Beer Made From Urine : ಮದ್ಯಪ್ರಿಯರೇ ಗಮನಿಸಿ : ಮೂತ್ರದಿಂದ ತಯಾರಾಗುತ್ತಿದೆ ಬಿಯರ್​

Beer Made From Urine : ಸಿಂಗಾಪುರವು ಬಿಯರ್​ ಉದ್ಯಮದಲ್ಲಿ ಹೊಸದೊಂದು ಪ್ರಯತ್ನವನ್ನು ಮಾಡಿದ್ದು ನ್ಯೂಬ್ರೂ ಎಂಬ ಹೊಸ ಬಿಯರ್​ ಉತ್ಪನ್ನವನ್ನು ಪರಿಚಯಿಸಿದೆ. ಇದು ಸಾಮಾನ್ಯ ಬಿಯರ್​ನಂತೆ ಕಾಣಿಸುತ್ತದೆ ಹಾಗೂ ಅದೇ ರೀತಿಯ ರುಚಿಯನ್ನು ಹೊಂದಿದ್ದರೂ ಸಹ ಇಲ್ಲೊಂದು ದೊಡ್ಡ ಟ್ವಿಸ್ಟ್​ ಇದೆ. ಅದೇನಂದರೆ ನೀ ವಾಟರ್​ನಿಂದ ಈ ಬಿಯರ್​ಗಳನ್ನ ತಯಾರಿಸಲಾಗುತ್ತದೆ. ಈ ನೀ ವಾಟರ್​ ಸಿಂಗಾಪುರದ ಒಳಚರಂಡಿ ಹಾಗೂ ಮೂತ್ರವನ್ನು ಫಿಲ್ಟರ್​​ ಮಾಡುವ ಮೂಲಕ ತಯಾರಿಸಲಾಗುತ್ತದೆ.


ಸುಮಾರು 95 ಪ್ರತಿಶತದಷ್ಟು ನ್ಯೂಬ್ರೂವು ನೀವಾಟರ್‌ನಿಂದ ಮಾಡಲ್ಪಟ್ಟಿದೆ, ಇದು ಸುರಕ್ಷಿತ ಕುಡಿಯುವ ನೀರಿನ ಅಂತರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿದೆ ಮಾತ್ರವಲ್ಲದೆ ಬಿಯರ್ ತಯಾರಿಸಲು ಬಳಸುವಷ್ಟು ಸ್ವಚ್ಛವಾಗಿ ಪರೀಕ್ಷಿಸಲ್ಪಟ್ಟಿದೆ.


ನೋಡಲು ಥೇಟ್​ ಸಾಮಾನ್ಯ ಬಿಯರ್​​ನಂತೆ ಕಾಣುವ ಈ ನ್ಯೂಬ್ರೂ ಬಿಯರ್​​ನ್ನು ಪ್ರೀಮಿಯಂ ಜರ್ಮನ್​ ಬಾರ್ಲಿ ಮಾಲ್ಟ್​ಗಳು, ಆರೊಮ್ಯಾಟಿಕ್​ ಸಿಟ್ರಾ ಹಾಗೂ ಕ್ಯಾಲಿಪ್ಸೊ ಹಾಪ್​ಗಳಂತಹ ಅತ್ಯುತ್ತಮ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.


ನ್ಯೂಬ್ರೂ ಅನ್ನು ರಾಷ್ಟ್ರೀಯ ವಾಟರ್ ಏಜೆನ್ಸಿ PUB ಮತ್ತು ಸ್ಥಳೀಯ ಕ್ರಾಫ್ಟ್ ಬಿಯರ್ ಬ್ರೂವರೀಸ್‌ಗಳು ಏಪ್ರಿಲ್ 8 ರಂದು ಸಿಂಗಾಪುರ್ ಇಂಟರ್ನ್ಯಾಷನಲ್ ವಾಟರ್ ವೀಕ್ (SIWW) ನಲ್ಲಿ ನಡೆದ ಜಲ ಸಮ್ಮೇಳನದ ಸಭೆಯೊಂದಿಗೆ ಪ್ರಾರಂಭಿಸಿದವು. ಅದೇ ಸಮಯದಲ್ಲಿ, ನ್ಯೂವಾಟರ್ ಮಾಲ್ಟ್, ಹಾಪ್ಸ್ ಮತ್ತು ಯೀಸ್ಟ್ ತಳಿಗಳ ಸುವಾಸನೆಯನ್ನು ಇವು ಕಲುಷಿತಗೊಳಿಸುವುದಿಲ್ಲ.

ಇದನ್ನು ಓದಿ : ಚೈತ್ರಾ ಹಳ್ಳಿಕೇರಿ 25 ಕೋಟಿ ಪರಿಹಾರಕ್ಕಾಗಿ ಸುಳ್ಳು ಆರೋಪ : ನಟಿ ಪತಿ ಬಾಲಾಜಿ ಪ್ರತ್ಯಾರೋಪ

ಇದನ್ನೂ ಓದಿ : Samantha and Vijay : ಸಾಹಸ ಚಿತ್ರೀಕರಣದ ವೇಳೆ ಗಾಯಗೊಂಡ ಸಮಂತಾ ಮತ್ತು ವಿಜಯ ದೇವರಕೊಂಡ

Comments are closed.