ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್ : ಹಳದಿ ಲೈನ್​ ಮೆಟ್ರೋ ಪ್ರಯಾಣ BMRCL ಹೊಸ ರೂಲ್ಸ್

ಬೆಂಗಳೂರು : ಮೆಟ್ರೋ (Namma metro) ಪ್ರಯಾಣಿಕರ ಬೇಡಿಕೆಗೆ ಕೊನೆಗೂ ಮಣಿದ ಬಿಎಂಆರ್‌ಸಿಎಲ್‌ (BMRCL)​​ ಯೆಲ್ಲೋ ಲೈನ್‌ ನಲ್ಲಿ ಮೆಟ್ರೋ ಪ್ರಯಾಣದಲ್ಲಿ ಬದಲಾವಣೆ ಮಾಡಿದೆ. ಇನ್ಮುಂದೆ ಪ್ರತಿ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ಪ್ರಯಾಣ ಆರಂಭಿಸಲು ಬಿಎಂಆರ್ಸಿಎಲ್​ ನಿರ್ಧರಿಸಿದೆ.

ಈವರೆಗೆ ಮೆಟ್ರೋ ಹಳದಿ ಲೇನ್ನಲ್ಲಿ ಬೆಳಗ್ಗೆ 6ರಿಂದ ಮೆಟ್ರೋ ಸೇವೆ ಆರಂಭಗೊಳ್ಳುತ್ತಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜನರ ಗುಂಪೊಂದು ಸಂಚಾರಕ್ಕೆ ಅಡ್ಡಿಪಡಿಸುವ ಮೂಲಕ ಪ್ರತಿಭಟನೆ ನಡೆಸಿತ್ತು.

ಇದೀಗ ಜನರ ಬೇಡಿಕೆಗೆ ಮಣಿದಿರುವ ಬಿಎಂಆರ್​ಸಿಎಲ್​ ಮುಂದಿನ ಸೋಮವಾರದಿಂದ ಬೆಳಗ್ಗೆ 5:05 ಹಾಗೂ 5:35ರ ನಡುವೆ 2 ಮೆಟ್ರೋ ಬಿಡುವುದಾಗಿ ಮಹತ್ವದ ಮಾಹಿತಿ ನೀಡಿದೆ.

ಸೋಮವಾರ ಮಾತ್ರ ಈ ಬದಲಾವಣೆ ಅನ್ವಯವಾಗಲಿದ್ದು ಮಿಕ್ಕ ದಿನಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮೆಟ್ರೋ ಸೇವೆ ಆರಂಭಗೊಳ್ಳಲಿದೆ. ಇನ್ನುಳಿದಂತೆ ಭಾನುವಾರ ಮೊದಲ ಮೆಟ್ರೋ ಬೆಳಗ್ಗೆ 7 ಗಂಟೆಗೆ ಸಂಚರಿಸಲಿದೆ.

ನೇರಳೆ ಹಾಗೂ ಹಸಿರು ಮೆಟ್ರೊ ಮಾರ್ಗಗಳು ಪ್ರತಿ ದಿನ ಬೆಳಗ್ಗೆ 5:05ಕ್ಕೆ ಆರಂಭಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಹಳದಿ ಮಾರ್ಗದಲ್ಲಿಯೂ ಬದಲಾವಣೆ ತರಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದರು.

Namma metro Passengers good news for BMRCL

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories