ಜುಲೈ 1 ರಿಂದ ಹೊಸ ರೂಲ್ಸ್ : ಆಧಾರ್, ಪ್ಯಾನ್, ಯುಪಿಐ, ತತ್ಕಾಲ್ ಟಿಕೆಟ್ ನಿಯಮ ತಿಳಿದುಕೊಳ್ಳಿ

New money rules july 1st : ಕೇಂದ್ರ ಸರಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಹೊಸ ನಿಯಮಗಳು ಜುಲೈ 2025 ರಿಂದ ಜಾರಿಗೆ ಬರಲಿದೆ. ಆಧಾರ್-ಪ್ಯಾನ್ ಲಿಂಕ್, ತತ್ಕಾಲ್ ಟಿಕೆಟ್‌ಗಳು, ಯುಪಿಐ ಚಾರ್ಜ್‌ಬ್ಯಾಕ್ ಸೇರಿದಂತೆ ಹಲವು ನಿಯಮಗಳಲ್ಲಿ ಬದಲಾವಣೆ ಆಗಲಿದೆ.
New money rules july 1st : ಹೊಸ ರೂಲ್ಸ್ ಯಾವುದು ?
ಆಧಾರ್ ಮತ್ತು ಪ್ಯಾನ್ ಕಾರ್ಡ್ ಹೊಸ ರೂಲ್ಸ್:
ಹೊಸ ಪ್ಯಾನ್ ಕಾರ್ಡ್ ಇನ್ಮುಂದೆ ಆಧಾರ್ ಕಡ್ಡಾಯ: ಕೇಂದ್ರ ಸರಕಾರ ಹೊಸ ನಿಯಮದ ಪ್ರಕಾರ ಹೊಸದಾಗಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ಜುಲೈ 1, 2025 ರಿಂದ ಆಧಾರ್ ಪರಿಶೀಲನೆ ಕಡ್ಡಾಯವಾಗಲಿದೆ. ಈ ನಿಯಮವು ತೆರಿಗೆ ಅನುಸರಣೆಯನ್ನು ಹೆಚ್ಚಿಸಲು ಮತ್ತು ನಕಲಿ ಪ್ಯಾನ್ ಕಾರ್ಡ್‌ಗಳನ್ನು ತಡೆಯಲು ಉದ್ದೇಶಿಸಿದೆ.
ಪ್ಯಾನ್-ಆಧಾರ್ ಲಿಂಕ್ ಗಡುವು ವಿಸ್ತರಣೆ :
ಈ ಹಿಂದೆ 2024ರ ಅಕ್ಟೋಬರ್ 1ಕ್ಕೂ ಮೊದಲೇ ಅಥವಾ ಅದಕ್ಕೂ ಮೊದಲು ಆಧಾರ್ ID ಬಳಸಿ ಪ್ಯಾನ್ ಪಡೆದವರು, ತಮ್ಮ ಪ್ಯಾನ್ ಅನ್ನು ಆಧಾರ್ ಕಾರ್ಡ್ ಜೊತೆಗೆ 2025ರ ಡಿಸೆಂಬರ್ 31ರ ಗಡುವಿನ ಒಳಗಾಗಿ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ. ಒಂದೊಮ್ಮೆ ಈ ಗಡುವು ತಪ್ಪಿಸಿಕೊಂಡಲ್ಲಿ ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ. ಈಗಾಗಲೇ ರೂ. 1,000 ದಂಡದೊಂದಿಗೆ ಲಿಂಕ್ ಮಾಡುವ ಆಯ್ಕೆ ಲಭ್ಯವಿದೆ.
New money rules july 1st : ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳು:
ಆಧಾರ್ ವೆರಿಫಿಕೇಶನ್ ಕಡ್ಡಾಯ : IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಜುಲೈ 1, 2025 ರಿಂದ ಆಧಾರ್ ಪರಿಶೀಲನೆ ಕಡ್ಡಾಯವಾಗಲಿದೆ. ಅಂದರೆ, ನಿಮ್ಮ IRCTC ಖಾತೆಯನ್ನು ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿ ಪರಿಶೀಲಿಸುವುದು ಕಡ್ಡಾಯ.
Also Read : ಬ್ಯಾಂಕಿಂಗ್, ಎಟಿಎಂ, ರೈಲ್ವೆ, AI ತಂತ್ರಜ್ಞಾನ : ಜುಲೈ 1 ರಿಂದ ಹೊಸ ರೂಲ್ಸ್
OTP ದೃಢೀಕರಣ ಕಡ್ಡಾಯ (ಜುಲೈ 15 ರಿಂದ): ಜುಲೈ 15, 2025 ರಿಂದ, ಆನ್‌ಲೈನ್ ತತ್ಕಾಲ್ ಬುಕಿಂಗ್‌ಗಳಿಗೆ OTP (ಒನ್ ಟೈಮ್ ಪಾಸ್‌ವರ್ಡ್) ದೃಢೀಕರಣ ಕಡ್ಡಾಯವಾಗಲಿದೆ. ಕಂಪ್ಯೂಟರೀಕೃತ PRS ಕೌಂಟರ್‌ಗಳಲ್ಲಿ ಅಥವಾ ಅಧಿಕೃತ ಏಜೆಂಟರ ಮೂಲಕ ಬುಕ್ ಮಾಡುವ ತತ್ಕಾಲ್ ಟಿಕೆಟ್‌ಗಳಿಗೂ OTP ದೃಢೀಕರಣ ಅಗತ್ಯವಿರುತ್ತದೆ.
ಏಜೆಂಟರಿಗೆ ನಿರ್ಬಂಧಗಳು: ಜುಲೈ 15 ರಿಂದ, ಅಧಿಕೃತ ಏಜೆಂಟರು AC ವರ್ಗದ ತತ್ಕಾಲ್ ಟಿಕೆಟ್‌ಗಳನ್ನು ಬೆಳಿಗ್ಗೆ 10:00 ರಿಂದ 10:30 ರವರೆಗೆ ಮತ್ತು ಸಾಮಾನ್ಯ ವರ್ಗದ ಟಿಕೆಟ್‌ಗಳನ್ನು 11:00 ರಿಂದ 11:30 ರವರೆಗೆ ಬುಕ್ ಮಾಡಲು ಅವಕಾಶವಿರುವುದಿಲ್ಲ. ಇದು ಏಜೆಂಟರು ಮತ್ತು ದಲ್ಲಾಳಿಗಳು ಹೆಚ್ಚಿನ ಸಂಖ್ಯೆಯ ಟಿಕೆಟ್‌ಗಳನ್ನು ಕಾಯ್ದಿರಿಸುವುದನ್ನು ತಡೆಯಲು ಉದ್ದೇಶಿಸಿದೆ.
ಯುಪಿಐ ಚಾರ್ಜ್‌ಬ್ಯಾಕ್ ಮತ್ತು ವಹಿವಾಟು ನಿಯಮಗಳು (ಜುಲೈ 15 ರಿಂದ):
ಸರಳೀಕೃತ ಚಾರ್ಜ್‌ಬ್ಯಾಕ್ ಪ್ರಕ್ರಿಯೆ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐ ಚಾರ್ಜ್‌ಬ್ಯಾಕ್ ನಿಯಮಗಳನ್ನು ಸರಳಗೊಳಿಸಿದೆ. ಜುಲೈ 15, 2025 ರಿಂದ, ಬ್ಯಾಂಕುಗಳು NPCI ಯ ಪೂರ್ವ ಅನುಮೋದನೆಯಿಲ್ಲದೆ ನೇರವಾಗಿ ಚಾರ್ಜ್‌ಬ್ಯಾಕ್‌ಗಳನ್ನು ನೀಡಲು ಸಾಧ್ಯವಾಗುತ್ತದೆ. ಇದು ವಿವಾದ ಪರಿಹಾರ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
ತ್ವರಿತ ಮರುಪಾವತಿ: ವಹಿವಾಟು ವಿಫಲವಾದರೆ ಮತ್ತು ಹಣ ಕಡಿತಗೊಂಡರೆ, ಬಳಕೆದಾರರು ಈಗ ತಕ್ಷಣವೇ ಮರುಪಾವತಿಯನ್ನು ಪಡೆಯುತ್ತಾರೆ.
Also Read : ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಗುಡ್ ನ್ಯೂಸ್ : ಗೋಲ್ಡ್ ಲೋನ್‌ಗೆ RBI ಹೊಸ ರೂಲ್ಸ್
ವೇಗದ ವಹಿವಾಟು: ಇನ್ಮುಂದೆ ಯುಪಿಐ ಪಾವತಿ ಪ್ರತಿಕ್ರಿಯೆಗೆ ಇದ್ದ ಸಮಯವನ್ನು 10-15 ಸೆಕೆಂಡುಗಳಿಗೆ ಇಳಿಸಲಾಗಿದೆ, ಇದು ವಹಿವಾಟುಗಳ ವೇಗವನ್ನು ಹೆಚ್ಚಿಸುತ್ತದೆ.
ವಹಿವಾಟಿನ ಸ್ಥಿತಿ ಪರಿಶೀಲನೆ: ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸಲು ಅಥವಾ ವಿಫಲವಾದ ವಹಿವಾಟನ್ನು ಹಿಂತಿರುಗಿಸಲು ತೆಗೆದುಕೊಳ್ಳುವ ಸಮಯವನ್ನು ಕೇವಲ 10 ಸೆಕೆಂಡುಗಳಿಗೆ ಇಳಿಸಲಾಗಿದೆ.
New money rules july 1st : GST ನಿಯಮಗಳು:
GSTR-3B ಫಾರ್ಮ್ ಸಂಪಾದಿಸಲಾಗದು: ಜುಲೈ 2025 ರಿಂದ, ಮಾಸಿಕ GST ಪಾವತಿ ಫಾರ್ಮ್ GSTR-3B ಅನ್ನು ಒಮ್ಮೆ ಸಲ್ಲಿಸಿದ ನಂತರ ಸಂಪಾದಿಸಲಾಗುವುದಿಲ್ಲ. ತಿದ್ದುಪಡಿಗಳನ್ನು GSTR-1A ಹೊಸ ಫಾರ್ಮ್ ಮೂಲಕ ಮಾಡಬೇಕಾಗುತ್ತದೆ.
ಬ್ಯಾಂಕ್ ಶುಲ್ಕಗಳು ಮತ್ತು ಸೇವಾ ಬದಲಾವಣೆಗಳು:
HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶುಲ್ಕ ಬದಲಾವಣೆ
ಖಾಸಗಿ ಸ್ವಾಮ್ಯದ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಹೊಸ ಹಣಕಾಸು ನಿಯಮಗಳು ಬದಲಾವಣೆಯನ್ನು ತರಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಜುಲೈ 1, 2025ರಿಂದ ತನ್ನ ಕ್ರೆಡಿಟ್ ಕಾರ್ಡ್ ಶುಲ್ಕ ರಚನೆಯನ್ನು ಪರಿಷ್ಕರಿಸುತ್ತದೆ. ತಿಂಗಳಿಗೆ ₹10,000 ಕ್ಕಿಂತ ಹೆಚ್ಚಿನ ವಾಲೆಟ್ ಲೋಡಿಂಗ್, ₹50,000 ಕ್ಕಿಂತ ಹೆಚ್ಚಿನ ಯುಟಿಲಿಟಿ ಬಿಲ್ ಪಾವತಿಗಳು ಮತ್ತು ₹10,000 ಕ್ಕಿಂತ ಹೆಚ್ಚಿನ ಆನ್‌ಲೈನ್ ಗೇಮಿಂಗ್ ವಹಿವಾಟುಗಳ ಮೇಲೆ 1% ಶುಲ್ಕ ಅನ್ವಯವಾಗುತ್ತದೆ. ಎಲ್ಲಾ ಬಾಡಿಗೆ ಪಾವತಿಗಳು ಮತ್ತು ₹15,000 ಕ್ಕಿಂತ ಹೆಚ್ಚಿನ ಇಂಧನ ಪಾವತಿಗಳಿಗೂ ಈ ಶುಲ್ಕ ಅನ್ವಯ.
SBI ಕಾರ್ಡ್ ಬದಲಾವಣೆಗಳು: ಕೆಲವು SBI ಕ್ರೆಡಿಟ್ ಕಾರ್ಡ್‌ಗಳಲ್ಲಿನ ವಿಮಾ ಪ್ರಯೋಜನಗಳನ್ನು ನಿಲ್ಲಿಸಲಾಗುವುದು. ಕನಿಷ್ಠ ಮೊತ್ತದ ಬಾಕಿ (MAD) ಲೆಕ್ಕಾಚಾರದಲ್ಲಿಯೂ ಬದಲಾವಣೆಗಳಿವೆ.
ICICI ಬ್ಯಾಂಕ್ ATM ಶುಲ್ಕಗಳು: ICICI ಬ್ಯಾಂಕ್ ATM ಬಳಕೆಯ ಶುಲ್ಕಗಳನ್ನು ಪರಿಷ್ಕರಿಸಿದೆ. ನಿಗದಿತ ಉಚಿತ ವಹಿವಾಟುಗಳ ನಂತರ ಪ್ರತಿ ವಹಿವಾಟಿಗೆ ₹23 ಶುಲ್ಕ ವಿಧಿಸಲಾಗುತ್ತದೆ.
IMPS ಶುಲ್ಕಗಳು:
ಬ್ಯಾಂಕುಗಣ ಹಣ ವರ್ಗಾವಣೆಯ ಸಂದರ್ಭದಲ್ಲಿ IMPS (Immediate Payment Service) ಶುಲ್ಕದಲ್ಲಿಯೂ ಸಾಕಷ್ಟು ಬದಲಾವಣೆ ಆಗಲಿದೆ. ಅದ್ರಲ್ಲೂ ಐಎಂಪಿಎಸ್ ವರ್ಗಾವಣೆ ಶುಲ್ಕಗಳು ₹2.5 ರಿಂದ ₹15 ವರೆಗೆ, ವರ್ಗಾವಣೆ ಮಾಡುವ ಮೊತ್ತವನ್ನು ಆಧರಿಸಿ ಬದಲಾಗುತ್ತವೆ.
ನಗದು ವಹಿವಾಟು ನಿಯಮಗಳು: ಬ್ಯಾಂಕ್ ಶಾಖೆಗಳು ಅಥವಾ CRM ಗಳಲ್ಲಿ ಪ್ರತಿ ತಿಂಗಳು ಕೇವಲ ಮೂರು ಉಚಿತ ನಗದು ವಹಿವಾಟುಗಳಿಗೆ ಮಾತ್ರ ಅನುಮತಿ ಇದೆ.
ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಗಡುವು:
ಹಣಕಾಸು ವರ್ಷ 2024-25 ಕ್ಕೆ ITR ಸಲ್ಲಿಸುವ ಗಡುವನ್ನು ಸೆಪ್ಟೆಂಬರ್ 15, 2025 ರವರೆಗೆ ವಿಸ್ತರಿಸಲಾಗಿದೆ. ITR ಫಾರ್ಮ್‌ಗಳಲ್ಲಿನ ಇತ್ತೀಚಿನ ಬದಲಾವಣೆಗಳಿಂದಾಗಿ ತೆರಿಗೆದಾರರಿಗೆ ನಿಖರವಾದ ರಿಟರ್ನ್ಸ್ ಸಲ್ಲಿಸಲು ಹೆಚ್ಚು ಸಮಯ ನೀಡಲು ಈ ವಿಸ್ತರಣೆ ನೀಡಲಾಗಿದೆ.
ಜಾರಿಗೆ ಬರುವ ಹೊಸ ರೂಲ್ಸ್‌ಗಳು ನಿಮ್ಮ ಹಣಕಾಸಿನ ವಹಿವಾಟುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಹೊಸ ನಿಯಮಗಳ ಬಗ್ಗೆ ತಿಳಿದು ಕೊಂಡು ಹಣಕಾಸಿನ ವ್ಯವಹಾರಗಳ ಬಗ್ಗೆ ಯೋಚನೆ ಮಾಡುವುದು ಒಳಿತು.
New money rules july 1st UPI chargeback Aadhaar-PAN, Tatkal tickets and more Kannada News



