Travel Ban : ಭಾರತ ಸೇರಿ ‘ಕೆಂಪು ಪಟ್ಟಿ’ ದೇಶಗಳಿಗೆ ಭೇಟಿ : 3 ವರ್ಷ ಪ್ರಯಾಣ ನಿಷೇಧ ಹೇರಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ : ಕರೋನಾ ವೈರಸ್ ಸೋಂಕು ಮತ್ತು ಅದರ ಹೊಸ ರೂಪಾಂತರಗಳ ಹರಡುವಿಕೆಯನ್ನುತಡೆಯುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಕೊರೊನಾ ಸೋಂಕು ಹೆಚ್ಚಿರುವ ಭಾರತ ಸೇರಿದಂತೆ ಕಪ್ಪು ಪಟ್ಟಿಗೆ ಸೇರಿದ ದೇಶಗಳಿಗೆ ಪ್ರಯಾಣಿಸುವ ನಾಗರೀಕರಿಗೆ ಸೌದಿ ಅರೇಬಿಯಾ ಮೂರು ವರ್ಷಗಳ ಕಾಲ ಪ್ರಯಾಣ ನಿಷೇಧ ಹೇರಿದೆ.

2020 ರ ಮಾರ್ಚ್ ನಂತರ ಮೊದಲ ಬಾರಿಗೆ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೇ ಕೊರೊನಾ ಸೋಂಕು ಹೆಚ್ಚಿರುವ ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಸೌದಿ ಅರೇಬಿಯಾ ವಿಧಿಸಿದ್ದ ಪ್ರಯಾಣ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಕಪ್ಪುಪಟ್ಟಿಯಲ್ಲಿರುವ ದೇಶಗಳಿಗೆ ಪ್ರಯಾಣಿಸಿರುವ ತನ್ನ ನಾಗರೀಕರ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಅರ್ಜೆಂಟೀನಾ, ಬ್ರೆಜಿಲ್, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಲೆಬನಾನ್, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವು ದೇಶಗಳನ್ನು ಸೌದಿ ಅರೇಬಿಯಾ ಕಪ್ಪು ಪಟ್ಟಿಗೆ ಸೇರಿದ್ದು, ಇಂತಹ ದೇಶಗಳಿಗೆ ಪ್ರಯಾಣ ಬೆಳೆಸುವುದಕ್ಕೆ ತನ್ನ ನಾಗರಿಕರಿಗೆ ನಿಷೇಧವನ್ನು ಹೇರಿದೆ. ಆದ್ರೂ ಕೂಡ ಸರಕಾರದ ಕಣ್ಣು ತಪ್ಪಿಸಿ ಹಲವರು ಪ್ರಯಾಣ ಬೆಳೆಸಿದ್ದಾರೆ.

ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕು, ಡೆಲ್ಟಾ ಫ್ಲಸ್‌ ಅಬ್ಬರ ಜೋರಾಗುತ್ತಿದ್ದಂತೆಯೇ ಸೌದಿ ಅರೇಬಿಯಾ ಕಠಿಣ ನಿಯಮ ಜಾರಿಗೆ ತಂದಿತ್ತು. ಕಪ್ಪುಪಟ್ಟಿಗೆ ಸೇರಿದ ದೇಶಗಳಿಗೆ ನೇರವಾಗಿ ಅಥವಾ ಬೇರೆ ದೇಶದ ಮೂಲಕ ಪ್ರಯಾಣಿಸುವುದನ್ನು ಸೌದಿ ನಿಷೇಧ ಹೇರಿದೆ. ಒಂದೊಮ್ಮೆ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಅಂತಹ ಪ್ರಯಾಣಿಕರಿಗೆ ಮೂರು ವರ್ಷಗಳ ಕಾಲ ವಿಮಾನ ಯಾನ ಪ್ರಯಾಣ ಬ್ಯಾನ್‌ ಮಾಡಲಾಗುತ್ತಿದೆ.

Comments are closed.