Minister R. Ashok : ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಬಗ್ಗೆ ಯೋಚಿಸಿಲ್ಲ : ಸಚಿವ ಆರ್​.ಅಶೋಕ್​

ಬೆಂಗಳೂರು : Minister R. Ashok : ಚಾಮರಾಜಪೇಟೆಯಲ್ಲಿರುವ ವಿವಾದಿತ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ಬಳಿಕ ಗಣೇಶೋತ್ಸವ ಕೂಡ ಆಚರಿಸಬೇಕು ಎಂಬ ಕೂಗು ಕೇಳಿ ಬರ್ತಿದೆ. ಈ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್​.ಅಶೋಕ್​​ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿಯನ್ನು ಕೋರಿ ಇಲ್ಲಿಯವರೆಗೆ ನನಗೆ ಯಾರೂ ಅರ್ಜಿಯನ್ನು ನೀಡಿಲ್ಲ. ಆದರೆ ಅಧಿಕಾರಿಗಳಿಗೆ ಅರ್ಜಿಗಳು ಬಂದಿವೆ. ಈ ಬಗ್ಗೆ ಇನ್ನೂ ನಾವು ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅಶೋಕ್​​ ಮಾಹಿತಿ ನೀಡಿದ್ದಾರೆ.


ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಬಗ್ಗೆ ನಾವಿನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ. 75 ವರ್ಷಗಳಿಂದ ಇಲ್ಲಿ ಹಬ್ಬ ಆಚರಣೆ ಮಾಡಿಲ್ಲ. ವಿವಾದಿತ ಈ ಮೈದಾನದಲ್ಲಿ ನಾವು ಆಗಸ್ಟ್​ 15ರಂದು ಶಾಂತಿಯುತವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದೇವೆ. ಹೀಗಾಗಿ ಈ ಮೈದಾನದಲ್ಲಿ ಯಾವ ರೀತಿಯಲ್ಲಿ ಸಂಭ್ರಮಾಚರಣೆ ಶಾಂತಿಯುತವಾಗಿ ನಡೆಯುವಂತೆ ಮಾಡಬೇಕು ಎಂಬುದು ನಮಗೆ ತಿಳಿದಿದೆ. ಆದರೆ ಇಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಬಗ್ಗೆ ಒಮ್ಮೆ ಸಿಎಂ ಬೊಮ್ಮಾಯಿ ಜೊತೆಯಲ್ಲಿ ಮಾತನಾಡಬೇಕು ಎಂದು ಹೇಳಿದ್ದಾರೆ .


ಕಾರ್ಪೋರೇಷನ್​​ನ ಅಧಿಕಾರಿಗಳು ಗಣೇಶೋತ್ಸವ ಆಚರಣೆ ಸಂಬಂಧ ಚರ್ಚೆ ನಡೆಸಲು ಇಂದು ಸಭೆ ಸೇರಲಿದ್ದಾರೆ. ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ ಎನ್ನಲಾಗ್ತಿದೆ. ಆದರೆ ಇದು ನನ್ನ ಗಮನಕ್ಕೆ ಈವರೆಗೆ ಬಂದಿಲ್ಲ. ನಾವು ಎಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ತೇವೆ ಎಂದು ಹೇಳಿದರು.

ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾಡಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ಇದೇ ವೇಳೆ ಮಾತನಾಡಿದ ಸಚಿವ ಆರ್​.ಅಶೋಕ್​, ಗುತ್ತಿಗೆದಾರ ಸಂಘದ ಅಧ್ಯಕ್ಷರ ಬಳಿ ಅವರು ಮಾಡಿರುವ ಆರೋಪಕ್ಕೆ ಸಾಕ್ಷ್ಯಾಧಾರಗಳು ಇದ್ದಲ್ಲಿ ಅವರು ಅದನ್ನು ಲೋಕಾಯುಕ್ತಕ್ಕೆ ಕೊಡಲಿ . 224 ಶಾಸಕರ ಮೇಲೆ ಕೆಂಪಣ್ಣ ಆರೋಪ ಮಾಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಹೆಸರೂ ಸಹ ಇದೆ. ಕೆಂಪಣ್ಣ ಲೋಕಾಯುಕ್ತಕ್ಕೆ ಮಾಹಿತಿ ನೀಡದೇ ಸುಮ್ಮನೇ ಗಾಳಿಯಲ್ಲಿ ಗುಂಡು ಹೊಡೆದರೆ ಯಾವುದೇ ಪ್ರಯೋಜನವಾಗಲ್ಲ ಎಂದು ಹೇಳಿದರು .

ಇದನ್ನು ಓದಿ : AAP Govt in Delhi Under Threat : ಪತನದ ಭೀತಿಯಲ್ಲಿ ದೆಹಲಿಯ ಆಪ್​ ಸರ್ಕಾರ : ಸಂಪರ್ಕಕ್ಕೆ ಸಿಗದ ಶಾಸಕರು

ಇದನ್ನೂ ಓದಿ : iPhone 14 launch date : ಬಿಡುಗಡೆಯಾಗಲಿದೆ ಐಫೋನ್ 14, ಬೆಲೆ ಎಷ್ಟು ಏನಿದರ ವೈಶಿಷ್ಟ್ಯತೆ

Statement of Minister R. Ashok regarding Ganesha celebration at Idga Maidan

Comments are closed.