IPL 2021 : ಅರಬ್‌ನಾಡಲ್ಲಿ ನಾಳೆಯಿಂದ ಐಪಿಎಲ್‌ ಹಬ್ಬ

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ 14ನೇ ಆವೃತ್ತಿಯ ಐಪಿಎಲ್‌ ಉಳಿದ ಪಂದ್ಯಗಳು ನಾಳೆಯಿಂದ ಆರಂಭಗೊಳ್ಳಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅರ್ಧಕ್ಕೆ ಐಪಿಎಲ್‌ ಪಂದ್ಯಾವಳಿ ಸ್ಥಗಿತವಾಗಿದ್ದು, ಇದೀಗ ಯುಎಇಗೆ ಐಪಿಎಲ್‌ ಶಿಫ್ಟ್‌ ಆಗಿದ್ದು, ಇನ್ನು ಕೆಲವು ದಿನಗಳ ಐಪಿಎಲ್‌ ಹಬ್ಬ ನಡೆಯಲಿದೆ.

14 ನೇ ಆವೃತ್ತಿಯಲ್ಲಿ ಬಹುತೇಕ ತಂಡಗಳು 8 ಪಂದ್ಯಾವಳಿಗಳನ್ನು ಆಡಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 8 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಗೆಲವು ದಾಖಲಿಸಿದ್ದು, 2 ಪಂದ್ಯ ಗಳಲ್ಲಿ ಸೋಲನ್ನು ಕಂಡಿದೆ. ಒಟ್ಟು 12 ಅಂಕಗಳನ್ನು ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವ ಕಂಡಿದ್ದು, 10 ಅಂಕಗಳನ್ನು ಪಡೆದುಕೊಂಡಿದ್ರೆ ಮೂರನೇ ಸ್ಥಾನದಲ್ಲಿರುವ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡ 7 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದ್ದು 10 ಅಂಕ ಪಡೆದಿದೆ. ಆದರೆ ರನ್‌ ಧಾರಣೆಯ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದೆ.

8 ಅಂಕ ಪಡೆದಿರುವ ಮುಂಬೈ ಇಂಡಿಯನ್ಸ್‌ 4ನೇ ಸ್ಥಾನ ದಲ್ಲಿದ್ದರೆ, 6 ಅಂಕ ಪಡೆದಿರುವ ರಾಜಸ್ತಾನ ರಾಯನ್ಸ್‌ ಐದನೇ ಸ್ಥಾನ, 6 ಅಂಕ ಪಡೆದಿರುವ ಪಂಜಾಬ್‌ ಕಿಂಗ್ಸ್‌ 6 ಅಂಕ ಗಳೊಂದಿಗೆ 6 ನೇ ಸ್ಥಾನದಲ್ಲಿದೆ. ಉಳಿದಂತೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ 7 ಪಂದ್ಯಗಳನ್ನು ಆಡಿದ್ದು ಕೇವಲ ೨ರಲ್ಲಿ ಮಾತ್ರವೇ ಗೆಲುವನ್ನು ಕಂಡಿದದ್ದು 4 ಅಂಕಗಳೊಂದಿಗೆ 7 ನೇ ಸ್ಥಾನದಲ್ಲಿದ್ದರೆ, ಕೊನೆಯ ಸ್ಥಾನದಲ್ಲಿರುವ ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡ 7 ಪಂದ್ಯಗಳ ಪೈಕಿ ಕೇವಲ 1 ಪಂದ್ಯವನ್ನು ಮಾತ್ರ ಜಯಿಸಿದೆ.

ಇದೀಗ ಐಪಿಎಲ್‌ 14 ನೇ ಆವೃತ್ತಿಯ ದ್ವಿತೀಯಾರ್ಧ ಆರಂಭಗೊಳ್ಳುತ್ತಿದ್ದು, ಎಲ್ಲಾ ತಂಡಗಳು ಹುಮ್ಮಸ್ಸಿನಿಂದಲೇ ತರಬೇತಿ ನಡೆಸುತ್ತಿವೆ. ಹಲವು ಆಟಗಾರರ ಗೈರು ಈ ಬಾರಿಯ ಐಪಿಎಲ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದನ್ನೂ ಓದಿ : ಐಪಿಎಲ್‌ ಅಭ್ಯಾಸ ಪಂದ್ಯದಲ್ಲಿ ಎಬಿಡಿ ಅಬ್ಬರ : ಮೈದಾನದ ಹೊರಗೆ ಸಿಡಿದ ಸಿಕ್ಸರ್‌

ಇದನ್ನೂ ಓದಿ : ಐಪಿಎಲ್‌ನಲ್ಲಿ ನೀಲಿ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ

ಇದನ್ನೂ ಓದಿ : ಐಪಿಎಲ್‌ ಯುಎಇ ವೇಳಾಪಟ್ಟಿ ಪ್ರಕಟ : ನಿಮ್ಮ ನೆಚ್ಚಿನ ತಂಡದ ಪಂದ್ಯ ಯಾವಾಗ ಗೊತ್ತಾ ..?

( IPL festival to be held tomorrow at UAE)

Comments are closed.