carom seeds:ಗ್ಯಾಸ್ಟ್ರಿಕ್‌ ಸಮಸ್ಯೆಗೆ ಓಮದ ಕಾಳಿನ ಪರಿಹಾರ

(carom seeds)ಆಹಾರ ಪದ್ದತಿ, ಜೀವನ ಶೈಲಿಯಿಂದಾಗಿ ಗ್ಯಾಸ್ಟ್ರಿಕ್‌ ಸಮಸ್ಯೆ ಇಂದು ಸರ್ವೇ ಸಾಮಾನ್ಯ. ಹೊತ್ತಲ್ಲದ ಹೊತ್ತಲ್ಲಿ ಊಟ, ನಿದ್ರಾ ಹೀನತೆ, ಆಹಾರ ಸೇರಿದಂತೆ ನಾನಾ ಕಾರಣಗಳಿಂದಾಗಿ ಗ್ಯಾಸ್ಟ್ರಿಕ್‌ ಉಂಟಾಗುತ್ತಿದೆ. ಕೆಲವರಿಗೆ ಆಹಾರ ಸೇವನೆಯಿಂದ ಗ್ಯಾಸ್ಟ್ರಿಕ್‌ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ದುಬಾರಿ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಆದರೆ ಮಾತ್ರೆಗಳ ಬದಲು ಮನೆಯಲ್ಲಿಯೇ ಮದ್ದು ತಯಾರಿಸಿ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಮುಕ್ತರಾಗಬಹುದಾಗಿದೆ. ಗ್ಯಾಸ್ಟ್ರಿಕ್‌ ಸಮಸ್ಯೆಗೆ ಮನೆ ಮದ್ದು ತಯಾರಿಸುವುದು ಹೇಗೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು:

  • ಜೀರಿಗೆ
  • ಕೊತ್ತಂಬರಿ ಬೀಜ
  • ಓಮದ ಕಾಳು(ಅಜ್ವಾನ)(carom seeds)

ಮಾಡುವ ವಿಧಾನ:
ಮಿಕ್ಸಿಯ ಜಾರಿಯಲ್ಲಿ ಜೀರಿಗೆ, ಕೊತ್ತಂಬರಿ ಬೀಜ, ಓಮದ ಕಾಳನ್ನು ಹಾಕಿ ಪುಡಿಮಾಡಿಕೊಂಡು ಒಂದು ಡಬ್ಬದಲ್ಲಿ ಶೇಖರಿಸಿ ಇಟ್ಟು ಕೊಳ್ಳಬೇಕು. ಪ್ರತಿನಿತ್ಯ ರಾತ್ರಿ ನೀರನ್ನು ಕುದಿಸಿಕೊಂಡು ಒಂದು ಲೋಟದಲ್ಲಿ ಹಾಕಿ ಅದಕ್ಕೆ ಮಿಕ್ಸಿಯಲ್ಲಿ ಪುಡಿಮಾಡಿಕೊಂಡ ಮಿಶ್ರಣವನ್ನು ಹಾಕಬೇಕು, ಅದರ ಮೇಲೆ ಒಂದು ತಟ್ಟೆಯನ್ನು ಮುಚ್ಚಿಡಬೇಕು. ಮಾರನೆಯ ದಿನದ ಬೆಳಿಗ್ಗೆ ಜಾವದಂದು ಲೋಟದಲ್ಲಿ ಹಾಕಿರುವ ಮಿಶ್ರಣ ತಳಭಾಗದಲ್ಲಿ ಇರುತ್ತದೆ. ಮೇಲೆ ಇರುವ ತಿಳಿ ನೀರನ್ನು ಮಾತ್ರ ಸೇವಿಸಬೇಕು.

ಇದನ್ನೂ ಓದಿ:Ondanke Kadu:’ಒಂದಂಕೆ ಕಾಡು’ ಅಂಗಳದಿಂದ ‘ಓ ಒಲವೇ’ ರೋಮ್ಯಾಂಟಿಕ್ ಸಾಂಗ್ ರಿಲೀಸ್

ಇದನ್ನೂ ಓದಿ:Hyderabad :ಟ್ರಾಫಿಕ್​​ ಪೊಲೀಸರು ದಂಡ ವಿಧಿಸಿದ್ದಕ್ಕೆ ಬೈಕ್​​ನ್ನೇ ಸುಟ್ಟ ವಾಹನ ಸವಾರ: ವಿಡಿಯೋ ವೈರಲ್​

ಇದನ್ನೂ ಓದಿ:Mayank Agarwal to lead Karnataka : ಸೈಯದ್ ಮುಷ್ತಾಕ್ ಅಲಿ ಟಿ20 : ಮನೀಶ್ ಪಾಂಡೆ ಕೈ ತಪ್ಪಿದ ನಾಯಕತ್ವ, ಕರ್ನಾಟಕ ತಂಡಕ್ಕೆ ಮಯಾಂಕ್ ಕ್ಯಾಪ್ಟನ್

ಬೇಕಾಗುವ ಸಾಮಾಗ್ರಿಗಳು:

  • ಒಣ ಶುಂಟಿ
  • ಓಮದ ಕಾಳು
  • ಸೈಂದವ ಲವಣ (ಕಲ್ಲು ಉಪ್ಪು)

ಮಾಡುವ ವಿಧಾನ :

ಒಣ ಶುಂಟಿ , ಓಮದ ಕಾಳು, ಸೈಂದವ ಲವಣ ಮಿಕ್ಸಿಯಲ್ಲಿ ಹಾಕಿ ಬೇರೆ ಬೇರೆಯಾಗಿ ಪುಡಿಮಾಡಿಕೊಳ್ಳಬೇಕು. ಒಣಶುಂಟಿ ಪುಡಿ ಒಂದು ಮುಷ್ಟಿ, ಒಮದ ಕಾಳಿನ ಪುಡಿಯನ್ನು ಒಣಶುಂಟಿ ಹಾಕಿಕೊಂಡ ಅರ್ಧದಷ್ಟು ಹಾಕಿಕೊಳ್ಳಬೇಕು ನಂತರ ಸೈಂದವ ಲವಣವನ್ನು ಕಾಳಿನ ಪುಡಿಯ ಅರ್ಧದಷ್ಟು ಹಾಕಿಕೊಂಡು ಮಿಶ್ರಣ ಮಾಡಿ ಡಬ್ಬದಲ್ಲಿ ಶೇಖರಿಸಿ ಇಡಬೇಕು. ಪ್ರತಿದಿನ ಬೆಳಿಗ್ಗೆ ತಿಂಡಿಗೂ ಮೊದಲು ಮತ್ತು ರಾತ್ರಿ ಮಲಗುವ ಸಮಯದಲ್ಲಿ ಪುಡಿಯನ್ನು ಬಾಯಿಗೆ ಹಾಕಿಕೊಂಡು ಬೆಚ್ಚಗಿನ ನೀರನ್ನು ಕುಡಿಯಬೇಕು ಹೀಗೆ ಮಾಡುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆಯ ಜೊತೆಗೆ ಅಜೀರ್ಣದ ಸಮಸ್ಯೆ ಕಡಿಮೆಯಾಗುತ್ತದೆ.

ಬೇಕಾಗುವ ಸಾಮಾಗ್ರಿ:

  • ಪುದಿನ ಸೊಪ್ಪು
  • ಹಸಿ ಶುಂಟಿ
  • ಜೇನುತುಪ್ಪ

ಮಾಡುವ ವಿಧಾನ:

ಪುದಿನ ಸೊಪ್ಪು ಮತ್ತು ಹಸಿ ಶುಂಟಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಒಂದು ಲೋಟದಲ್ಲಿ ಶೋಧಿಸಿಕೊಂಡು ಅದಕ್ಕೆ ಜೇನುತುಪ್ಪವನ್ನು ಬೇರೆಸಿ ಕುಡಿದರೆ ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಅಜೀರ್ಣದ ಸಮಸ್ಯೆ ಕಡಿಮೆ ಮಾಡುತ್ತದೆ.

carom seeds Remedy for Gastric Problem

Comments are closed.