ಕೆಜಿಎಫ್-2 ಅಭಿಮಾನಿಗಳಿಗೆ ಸಪ್ರೈಸ್….! ಜುಲೈ 29 ಕ್ಕೆ ಸಿಗಲಿದ್ಯಾ ಅಧೀರನ ದರ್ಶನ ಭಾಗ್ಯ…!?

ಸದ್ಯ ದೇಶದಾದ್ಯಂತ ಚಿತ್ರರಸಿಕರನ್ನು ತುದಿಗಾಲಿನಲ್ಲಿ ನಿಲ್ಲಿಸಿರೋ ಸಿನಿಮಾ ಕೆಜಿಎಫ್-2 . ಪ್ಯಾನ್ ಇಂಡಿಯಾ ಸಿನಿಮಾಗೆ ಯಶ್ ಅಭಿಮಾನಿಗಳು ಕಾತುರರಾಗಿ ಕಾಯ್ತಿದ್ದಾರೆ. ಕೊರೋನಾ ಸಂಕಷ್ಟವಿಲ್ಲದೇ ಇದ್ದರೇ ಜುಲೈ 16 ರಂದೇ ತೆರೆಗೆ ಬರಬೇಕಿದ್ದ ಸಿನಿಮಾ ಇನ್ನೂ ರಿಲೀಸ್ ಗೆ ಮುಹೂರ್ತ ಫಿಕ್ಸ್ ಮಾಡಿಲ್ಲ.ಆದರೆ ಜುಲೈ 29 ರಂದು ಅಧೀರನ ದರ್ಶನ ಸಿಗೋ ಸಾಧ್ಯತೆ ದಟ್ಟವಾಗಿದೆ.

ಕೆಜಿಎಫ್ ಸ್ಯಾಂಡಲ್ ವುಡ್ ನ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಸಿನಿಮಾ. ಈಗ ತೆರೆಗೆ ಬರಲು ಸಿದ್ಧವಾಗಿರೋ ಕೆಜಿಎಫ್-2 ಕೂಡ ಎಲ್ಲ ರೀತಿಯಲ್ಲೂ ಕೆಜಿಎಫ್ ದಾಖಲೆ ಮುರಿಯಲು ಸಿದ್ಧವಾಗಿದೆ. ಆದರೆ ಕೆಜಿಎಫ್-2 ರಿಲೀಸ್ ಗೆ ಕೊರೋನಾ ಅಡ್ಡಿಯಾಗಿದ್ದು, ಪ್ರೇಕ್ಷಕರು ಬೇಸರದಲ್ಲಿದ್ದಾರೆ.

ಜನವರಿಯಲ್ಲಿ ರಿಲೀಸ್ ಆಗಿರೋ ಟೀಸರ್ ಈಗಾಗಲೇ 200ಮಿಲಿಯನ್ ವೀವ್ಸ್ ಕಂಡಿದ್ದು, ಹೊಸ ದಾಖಲೆ ಬರೆದಿದೆ. ಈ ಮಧ್ಯೆ ಜುಲೈ 29 ರಂದು ಕೆಜಿಎಫ್-2 ಫ್ಯಾನ್ಸ್ ಗೆ ಸಿಹಿಸುದ್ದಿಯೊಂದು ಸಿಗಲಿದ್ದು, ಕೆಜಿಎಫ್-2 ನ ಪ್ರಮುಖ ಆಕರ್ಷಣೆಯಾಗಿರೋ ಅಧೀರ್ ನ ಸ್ಪೆಶಲ್ ಟೀಸರ್ ರಿಲೀಸ್ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ : ನೀವು ಕೆಟ್ಟವರಲ್ಲ…. ಎನ್ನುತ್ತಲೇ ಬ್ಯಾಕ್ ಲೆಸ್ ಪೋಸ್ ಕೊಟ್ಟ ಶ್ರೀಲಂಕಾ ಬೆಡಗಿ…!!

ಜುಲೈ 29 ಕೆಜಿಎಫ್-2 ದ ಅಧೀರನ ಪಾತ್ರದಾರಿ ಸಂಜಯ್ ದತ್ ಹುಟ್ಟುಹಬ್ಬ,. ಹೀಗಾಗಿ ಸಂಜಯ್ ದತ್ ಹುಟ್ಟುಹಬ್ಬಕ್ಕೆ ಸ್ಪೆಶಲ್ ಗಿಫ್ಟ್ ರೀತಿಯಲ್ಲಿ ಕೆಜಿಎಫ್-2 ಚಿತ್ರತಂಡ ಟೀಸರ್ ರಿಲೀಸ್ ಮಾಡೋ ಸಾಧ್ಯತೆ ಇದೆ.

ಈಗಾಗಲೇ ರಿಲೀಸ್ ಆಗಿರೋ ಕೆಜಿಎಫ್-2 ಪೋಸ್ಟರ್ ಗಳಲ್ಲಿ ಅಧೀರನ ದರ್ಶನ ಆಗಿದ್ದರೂ ಸಂಪೂರ್ಣ ದರ್ಶನ ಅಥವಾ ಪರಿಚಯ ಆಗಿಲ್ಲ. ಹೀಗಾಗಿ ಅಧೀರ್ ರೌದ್ರತೆಯ ಪ್ರದರ್ಶನಕ್ಕಾಗಿಯೇ ಕೆಜಿಎಫ್-2 ಚಿತ್ರತಂಡ ಜುಲೈ 29 ರಂದು ಪ್ರೋಮೋ ಅಥವಾ ಟೀಸರ್ ಬಿಡುಗಡೆ ಮಾಡೋ ನೀರಿಕ್ಷೆಯಿದ್ದು, ಅಭಿಮಾನಿಗಳು ಕಾಯ್ತಿದ್ದಾರೆ.

Comments are closed.