Peenya Flyover Closed : ವಾಹನ ಸವಾರರಿಗೆ ಶಾಕ್: ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ರಾತ್ರಿ ಸಂಚಾರ ಬಂದ್

ಬೆಂಗಳೂರು : ವಾಹನ ಸವಾರರ ಪಾಲಿಗೆ ಮೇಲ್ಸೇತುವೆಗಳೇ ತಲೆನೋವಾಗಿ ಪರಿಣಮಿಸಿವೆ. ಅದರಲ್ಲೂ ಭಾರಿ ವಾಹನಗಳು ಮೇಲ್ಸುತುವೆ ಮೇಲೆ‌ ಸಂಚರಿಸಿ ಸೃಷ್ಟಿಸೋ ಅವಾಂತರಗಳು ಒಂದೆರಡಲ್ಲ. ಹೀಗಾಗಿ ಪೀಣ್ಯ ಎಲಿವೇಟೆಡ್ ಫ್ಲೈಓವರ್ ( Peenya Flyover Closed ) ಮೇಲೆ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿ ನಗರ ಸಂಚಾರಿ ಪೊಲೀಸ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಶನಿವಾರದಿಂದಲೇ ಜಾರಿಗೆ ಬರುವಂತೆ ಈ ನಿಷೇಧ ಆಜ್ಞೆ ಜಾರಿಗೆ ಬರಲಿದ್ದು, ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮೇಲ್ಸೇತುವೆಯಲ್ಲಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ ರಾತ್ರಿ ವೇಳೆ ಲಘು ವಾಹನವನ್ನು ಪ್ರತ್ಯೇಕಿಸಿ ಕಳುಹಿಸುವುದು ಪೊಲೀಸರಿಗೆ ಕಷ್ಟ ಸಾಧ್ಯ ಹೀಗಾಗಿ ಸಾಮೂಹಿಕವಾಗಿ ಎಲ್ಲ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಈಗಾಗಲೇ ಮೇಲ್ಸುತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಲು ಗ್ಯಾಂಟ್ರಿ ಅಳವಡಿಸಲಾಗಿದೆ. ಆದರೇ ಈ ಗ್ರ್ಯಾಂಟ್ರಿ ಪೇದೆ ಪದೇ ಡ್ಯಾಮೇಜ್ ಗೊಳಗಾಗುತ್ತಿದೆ. ಹೀಗಾಗಿ ರಾತ್ರಿ 12 ಗಂಟೆ ನಂತರ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ ಟ್ರಾಫಿಕ್ ಪೊಲೀಸ್ ಆಯುಕ್ತ ಎನ್.ರವಿಕಾಂತೇ ಗೌಡ ಆದೇಶ ಹೊರಡಿಸಿದ್ದಾರೆ‌. ಈ ಆದೇಶದ ಅನ್ವಯ ಬೆಳಗಿನ ಜಾವ 5 ಗಂಟೆಯವರೆಗೂ ಮೇಲ್ಸೇತುವೆಯ ಮೇಲೆ ವಾಹನ ಓಡಾಟಕ್ಕೆ ನಿರ್ಬಂಧವಿದೆ.

ರಾತ್ರಿ 12 ಗಂಟೆ ನಂತರ ಸಂಚರಿಸುವ ವಾಹನಗಳು ಸರ್ವಿಸ್ ರಸ್ತೆ ಮೂಲಕ ದಾಸರಹಳ್ಳಿ, ಪೀಣ್ಯ (Peenya ), ಜಾಲಹಳ್ಳಿ ಕ್ರಾಸ್ ಮೂಲಕ ಗೊರಗುಂಟೆಪಾಳ್ಯ ತಲುಪುವಂತೆ ರಸ್ತೆ ಬದಲು ಮಾಡಲಾಗಿದೆ. ಇನ್ನು ಗೊರಗುಂಟೆಪಾಳ್ಯದಿಂದ ಔಟರ್ ರಿಂಗ್ ರೋಡ್ ಬಳಸಿ ನಗರದಿಂದ ಹೊರ ಹೋಗುವುದು ಹಾಗೂ ನಗರಕ್ಕೆ ಬರುವ ವಾಹನಗಳು ಮಾದಾವಾರ ಬಳಿ ನೈಸ್ ರಸ್ತೆ ಬಳಸಿಕೊಂಡು ಬರಬೇಕೆಂದು ಸೂಚಿಸಲಾಗಿದೆ. ಕೆಲದಿನಗಳ ಹಿಂದೆಯಷ್ಟೇ ಪೀಣ್ಯ ಮೇಲ್ಸೇತುವೆ (Peenya Flyover Closed) ವಾಹನ ಸಂಚಾರಕ್ಕೆ ಮುಕ್ತಗೊಂಡಿತ್ತು. ಆದರೆ ಸೇತುವೆಯ ಸುರಕ್ಷತೆ ದೃಷ್ಟಿಯಿಂದ ಭಾರಿ ವಾಹನಗಳನ್ನು ಒಡಿಸಲು ಅನುಮತಿ ನೀಡಿರಲಿಲ್ಲ.

ಇದನ್ನೂ ಓದಿ : ಕೊರೋನಾ ಬಳಿಕ ಮೊದಲ ಕರಗ : ಉತ್ಸವಕ್ಕೆ ಭರದಿಂದ ನಡೆದಿದೆ ಸಿದ್ಧತೆ

ಇದನ್ನೂ ಓದಿ : BMTC PASS : ಬಿಎಂಟಿಸಿ ಪ್ರಯಾಣಕ್ಕೆ ಪಾಸ್ ಬೇಡ, ಟಿಕೇಟ್ ಬೇಡ : ಮೊಬೈಲ್ ಜೊತೆಗಿದ್ದರೆ ಸಾಕು

( Peenya Flyover Closed : Night traffic on Peenya Elevated Flyover is prohibited)

Comments are closed.