CM City Round : ಸಿಎಮ್‌ ಯಡಿಯೂರಪ್ಪ ಬೆಂಗಳೂರು ಸಿಟಿ ರೌಂಡ್ಸ್‌

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಮಾತು ಕೇಳಿಬರುತ್ತಿದೆ. ಇನ್ನೊಂದೆಡೆ ಯಡಿಯೂರಪ್ಪ ಎಂದಿನಂತೆಯೇ ತಮ್ಮನ್ನು ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಬೆಂಗಳೂರಲ್ಲಿಂದು ಸಿಟಿ ರೌಂಡ್ಸ್‌ ನಡೆಸಿದ್ದಾರೆ.

ಯಡಿಯೂರಪ್ಪ ಇಂದು ಸಖತ್‌ ಬ್ಯುಸಿಯಾಗಿದ್ದರು. ಬೆಂಗಳೂರು ನಗರದಲ್ಲಿ ಹತ್ತು ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ, ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಗಾಂಧಿ ನಗರದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ವೀಕ್ಷಣೆ ನಡೆಸಿದ ಯಡಿಯೂರಪ್ಪ ನಂತರ ನಾಯಂಡಹಳ್ಳಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ವೀಕ್ಷಣೆ, ನಾಯಂಡಹಳ್ಳಿಯ ರಾಜಕುಮಾರ ಸಮಾಧಿ ಮಾರ್ಗದಲ್ಲಿ ನಡೆದೆರುವ ವೈಟ್ ಟಾಪಿಂಗ್ ಕಾಮಗಾರಿ ವೀಕ್ಷಣೆ. ಪ್ಲಾನಿಟೇರಿಂಮ್‌ ರಸ್ತೆಯಲ್ಲಿರುವ ಇನ್ಫ್ಯಾಂಟ್ರಿ ರಸ್ತೆ ನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ : ದ್ವೀಪದಿಂದ ಮಕ್ಕಳನ್ನುದೋಣಿಯಲ್ಲಿ SSLC ಪರೀಕ್ಷಾ ಕೇಂದ್ರಕ್ಕೆ ಕರೆತಂದ ಡಿಡಿಪಿಐ : ಎನ್.ಎಚ್.ನಾಗೂರ ಕಾರ್ಯಕ್ಕೆ ಭಾರಿ ಮೆಚ್ಚುಗೆ

ನಂತರದಲ್ಲಿ ಕರ್ಮಷಿಯಲ್ ಸ್ಟ್ರೀಟ್ ನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ, ಬ್ರಿಗೇಡ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ, ಶಾಂತಿನಗರ ಬಸ್ ಡಿಪೋ ಬಳಿಯ ರಾಜಕಾಲುವೆ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಗೃಹ ಕಚೇರಿಯಿಂದ ಆರಂಭವಾದ ಸಿಎಂ ಸಿಟಿ ರೌಂಡ್ಸ್‌ ಆನಂದರಾವ್‌ ಸರ್ಕಲ್‌, ಗಾಂಧಿನಗರ, ಶೇಷಾದ್ರಿಪುರ, ಮೈಸೂರ್‌ ರೋಡ್‌, ಕಮರ್ಷಿಯಲ್‌ ಸ್ಟ್ರೀಟ್‌, ಬ್ರಿಗೆಡ್‌ ರೋಡ್‌, ಶಾಂತಿನಗರ ಹಾಗೂ ರಾಜಭವನ ರಸ್ತೆಯಲ್ಲಿ ಸಿಟಿ ರೌಂಡ್ಸ್‌ ಹಾಕಿದ್ದಾರೆ.

ಇದನ್ನೂ ಓದಿ : ರಾಜ್ಯದ ಸಿಎಂ ಆಗ್ತಾರಾ ಸಿ.ಟಿ.ರವಿ ..? ಶ್ರೀರಾಮುಲು, ಬೊಮ್ಮಾಯಿ ಡಿಸಿಎಂ

ರಾಜ್ಯ ಸರಕಾರಕ್ಕೆ ಎರಡು ವರ್ಷ ತುಂಬಿದ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡೋದು ಬಹುತೇಕ ಖಚಿತ. ಈ ನಡುವಲ್ಲೇ ಯಡಿಯೂರಪ್ಪ ತಮ್ಮ ಅವಧಿಯಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದ್ದು ಎಂದಿನಂತೆಯೇ ತಮ್ಮನ್ನು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Comments are closed.