Metro Ticket book Mobile : ಮತ್ತಷ್ಟು ಜನಸ್ನೇಹಿ ಆಗ್ತಿದೆ ನಮ್ಮ ಮೆಟ್ರೋ : ಮೊಬೈಲ್ ನಲ್ಲೇ ಬುಕ್ ಮಾಡಬಹುದು ಟಿಕೇಟ್

ಬೆಂಗಳೂರು : (Metro Ticket book Mobile) ಟ್ರಾಫಿಕ್ ಜಂಜಾಟದಿಂದ ಬೇಸತ್ತಿದ್ದ ಬೆಂಗಳೂರಿನ ಜನರಿಗೆ ಸಂಚಾರ ದಟ್ಟಣೆಯಿಲ್ಲದ ಸಂಚಾರ ವ್ಯವಸ್ಥೆ ಒದಗಿಸಿದ್ದು ನಮ್ಮ ಮೆಟ್ರೋ. ಈಗ ಬೆಂಗಳೂರಿಗರ ಪಾಲಿಗೆ ಆಪ್ತವಾಗಿರೋ ನಮ್ಮ‌ಮೆಟ್ರೋ ಮತ್ತಷ್ಟು ಯೂಸರ್ ಪ್ರೆಂಡ್ಲಿ ಆಗ್ತಿದ್ದು ಇನ್ನುಂದೇ ನೀವು ಮೆಟ್ರೋ ನಿಲ್ದಾಣದಲ್ಲಿ ಕ್ಯೂ ನಿಂತು ಟಿಕೇಟ್ ಪಡೆಯೋ ಹಾಗಿಲ್ಲ ಬದಲಾಗಿ. ನಿಮ್ಮ ಮೊಬೈಲ್ ಬಳಸಿಕೊಂಡೇ ನೀವು ಟಿಕೇಟ್ ಬುಕ್ ಮಾಡಬಹುದು. ಆ ಮೂಲಕ ಯಾವುದೇ ಒತ್ತಡವಿಲ್ಲದೇ ಮೆಟ್ರೋದಲ್ಲಿ ಸಂಚರಿಸಬಹುದು.

ಇಷ್ಟು ದಿನಗಳ ಕಾಲ ನೀವು ಮೆಟ್ರೋದಲ್ಲಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ಅಥವಾ ಹಣ ಪಾವತಿಸಿ ಟೋಕನ್ ಪಡೆಯಬೇಕಿತ್ತು. ಆದರೆ ಇನ್ಮುಂದೇ ನೀವು ಟೋಕನ್, ಸ್ಮಾರ್ಟ್ ಕಾರ್ಡ್ ಬದಲಾಗಿ ಮುಂದಿನ ತಿಂಗಳಿಂದ ಮೊಬೈಲ್ ನಲ್ಲೇ ಮೆಟ್ರೋ ಟಿಕೆಟ್ ಬುಕ್ ಮಾಡಬಹುದಾಗಿದೆ. ಮುಂದಿನ ತಿಂಗಳಿನಿಂದ ಪ್ರಯಾಣಿಕರು ತಮ್ಮ ಸ್ಮಾರ್ಟ್ ಪೋನ್ ನಲ್ಲಿ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮಾರ್ಗ ನಮೂದಿಸಿ ಟಿಕೆಟ್ ಪಡೆಯಬಹುದು. ಮೆಟ್ರೋ ದ್ವಾರಗಳಲ್ಲಿ ಕ್ಯೂ ಆರ್ ಕೋರ್ಡ್ ವ್ಯವಸ್ಥೆಗೆ ಸ್ಪಂದಿಸುವ ಸಾಫ್ಟ್‌ವೇರ್ ವ್ಯವಸ್ಥೆ ಅಳವಡಿಕೆಯಾಗಲಿದೆ. ನಿಮ್ಮ ಮೊಬೈಲ್ ಟಿಕೆಟ್ ಎಂಟ್ರಿಗೇಟ್ ನಲ್ಲಿ ಸ್ಕ್ಯಾನ್ ಮಾಡಿದ್ರೆ ಗೇಟ್ ಒಫನ್ ಆಗಲಿದೆ. ದೆಹಲಿ ಮೆಟ್ರೋ ಮಾದರಿಯಲ್ಲೇ ನಮ್ಮ ಮೆಟ್ರೋದಲ್ಲೂ ಮೊಬೈಲ್ ಟಿಕೆಟ್ ಜಾರಿಗೆ ತರಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ.

ಹಾಗಿದ್ದರೇ ನಮ್ಮ ಮೆಟ್ರೋ ಮೊಬೈಲ್ ಟಿಕೇಟ್ ಬುಕ್ಕಿಂಗ್ ವ್ಯವಸ್ಥೆ ಹೇಗಿದೆ ಅನ್ನೋದನ್ನು ಗಮನಿಸೋದಾದರೇ,

  • ಪ್ರಯಾಣಿಕರು ತಮ್ಮ ಸ್ಮಾರ್ಟ್ ಪೋನ್ನಲ್ಲಿ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಬೇಕು
  • ನಂತರ ತಾವು ಪ್ರಯಾಣಿಸುವ ಮಾರ್ಗ ಮತ್ತು ಎಷ್ಟು ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ ಎಂಬುದನ್ನು ನಮೂದಿಸಬೇಕು
  • ನಂತರ ತಾವು ಬಳಸುವ UPI ಪೇಮೆಂಟ್ ಮಾದರಿಯಲ್ಲಿ ಟಿಕೆಟ್ ದರ ಪಾವತಿಸವೇಕು
  • ಕೂಡಲೇ ಪ್ರಯಾಣದ ಮೊತ್ತವು ಆನ್ಲೈನ್ ಮೂಲಕ BMRCLಗೆ ಜಮಾ ಆಗಲಿದೆ
  • ಬಳಿಕ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು
  • ಕ್ಯೂ ಆರ್ ಕೋಡ್ ಗಳು ಪ್ರವೇಶ ದ್ವಾರದ ಎಎಫ್ಸಿ ಗೇಟ್ ಗಳಲ್ಲಿ ಲಭ್ಯವಿರಲಿದೆ
  • ಈ ವೇಳೆ ಪೇಮೆಂಟ್ ಸಕ್ಸಸ್ ಫುಲ್‌ ಆಗಿದ್ದರೆ ಗೇಟ್ ಗಳು ಓಪನ್ ಆಗಲಿದೆ
  • ಇದರಿಂದ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲದೆ ಟಿಕೆಟ್ ಪಡೆದು ಸಮಯ ಉಳಿಸಬಹುದು
  • ಪ್ರಯಾಣಿಕರು ತಾವು ಇಳಿಯುವ ಸ್ಥಳದಲ್ಲಿ ಇದರ ಅಗತ್ಯವಿರುವುದಿಲ್ಲ.

ಇದನ್ನೂ ಓದಿ : Minister R. Ashok : ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಬಗ್ಗೆ ಯೋಚಿಸಿಲ್ಲ : ಸಚಿವ ಆರ್​.ಅಶೋಕ್​

ಇದನ್ನೂ ಓದಿ : AAP Govt in Delhi Under Threat : ಪತನದ ಭೀತಿಯಲ್ಲಿ ದೆಹಲಿಯ ಆಪ್​ ಸರ್ಕಾರ : ಸಂಪರ್ಕಕ್ಕೆ ಸಿಗದ ಶಾಸಕರು

Metro Ticket book Mobile : Our metro is becoming more people friendly: tickets can be booked on mobile

Comments are closed.