House Cooling Tips : ಬೇಸಿಗೆಯಲ್ಲಿ ನಿಮ್ಮ ಮನೆಯ ಒಳಾಂಗಣವನ್ನು ತಂಪಾಗಿರಿಸಬೇಕೆ? ಅದಕ್ಕೆ ಇಲ್ಲಿದೆ ಟಿಪ್ಸ್‌

ಭಾರತದ ಉಷ್ಣ ಹವಾಮಾನವು ತೀವ್ರವಾದ ಬಿಸಿಲಿಗೆ ಗುರಿಯಾಗುವಂತೆ ಮಾಡುತ್ತದೆ (House Cooling Tips). ಹೆಚ್ಚುತ್ತಿರುವ ತಾಪಮಾನ, ಮಳೆ ಮತ್ತು ಶುಷ್ಕ ಬಿಸಿ ಗಾಳಿಯು ಭಾರತದ ಬೇಸಿಗೆಯಲ್ಲಿ ವಿಶಿಷ್ಟವಾದ ಅನುಭವ ನೀಡುತ್ತದೆ. ಆದರೆ, ಆಧುನಿಕ ಜಗತ್ತು ಇಂತಹ ವಾತಾವರಣದ ಸಂದರ್ಭಗಳಲ್ಲಿ ಸರಳ ಪರಿಹಾರಗಳನ್ನು ಒದಗಿಸಿದೆ. ಏರ್‌ ಕಂಡಿಷನ್‌, ಇದು ಬೇಸಿಗೆಯ ಬಿಸಿಯಿಂದ ದೂರವಿರಲು ಜನರ ಅತಿ ಪ್ರಿಯವಾದ ಮಾರ್ಗವಾಗಿದೆ.

ಆದರೆ ಏರ್‌ ಕಂಡೀಷನ್‌ ಮನೆಯನ್ನು ತಂಪಾಗಿರಿಸುವ ಅಂತಿಮ ಉಪಾಯ ಎಂದು ಪರಿಗಣಿಸಲಾಗಿಲ್ಲ. ಏಕೆಂದರೆ ನೈಸರ್ಗಿಕ ದಾರಿಗೇ ಆದ್ಯತೆ ನೀಡುವುದು ಉತ್ತಮ. ನಿಷ್ಕ್ರಿಯ ಕೂಲಿಂಗ್‌ ತಂತ್ರಗಳನ್ನು ಬಳಸಿ ಒಳಾಂಗಣದಲ್ಲಿ ತಣ್ಣನೆಯ ವಾತಾವರಣ ಸೃಷ್ಟಿಯು ಗಮನಾರ್ಹವಾಗಿ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವೂ ಈ ಎಲ್ಲಾ ತಂತ್ರಗಳನ್ನು ಬಳಸಿ ಮನೆಯ ಒಳಾಂಗಣ ತಾಪಮಾನವನ್ನು ಸೂಕ್ತವಾಗಿ ಬಗೆಹರಿಸಿಕೊಳ್ಳಿ.

ಇದನ್ನೂ ಓದಿ : tulsi vastu tips : ತುಳಸಿ ಗಿಡದ ಸಮೀಪ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ

ಗಾಢ ಬಣ್ಣದ ಪರದೆಗಳನ್ನು ಬಳಸಿ:
ಮನೆಯೊಳಗಿನ ಬಿಸಿ ಕಡಿಮೆ ಮಾಡುವ ಸುಲಭದ ಉಪಾಯವೆಂದರೆ ಸೂರ್ಯನ ಶಾಖವನ್ನೇ ಬರದಂತೆ ತಡೆಯುವುದು. ನಿಮ್ಮ ಮನೆಯಲ್ಲಿ ಕಿಟಕಿಗಳು ದಕ್ಷಿಣ ಮತ್ತು ಪೂರ್ವದ ಕಡೆಗೆ ಇದ್ದರೆ ಅದನ್ನು ಗಾಢ ಬಣ್ಣಗಳ ಪರದೆಯಿಂದ ಮುಚ್ಚಿಬಿಡಿ. ಗಾಢ ಬಣ್ಣದ ಪರದೆಗಳು ಶಾಖ ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ಈ ತಂತ್ರದಿಂದ ಒಳಾಂಗಣ ಕಡಿಮೆ ಉಷ್ಣತೆಯನ್ನು ಹೊಂದುವುದು, ಏರ್‌ ಕಂಡೀಷನ್‌ ಮಾಡಲು ಸಹಾಯ ಮಾಡುತ್ತದೆ.

ಪ್ಯಾನ್‌ ಮುಂದೆ ತಣ್ಣಗಿನ ನೀರಿನ ಪಾತ್ರೆ ಇಡಿ :
ಪ್ಯಾನ್‌ ಮುಂದೆ ಐಸ್‌ ವಾಟರ್‌ ಅಥವಾ ಐಸ್‌ ಪೀಸ್‌ಗಳನ್ನು ಇಡುವುದು ಕೋಣೆಯನ್ನು ತಂಪಾಗಿರಿಸುವ ಒಂದು ಶಾಸ್ತ್ರೀಯ ಪದ್ಧತಿಯಾಗಿದೆ. ಈ ತಂತ್ರವನ್ನು ಬಹಳಷ್ಟು ವರ್ಷಗಳಿಂದ ಹಲವಾರು ಮನೆಗಳಲ್ಲಿ ಮಾಡುತ್ತಲೇ ಬಂದಿದ್ದಾರೆ ಮತ್ತು ಇದು ಪರಿಣಾಮಕಾರಿಯೂ ಹೌದು. ಈ ತಂತ್ರವು ವೈಜ್ಞಾನಿಕವಾಗಿಯೂ ಸರಿಯಾಗಿಯೇ ಇದೆ. ತಣ್ಣಗಿನ ವಸ್ತುಗಳನ್ನು ಗಾಳಿಯ ಮುಂದೆ ಇಟ್ಟರೆ ತಂಗಾಳಿಯಾಗಿ ಪರಿವರ್ತನೆಯಾಗುವುದು. ಇನ್ನೊಂದು ಮುಖ್ಯ ಟಿಪ್ಸ್‌ ಅಂದರೆ ಆಗ ನೀವು ಕಿಟಕಿಗಳನ್ನು ಮುಚ್ಚಿ, ಏಕೆಂದರೆ ತಂಗಾಳಿಯು ಕೋಣೆಯಲ್ಲಿಯೇ ಇರುವಂತಾಗಲು ಸಹಾಯವಾಗುತ್ತದೆ. ಫಾನ್‌ ಗಾಳಿಗೆ ನೇರವಾಗಿ ಕುಳಿತುಕೊಳ್ಳುವುದರಿಂದ ಕಣ್ಣಿನ ಉರಿ ಜಾಸ್ತಿಯಾಗುತ್ತದೆ. ಅದನ್ನು ತಪ್ಪಿಸಿ.

ರಾತ್ರಿ ಮನೆಯೊಳಗೆ ಗಾಳಿ ಬರುವಂತೆ ನೋಡಿಕೊಳ್ಳಿ :
ಬೇಸಿಗೆಯಲ್ಲಿ ರಾತ್ರಿಯಲ್ಲಿ ಬೀಸುವ ಗಾಳಿ ತಂಪಾಗಿರುತ್ತದೆ. ನೀವು ಅದರ ಲಾಭ ಪಡೆದುಕೊಳ್ಳಿ. ನಿಮ್ಮ ಕೋಣೆಯ ಕಿಟಕಿ ಮತ್ತು ವೆಂಟಿಲೇಷನ್‌ ಗಳನ್ನು ತೆರೆಯುವುದರಿಂದ ತಂಗಾಳಿಯು ಸರಾಗವಾಗಿ ನಿಮ್ಮ ಕೋಣೆಯನ್ನು ಪ್ರವೇಶಿಸುವಂತೆ ಮಾಡಿ. ನೈಸರ್ಗಿಕವಾದ ತಂಗಾಳಿಯು ಒಳಾಂಗಣವನ್ನು ಉಷ್ಣತೆಯಿಂದ ತಂಪಾಗಿಸುವುದು.

ಇದನ್ನೂ ಓದಿ : Baby Cough Home Remedy : ಮಕ್ಕಳ ಕೆಮ್ಮಿಗೆ ಮನೆಮದ್ದಿನಲ್ಲಿದೆ ಪರಿಹಾರ

(House Cooling Tips Keep the house cool in the scorching summer)

Comments are closed.