Congress : ಕಾಂಗ್ರೆಸ್ ಆತ್ಮಾವಲೋಕನ ಸಭೆ : ದೆಹಲಿಗೆ ದೌಡಾಯಿಸಿದ ಡಿಕೆಶಿ

ಬೆಂಗಳೂರು : ಪಂಚ ರಾಜ್ಯಗಳ ಚುನಾವಣೆ ಸೋಲಿನ ಹಿನ್ನೆಲೆ ಕಾಂಗ್ರೆಸ್ (Congress) ಹೈಕಮಾಂಡ್ ಆತ್ಮಾವಲೋಕ ಸಭೆ ನಡೆಸಲು ಮುಂದಾಗಿದೆ. ಇಂದು ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಕಾರ್ಯಕಾರಿಣಿ ಸಭೆ ನಡೆಸಲಿದೆ. ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮತ್ತು ಉಸ್ತುವಾರಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚುನಾವಣೆ ನಡೆದ 5 ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರು ಮತ್ತು ಉಸ್ತುವಾರಿಗಳ ತಲೆದಂಡವಾಗಲಿದೆ.

ಯುಪಿ ಚುನಾವಣಾ ಉಸ್ತುವಾರಿ ಪ್ರಿಯಾಂಕಾ ಗಾಂಧಿಗೂ ರಾಜೀನಾಮೆ ನೀಡಲು ಸೂಚನೆ ಸಾಧ್ಯತೆ ಇದ್ದು, ಕಾಂಗ್ರೆಸ್ (Congress) ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಅಲ್ಲದೇ ಎಐಸಿಸಿ ಅಧ್ಯಕ್ಷರ ನೇಮಕ, ಎಐಸಿಸಿ ಪುನರ್ ರಚನೆಗೆ ನಿರ್ಧಾರ ಸಾಧ್ಯತೆ ಇದೆ. ಇದರೊಂದಿಗೆ 2023 ರ ವಿಧಾನಸಭಾ ಚುನಾವಣೆಯಿರೋದರಿಂದ ಕರ್ನಾಟಕದ ರಾಜಕೀಯದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ನಾಳೆಯ ಸಭೆಯಲ್ಲಿ ಕಾಂಗ್ರೆಸ್ ಆಂತರಿಕ ಕಚ್ಚಾಟ ಹಾಗೂ ಮುಖಂಡರ ನಡುವಿನ ವೈಮನಷ್ಯದ ಬಗ್ಗೆಯೂ ಚರ್ಚೆ ನಡೆಯಲಿದ್ದು, ಕಾಂಗ್ರೆಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಪಂಜಾಬ್ ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ ಚನ್ನಿ-ಸಿಧು ನಡುವಿನ ಒಳಜಗಳಕ್ಕೆ ಬಲಿಯಾಗಿ ಅಧಿಕಾರ ಕಳೆದುಕೊಂಡಿದೆ. ಇದೇ ರೀತಿ ಕರ್ನಾಟಕದಲ್ಲೂ ಮಾಜಿಸಿಎಂ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ (DK Sivakumar) ನಡುವೆ ಶೀತಲ ಸಮರ ಹಾಗೂ ಆಂತರಿಕ ಕಚ್ಚಾಟವಿದೆ. ಹೀಗಾಗಿ ಕರ್ನಾಟಕದ ಈ ವಿಚಾರವೂ ರವಿವಾರ ನಡೆಯಲಿರುವ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ಅಧಿಕಾರಕ್ಕೆ ಬರಬೇಕು ಹೀಗಾಗಿ ಎಲ್ಲ ಆಂತರಿಕ‌ ಕಚ್ಚಾಟಗಳನ್ನು ಬದಿಗಿಟ್ಟು ಅಧಿಕಾರಕ್ಕೆರುವ ಬಗ್ಗೆ ಪ್ರಯತ್ನ ನಡೆಸಲು ರಾಜ್ಯದ ನಾಯಕರಿಗೆ ಸೂಚಿಸಲಿದ್ದಾರಂತೆ.

ಇದಲ್ಲದೇ ಶತಾಯ ಗತಾಯ ಕರ್ನಾಟಕದಲ್ಲಿ ಅಧಿಕಾರಕ್ಕೇರಲೇ ಬೇಕೆಂದುಕೊಂಡಿರೋ ಕಾಂಗ್ರೆಸ್ (Congress) ಹೈಕಮಾಂಡ್ ಇದಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾಯಿಸಲಿದೆ ಎಂಬ ಮಾತು ಕೇಳಿಬಂದಿದೆ. ಸದ್ಯ ರಣದೀಪ್ ಸುರ್ಜೆವಾಲಾ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ನಾಳೆ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಸಭೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಧಿಡೀರ್ ದೆಹಲಿಗೆ ದೌಡಾಯಿಸಿದ್ದಾರೆ‌

ಹೈಕಮಾಂಡ್ ಸೂಚನೆ ಮೇರೆಗೆ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿರೋದು ಈ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಪಂಚ ರಾಜ್ಯದಲ್ಲಿ ಮುಖಭಂಗ ಅನುಭವಿಸಿರೋ ಕಾಂಗ್ರೆಸ್ ಗೆ ಕೆಲವೇ ಕೆಲವು ರಾಜ್ಯಗಳು ಮಾತ್ರ ಸದ್ಯ ಉಳಿದುಕೊಂಡಿದೆ. ಅದರಲ್ಲಿ ಕರ್ನಾಟಕ ಕೂಡ ಒಂದು.‌ ಇದೇ ಕಾರಣಕ್ಕೆ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಲು ಡಿಕೆಶಿಯನ್ನು ಹೈಕಮಾಂಡ್ ಕರೆಸಿಕೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಪಂಚ ರಾಜ್ಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ಗೆ ಶಾಕ್‌ : ಕೈಗೆ ಇಬ್ರಾಹಿಂ, ರೋಷನ್‌ ಬೇಗ್‌ ಗುಡ್‌ಬೈ

ಇದನ್ನೂ ಓದಿ : ಪಂಚ ರಾಜ್ಯ ಚುನಾವಣೆ ಎಫೆಕ್ಟ್: ಸಚಿವ ಸಂಪುಟ ಸಭೆಯಲ್ಲೇ ಎಲೆಕ್ಷನ್ ಪ್ಲ್ಯಾನಿಂಗ್

(Congress introspective meeting DK Sivakumar travel Delhi)

Comments are closed.