Bangalore Crime : ಸೊಸೆಯೊಂದಿಗೆ ಸೆಕ್ಸ್‌ಗೆ ಮಾವನ ಒತ್ತಡ, ಪತಿಯಿಂದಲೂ ಕಿರುಕುಳ

ಬೆಂಗಳೂರು : ಪತಿ ಹತ್ತು ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಒತ್ತಡ ಹೇರಿದ್ದರೆ, ಮಾವ ( ಗಂಡನ ತಂದೆ) ತನ್ನ ಗಂಡ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ತನಗೆ ಲೈಂಗಿಕ ಆಸೆ ಯನ್ನು ಈಡೇರಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಕೋರಮಂಗಲದ ನಿವಾಸಿಯಾಗಿರುವ ಹರೀಶ್‌ (31 ವರ್ಷ) ಹಾಗೂ ತಂದೆ ರಾಮಕೃಷ್ಭ (61 ವರ್ಷ) ಎಂಬವರ ವಿರುದ್ದ ಇದೀಗ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ೨೪ ವರ್ಷ ಮಹಿಳೆಯೋರ್ವರು ದೂರು ನೀಡಿದ್ದಾರೆ.

2016ರಲ್ಲಿ ದಂಪತಿಗಳಿಗೆ ಮದುವೆಯಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಇಬ್ಬರೂ ಕೂಡ ಅನ್ಯೋನ್ಯವಾಗಿಯೇ ಇದ್ದರು. ಆದ್ರೆ ತದನಂತದಲ್ಲಿ ಪತಿ ಹರೀಶ್‌ ತನ್ನ ಮನೆಯಿಂದ 10ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪದೇ ಪದೇ ಜಗಳವಾಡುತ್ತಿದ್ದ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು ಮಾವ ರಾಮಕೃಷ್ಣ ಪತಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ತನ್ನೊಂದಿಗೆ ಲೈಂಗಿಕ ಆಸೆ ತೀರಿಸುವಂತೆ ಒತ್ತಡ ಹೇರುತ್ತಿದ್ದರು. ನಿನಗೆ ಯಾವುದೇ ಸಹಾಯ ಬೇಕಾದ್ರೂ ಮಾಡಿಕೊಡ್ತೇನೆ ಅನ್ನೋ ಆಮಿಷವೊಡ್ಡಿದ್ದಾರೆ. ಸ್ನಾನ ಮಾಡುವಾಗ ಬಲವಂತವಾಗಿಯೇ ಬಾಗಿಲು ತೆಗೆಸುತ್ತಿದ್ದು, ಕಿಟಕಿಯಲ್ಲಿ ನೋಡುತ್ತಿದ್ದು, ಬಟ್ಟೆ ಬದಲಿಸುವ ವೇಳೆಯಲ್ಲಿಯೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಠಾಣೆಯ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.

Comments are closed.