FREE TRAVEL IN BMTC : ಸಿಲಿಕಾನ್​ ಸಿಟಿ ಜನತೆಗೆ ಗುಡ್​​ನ್ಯೂಸ್​ : ಬಿಎಂಟಿಸಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ಬೆಂಗಳೂರು : FREE TRAVEL IN BMTC : ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಸಾಕಷ್ಟು ಅಭಿಯಾನಗಳನ್ನು ನಡೆಸುತ್ತಿವೆ. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ಭಾಗಿಯಾಗಬೇಕೆಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈಗಾಗಲೇ ಮನೆ ಮನೆಯಲ್ಲಿಯೂ ತ್ರಿವರ್ಣ ಧ್ವಜವನ್ನು ಹಾರಿಸಲು ಕರೆ ನೀಡಿದೆ. ಸೋಶಿಯಲ್​ ಮೀಡಿಯಾದಲ್ಲಿ ಪ್ರೊಫೈಲ್​ ಫೋಟೋಗಳನ್ನು ತ್ರಿವರ್ಣ ಧ್ವಜದ ಫೋಟೋದೊಂದಿಗೆ ಬದಲಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ದೇಶದ ನಾಗರಿಕರ ಬಳಿ ವಿನಂತಿ ಮಾಡಿದ್ದರು.

ಈ ಎಲ್ಲದರ ನಡುವೆ ಇದೀಗ ಬೆಂಗಳೂರಿನಲ್ಲಿ ಸಾರಿಗೆ ಬಸ್​ಗಳ ಸೇವೆಯನ್ನು ನೀಡುವ ಬಿಎಂಟಿಸಿ ಕೂಡ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ದಿನದಂದೇ ಸಿಲಿಕಾನ್​ ಸಿಟಿ ಜನತೆಗೆ ಗುಡ್​ ನ್ಯೂಸ್​ ಒಂದನ್ನು ನೀಡಲು ಸಜ್ಜಾಗಿದೆ. ಆಗಸ್ಟ್​ ಹದಿನೈದರಂದು ಬಿಎಂಟಿಸಿ ಸೇವೆಯು ಆರಂಭಗೊಂಡು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ರಜತ ಮಹೋತ್ಸವವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಸಂಸ್ಥೆಯ ಸಾಮಾನ್ಯ ಸಾರಿಗೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವುದಾಗಿ ಹೇಳಿದೆ.

ರಜತ ಮಹೋತ್ಸವದ ನಿಮಿತ್ತ ಪ್ರಯಾಣಿಕರಿಗೆ ಒಂದು ದಿನ ಉಚಿತ ಪ್ರಯಾಣ ನೀಡಲು ಅವಕಾಶ ನೀಡುವಂತೆ ಕೋರಿ ಬಿಎಂಟಿಸಿ ಎಂಡಿ ರಾಜ್ಯ ಸರ್ಕಾರದ ಬಳಿ ಮನವಿಯನ್ನು ಮಾಡಿದ್ದರು. ಬಿಎಂಟಿಸಿಯ ಈ ಮನವಿಯನ್ನು ರಾಜ್ಯ ಸರ್ಕಾರವು ಪುರಸ್ಕರಿಸಿದ್ದು ಸ್ವಾತಂತ್ರ್ಯ ದಿನಾಚರಣೆಯ ಈ ದಿನದಂದು ರಾಜ್ಯ ರಾಜಧಾನಿಯ ಜನತೆ ಬಿಎಂಟಿಸಿಯಲ್ಲಿ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ.

ಇದನ್ನು ಓದಿ : 2nd PUC Supplementary Examination : ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : Praveen Nettaru murder case : ಪ್ರವೀಣ್​ ನೆಟ್ಟಾರು ಹಂತಕರ ಪಿನ್​ ಟು ಪಿನ್ ಮಾಹಿತಿ ನೀಡಿದ ಎಡಿಜಿಪಿ ಅಲೋಕ್​ ಕುಮಾರ್​​

ಇದನ್ನೂ ಓದಿ : FREE TRAVEL IN BMTC : ಸಿಲಿಕಾನ್​ ಸಿಟಿ ಜನತೆಗೆ ಗುಡ್​​ನ್ಯೂಸ್​ : ಬಿಎಂಟಿಸಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ಇದನ್ನೂ ಓದಿ : Praveen’s family thanked the police : ಪ್ರವೀಣ್​ ನೆಟ್ಟಾರು ಹಂತಕರಿಂದ ಸ್ಥಳ ಮಹಜರು : ಪೊಲೀಸ್​ ಇಲಾಖೆಗೆ ಧನ್ಯವಾದ ಅರ್ಪಿಸಿದ ಪ್ರವೀಣ್​ ತಾಯಿ

FREE TRAVEL IN BMTC ON INDEPENDENCE DAY

Comments are closed.