೆಂಗಳೂರಿನ ಹೆಬ್ಬಾಳ, ಜಾಲಹಳ್ಳಿಕ್ರಾಸ್‌, ಮೈಸೂರು ಬ್ಯಾಂಕ್‌ ಜಂಕ್ಷನ್‌, ಹೆಣ್ಣೂರು ಜಂಕ್ಷನ್‌, ಕುಂದಲಹಳ್ಳಿ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ಪೊಲೀಸರು ವಿಶೇಷ ಕೌಂಟರ್‌ ಮೂಲಕ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಆನ್‌ಲೈನ್‌ ದಂಡ ಪಾವತಿಗೂ ಅವಕಾಶ ಕಲ್ಪಿಸಲಾಗಿದ್ದು, ಕರ್ನಾಟಕ ಸ್ಟೇಟ್ ಪೊಲೀಸ್ (KSP) ಮೊಬೈಲ್ ಆ್ಯಪ್, ಬಿಟಿಪಿ ಅಸ್ತ್ರಂ (BTP Astram) ಆ್ಯಪ್ ಹಾಗೂ ಕರ್ನಾಟಕ ಒನ್ (Karnataka One) ಅಧಿಕೃತ ವೆಬ್‌ಸೈಟ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿಯೂ ದಂಡ ಪಾವತಿಸಬಹುದಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories